ಬೆಂಗಳೂರು:
ಅಗತ್ಯ ವಸ್ತುಗಳ ಬೆಲೆ ಏರಿಕೆ ಕುರಿತು ಕಾಂಗ್ರೆಸ್ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಭಾಷಣದ ವೇಳೆ ಮಾತಿನ ಭರಾಟೆಯಲ್ಲಿ ‘ಕಾಂಗ್ರೆಸ್ ಮುಕ್ತ ಭಾರತ’ಕ್ಕೆ ಕರೆ ನೀಡಿ ಪೇಚೆಗೆ ಸಿಲುಕಿದ ಪ್ರಸಂಗ ನಡೆಯಿತು.
ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಟೀಕಿಸುವ ಭರದಲ್ಲಿ ಕಾಂಗ್ರೆಸ್ ಮುಕ್ತ ಭಾರತ ಮಾಡಬೇಕು ಎಂದು ಹೇಳಿ ನಂತರ ಕ್ಷಮಿಸಿ ಬಿಜೆಪಿ ಮುಕ್ತ ಭಾರತ ಎಂದು ಹೇಳಲು ಹೋಗಿ ಕಾಂಗ್ರೆಸ್ ಮುಕ್ತ ಅಂದುಬಿಟ್ಟೆ ಎಂದು ಹೇಳಿದರು.
ಕರ್ನಾಟಕದಲ್ಲಿ ಮತ್ತೊಂದು ʻ ಧರ್ಮ ದಂಗಲ್ ʼ : ಬೆಂಗಳೂರಿನ ರಸ್ತೆಗಳ ʻ ಮುಸ್ಲಿಂ ಹೆಸರು ʼ ಬದಲಾವಣೆಗೆ ಬಿಗ್ ಫೈಟ್
ಸಿದ್ದರಾಮಯ್ಯ ಅವರು ಆ ಮಾತು ಹೇಳುತ್ತಿದ್ದಂತೆ ವೇದಿಕೆಯ ಮುಂಭಾಗದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡರು ಒಬ್ಬರ ಮುಖ ಮತ್ತೊಬ್ಬರು ನೋಡಿಕೊಳ್ಳ ತೊಡಗಿದರು. ಇನ್ನೂ ಕೆಲವರು ನೇರ ಪ್ರಸಾರ ಮಾಡುತ್ತಿದ್ದ ಮಾಧ್ಯಮಗಳ ಕ್ಯಾಮರಾ ಅತ್ತ ದಿಟ್ಟಿಸಿ ನೋಡಿದರು. ಕೂಡಲೇ ಸಿದ್ದರಾಮಯ್ಯ ಕ್ಷಮಿಸಿ ಅಂತಹದ್ದೇನು ತಪ್ಪಾಗಿಲ್ಲ ಎಂದು ಹೇಳಿ ಮತ್ತೆ ಮಾತು ಮುಂದುವರಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