ತುಮಕೂರು:
ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಅಚ್ಚರಿ, ನಡೆದಾಡುವ ದೇವರ ಆರೋಗ್ಯದಲ್ಲಿ ಪವಾಡಸದೃಶ ಚೇತರಿಕೆ ಕಂಡಿದೆ. ವೈದ್ಯಕೀಯ ಲೋಕವೇ ಬೆಚ್ಚಿಬೀಳಿಸುವ ರೀತಿ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಶೇಕಡ 3ರಷ್ಟು ಪ್ರೊಟೀನ್ ಉತ್ಪಾದನೆ ಕಂಡು ವೈದ್ಯರಿಗೆ ಅಚ್ಚರಿ ಮೂಡಿಸಿದೆ. ಪ್ರೊಟೀನ್ ಅಂಶ ಉತ್ಪಾದನೆ ಆಗುತ್ತಿಲ್ಲ ಎಂದು ಕಂಗಾಲಾಗಿದ್ದ ವೈದ್ಯರು ಈಗ ದಿಢೀರ್ ಪ್ರೊಟೀನ್ ಉತ್ಪಾದನೆ ಹಿನ್ನೆಲೆ ಆಕ್ಟೀವ್ ಆಗಿದ್ದಾರೆ.ಶ್ರೀ ಗಳ ಆರೋಗ್ಯದಲ್ಲಿ ಚೇತರಿಕೆ ಹಿನ್ನೆಲೆ ಬೆಟ್ಟದ ಮೇಲಿರುವ ಸಿದ್ದಲಿಂಗೇಶ್ವರನಿಗೆ ಶ್ರೀಗಳು ಇನ್ನೂ ಹೆಚ್ಚು ಗುಣಮುಖ ಆಗಲ್ಲಿ ಎಂದು ವಿಶೇಷ ಪೂಜೆ ಸಲ್ಲಿಸಿದ ಕಿರಿಯ ಶ್ರೀಗಳು.