ತುಮಕೂರು
ಜಿಲ್ಲೆಯ ಪ್ರಸಿದ್ಧ ಪುಣ್ಯ ಕ್ಷೇತ್ರ ಎಡೆಯೂರು ಸಿದ್ದಲಿಂಗೇಶ್ವರರ ನಿರ್ವಿಕಲ್ಪ ಸಮಾಧಿ ಸ್ಥಳ ಅಕ್ಷರ ಸಹ ಶಕ್ತಿ ಸ್ಥಳ, ಇಲ್ಲಿಗೆ ನಿತ್ಯ ಸಾವಿರಾರು ಭಕ್ತರು ದೇವರ ದರ್ಶನಕ್ಕೆಂದು ಬರುತ್ತಾರೆ. ಕ್ಷೇತ್ರದ ಅಭಿವೃದ್ಧಿಗೆ ಬಿ ಎಸ್ ಯೆಡೆಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಕೋಟಿ ಕೋಟಿ ಅನುದಾನ ನೀಡಿ ಅಭಿವೃದ್ಧಿ ಪಡಿಸಿರುತ್ತಾರೆ. ಈ ಪೈಕಿ ರಥ ಬೀದಿಯು ಒಂದು ವಿಶಾಲವಾದ ರಥಬೀದಿಯಲ್ಲಿ ಒಮ್ಮೆಲೇ ನೂರಾರು ವಾಹನಗಳನ್ನು ಏಕ ಕಾಲಕ್ಕೆ ನಿಲ್ಲಿಸಲು ಅವಕಾಶವಿದ್ದರು ಇಲ್ಲಿ ಗೆ ಎಲ್ಲರನ್ನು ಬಿಡುವುದಿಲ್ಲ. ಅವರಿಗೆ ಬೇಕಾದ ವಿ ಐ ಪಿ ಗಳನ್ನು ಮಾತ್ರ ಬಿಡುತ್ತಾರೆ ಇದು ಇಲ್ಲಿನ ಪಾರ್ಕಿಂಗ್ ಟೆಂಡರ್ ತೆಗೆದುಕೊಂಡಿರುವವರ ಲಾಭಿಯಂತೆ. ವೃಥಾ ಸುಮ್ಮನೆ ಬ್ಯಾರಿಕೆಡಗಳನ್ನು ಹಾಕಿ ಸದಾ ರಸ್ತೆಯನ್ನು ಮುಚ್ಚಿರುತ್ತಾರೆ ಅವರಿಗೆ ಬೇಕಾದವರಿಗೆ ಹಾಗೂ ಸ್ಥಳೀಯ ಆಟೋದವರಿಗೆ ಕೆ ಎಸ್ ಆರ್ ಟಿ ಸಿ ಬಸ್ ನವರಿಗೆ ದೇವಾಲಯದ ಮುಂದಕ್ಕೆ ಹೋಗುವಂತೆ ಬಿಡುತ್ತಾರೆ ಇದನ್ನು ಪ್ರಶ್ನಿಸಿದರೆ ಇಲ್ಲಿನ ಸಿಬ್ಬಂದಿ ಧಮ್ಕಿ ಹಾಕುತ್ತಾರೆ, ಇಲ್ಲಿ ಇವರನ್ನ ಹೇಳೋರು ಕೇಳೋರು ಯಾರು ಇಲ್ಲ,
ಇನ್ನೊಂದು ದೇವರ ಧರ್ಶನಕ್ಕೆಂದು ಕ್ಯೂ ವ್ಯವಸ್ಥೆಯನ್ನು ಮಾಡಲಾಗಿದೆ ಇದರಿಂದ ಎಲ್ಲರಿಗೂ ಅನುಕೂಲ ಆದರೆ ದೇವರ ದರ್ಶನವಾದ ನಂತರ ನೂತವಾಗಿ ನಿರ್ಮಾಣವಾಗಿರುವ ರುದ್ರಾಭಿಷೇಕ ನೆಡೆಯುವ ಹಾಲ್ ನ್ನು ಬ್ಯಾರಿಕೆಡ್ ಹಾಕಿ ಮುಚ್ಚಲಾಗಿದೆ ಇಲ್ಲಿಗೆ ಸಾಮಾನ್ಯ ಭಕ್ತರಿಗೆ ಪ್ರವೇಶವಿಲ್ಲ, ಇದಕ್ಕೆ ಕಾರಣ ಗೊತ್ತಿಲ್ಲ
