ಸಿದ್ದಾಪುರ:
ರೈತರಿಗೆ ತಮ್ಮ ಊರಿನಲ್ಲಿಯೇ ಒಂದೇ ಸೂರಿನ ಅಡಿಯಲ್ಲಿ ದಿನ ಬಳಕೆ ಸಾಮಾಗ್ರಿಗಳು ಸಿಗಬೇಕು ಎಂಬ ಉದ್ದೇಶದಿಂಧ ಕಾನಸೂರು ಸೇವಾ ಸಹಕಾರಿ ಸಂಘ ಶುಕ್ರವಾರದಿಂದ ಮೂರು ದಿನಗಳ ಕಾಲ ಬೃಹತ್ ವಸ್ತು ಪ್ರದರ್ಶನ ಹಾಗೂ ಮಾರಾಟ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಸಂಘದ ಅಧ್ಯಕ್ಷ ಜಿ.ಜಿ.ಹೆಗಡೆ ದೇವಿಸರ ಅವರು ರಿಬ್ಬನ್ ಕತ್ತರಿಸುವುದರ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ರೈತರು ಇರುವಲ್ಲಿಯೇ ಸಂಘವನ್ನು ತೆಗೆದುಕೊಂಡು ಹೋಗಿ ಅವರಿಗೆ ಉಪಯುಕ್ತ ವಸ್ತುಗಳನ್ನು ನೀಡುವ ಉದ್ದೇಶದಿಂದ ಈ ಮೇಳವನ್ನು ಆಯೋಜಿಸಲಾಗಿದೆ. ನಮ್ಮ ಜೊತೆ ಹಲವಾರು ಕಂಪನಿಗಳು ಕೈಜೋಡಿಸಿದ್ದು ಶುಕ್ರವಾರದಿಂದ ಮೂರು ದಿನಗಳ ಕಾಲ ನಡೆಯಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಹರಿನಾರಾಯಣ ಭಟ್, ಬಾಲಚಂದ್ರ ಹೆಗಡೆ, ನಾಗರಾಜ ಹೆಗಡೆ, ಭಾಸ್ಕರ ಹರಿಜನ, ಶಶಿಪ್ರಭಾ ಹೆಗಡೆ, ನಾಗಪತಿ ನಾಯ್ಕ , ನಾರಾಯಣ ನಾಯ್ಕ, ಮುಖ್ಯಕಾರ್ಯನಿರ್ವಹಣಾಧಿಕಾರಿ ವಿನಾಯಕ ಹೆಗಡೆ ಕಲ್ಕಟ್ಟೆ ಹಾಗೂ ಸಿಬ್ಬಂದಿಗಳು, ಸದಸ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.








