ಸಿದ್ಧಗಂಗಾ ಕೃಷಿ ಕೈಗಾರಿಕಾ ವಸ್ತುಪ್ರದರ್ಶನ ಸುವರ್ಣ ಮಹೋತ್ಸವ 

ತುಮಕೂರು:


ಸಿದ್ಧಗಂಗಾ ಮಠದ ಕೃಷಿ ಮತ್ತು ಕೈಗಾರಿಕಾ ವಸ್ತುಪ್ರದರ್ಶನದ ಸುವರ್ಣ ಮಹೋತ್ಸವ ಸಮಾರಂಭ ಫೆ.26ರಂದು ಬೆಳಿಗ್ಗೆ 11ಕ್ಕೆ ವಸ್ತುಪ್ರದರ್ಶನದ ರಂಗಮಂದಿರದಲ್ಲಿ ಏರ್ಪಡಿಸಲಾಗಿದೆ.

ಸಿದ್ಧಗಂಗಾ ಮಠಾಧ್ಯಕ್ಷ ಶ್ರೀಸಿದ್ಧಲಿಂಗಸ್ವಾಮೀಜಿ ಸಾನಿಧ್ಯವಹಿಸಲಿದ್ದು, ಕನ್ನಡ ಮತ್ತು ಸಂಸ್ಕøತಿ ಇಂಧನ ಖಾತೆ ಸಚಿವ ವಿ.ಸುನಿಲ್‍ಕುಮಾರ್ ಸವರ್ಣ ದರ್ಶನ ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು.

ಮುಖ್ಯ ಅತಿಥಿಗಳಾಗಿ ಜವಳಿ, ಸಕ್ಕರೆ ಖಾತೆ ಸಚಿವ ಶಂಕರ್ ವಿ.ಪಾಟೀಲ್, ಕರ್ನಾಟಕ ಪ್ರದೇಶ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್, ಕೆಆರ್‍ಐಡಿಎಲ್ ಅಧ್ಯಕ್ಷ ಎಂ.ರುದ್ರೇಶ್ ಭಾಗವಹಿಸುವರು ಎಂದು ಸಮಿತಿ ಪ್ರಕಟಣೆ ತಿಳಿಸಿದೆ.

ವಸ್ತು ಪ್ರದರ್ಶನದ ಸುವರ್ಣಪಥ:

ಸಿದ್ಧಗಂಗಾ ಮಠದಲ್ಲಿ ಕಳೆದ 58 ವರ್ಷಗಳಿಂದಲೂ ಶ್ರೀಸಿದ್ಧಲಿಂಗೇಶ್ವರ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಏರ್ಪಡಿಸಿಕೊಂಡು ಬಂದಿದ್ದು ಸಿದ್ಧಗಂಗೆ ಪೂಜ್ಯ ಲಿಂಗೈಕ್ಯ ಡಾ.ಶ್ರೀ.ಶಿವಕುಮಾರಸ್ವಾಮೀಜಿ

ಅವರ ದೂರದರ್ಶಿತ್ವ ಹಾಗೂ ಸೇವಾಕೈಂಕರ್ಯದ ಫಲವಾಗಿ ಸಣ್ಣ ಪ್ರಮಾಣದಲ್ಲಿ ಪ್ರಾರಂಭವಾದ ವಸ್ತುಪ್ರದರ್ಶನವು ಬೃಹದಾಕಾರವಾಗಿ ಬೆಳೆದು ಗ್ರಾಮೀಣ ಭಾಗದ ಬೃಹತ್ ವಸ್ತಿಪ್ರದರ್ಶನವೆಂಬ ಹೆಗ್ಗಳಿಗೆ ಪಾತ್ರವಾಗಿ, ಪ್ರಸ್ತುತ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗಸ್ವಾಮೀಜಿ ಅವರ ಮಾರ್ಗದರ್ಶನ ಮತ್ತು ಆಶೀರ್ವಾದದೊಂದಿಗೆ ಪ್ರತೀ ವರ್ಷ ಶಿವರಾತ್ರಿ ಸಂದರ್ಭದಲ್ಲಿ 15 ದಿವಸಗಳಿಂದ ಲಕ್ಷಾಂತರ ಭಕ್ತರು, ರೈತರು ಪ್ರವಾಸಿಗರಿಂದ ವೀಕ್ಷಿಸಲ್ಪಡುತ್ತಿದೆ.

             ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link