ಮೊದಲು ದೇವಾಲಯದ ರಾಜಗೋಪುರದ ಬಳಿ ನಿಂತರೆ ಸ್ವಾಮಿಯ ಗದ್ದುಗೆ ದರ್ಶನವಾಗುತ್ತಿತ್ತು ಆದರೆ ಈಗ ಬ್ಯಾರಿಕೆಡ್ ದರ್ಶನವಾಗುತ್ತದೆ ದೊಡ್ಡ ದೊಡ್ಡ ಸ್ಟೀಲ್ ಬ್ಯಾರಿಕೆಡ್ ಸದಾ ಅಡ್ಡವಿಟ್ಟುರುತ್ತಾರೆ ಇದು ಲಾಡು ಕಾಯಿ ಮಿಠಾಯಿ ಪ್ರಸಾದದವರ ಲಾಭಿಯಂತೆ ಭಕ್ತರು ದೇವರ ದರ್ಶನದ ನಂತರ ಪ್ರಸಾದ ತೆಗೆದುಕೊಳ್ಳದೆ ಹೋಗುತ್ತಾರೆ ಎಂದು ಈ ಬ್ಯಾರಿಕೆಡ್ ಅಳವಡಿಸಿದ್ದಾರಂತೆ,
ಈ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಲು ಇಲ್ಲಿ ಯಾರೂ ಸಿಗೋಲ್ಲಾವಂತೆ ಸಿಕ್ಕರೂ ಸ್ಪಂದಿಸುವುದಿಲ್ಲವಂತೆ,
ರಾಜ್ಯದಲ್ಲೇ ಹೆಸರುವಾಸಿಯಾದ ದೇವಾಲಯ ಇದಾಗಿದ್ದು ಯಾಕೆ ಇಲ್ಲಿ ಆಡಳಿತ ವ್ಯವಸ್ಥೆ ಹದಗೆಟ್ಟಿದೆ ಅಧಿಕಾರಿಗಳ ಜಾಣ ಮೌನಕ್ಕೆ ಕಾರಣವೇನು ಎಂಬುದೇ ಯಕ್ಷ ಪ್ರಶ್ನೆಯಾಗಿದೆ, ಬಾನುವಾರ ಭಕ್ತರು ಹೆಚ್ಚಾಗಿ ಬರುವುದರಿಂದ ಎಲ್ಲರಿಗೂ ಧರ್ಶನವ್ಯವಸ್ಥೆ ಕಲ್ಪಿಸುವುದು ಇಲ್ಲಿನ ಸಿಬ್ಬಂದಿಗೆ ಸ್ವಲ್ಪ ಕಷ್ಟದ ಕೆಲಸವೇ ಸರಿ ಆದರೆ ವಿಶೇಷ ಧರ್ಶನಕ್ಕೆಂದು ಟಿಕೆಟ್ ಪಡೆದ ಭಕ್ತರನ್ನು ಸಾಮಾನ್ಯ ಕ್ಯೂ ನಲ್ಲಿ ಬನ್ನಿ ಎಂದು ಗದರಿಸಿ ಕಳಿಸಿದ ಪ್ರಸಂಗ ನೆಡೆದಿದೆ ಅವರ ಕಣ್ಣ ಮುಂದೆಯೇ ಹತ್ತು ಹದಿನೈದು ಜನರನ್ನು ನೇರವಾಗಿ ಒಳಗೆ ಬಿಟ್ಟ ಪ್ರಸಂಗ ಕಂಡು ಅವರು ಬೇಸರ ವ್ಯಕ್ತಪಡಿಸಿದರು ವ್ಯವಸ್ಥೆಯನ್ನು ಸರಿ ಪಡಿಸಲು ಜಿಲ್ಲಾಧಿಕಾರಿಗಳು ಕ್ರಮ ಜರುಗಿಸಬೇಕೆಂದು ಅಗ್ರಹಪಡಿಸಿದ್ದಾರೆ,








