ಸ್ವಗ್ರಾಮದಲ್ಲಿ ಸಿದ್ದರಾಮಯ್ಯ ‘ವೀರ ‘ಕುಣಿತ ..

ಇಷ್ಟು ದಿನ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಸದನದಲ್ಲಿ ಅಬ್ಬರಿಸುತ್ತಿದ್ದನ್ನ ನೀವು ನೋಡಿದ್ದೀರ . ಆದ್ರೆ ಯಾವತ್ತಾದ್ರೂ ಲುಂಗಿ ಮೇಲ್ ಕಟ್ಟಿ , ಯಾವ ಡ್ಯಾನ್ಸರ್‌ಗೂ ಕಮ್ಮಿ ಇಲ್ಲ ಎಂಬಂತೆ ಯುವಕ , ಯುವತಿಯರನ್ನ ನಾಚಿಸುವಂತೆ ಕುಣಿದಿದ್ದನ್ನ ನೋಡಿದ್ದೀರಾ ? ನೋ ವೇ ಚಾನ್ಸೆ ಇಲ್ಲ ಅಂತೀರಾ ಅಲ್ವಾ ?

https://youtu.be/SynGtLf4LRc

ಆದ್ರೆ ನಿನ್ನೆ ಮಾತ್ರ ಸಿದ್ದರಾಮಯ್ಯ ಸ್ಟೆಪ್ ನೋಡಿದವರೆಲ್ಲಾ ಒನ್ಸ್ ಮೋರ್ .. ಒನ್ಸ್ ಮೋರ್ ಅಂತಿದ್ರು ! ಹೌದು .. ಸಿದ್ದರಾಮಯ್ಯ ಅಂದ್ರೆ ಎಲ್ಲಿಗೂ ನೆನಪಾಗೋದು ಅವ್ರ ಮಾತಿನ ಶೈಲಿ , ಪಕ್ಕಾ ಹಳ್ಳಿ ಸೊಗಡಿನ ರಾಜಕೀಯ ಮುತ್ಸದ್ಧಿ , ಅಷ್ಟೇ ಅಲ್ಲಾ ಜಾನಪದ ಕಲೆಯ ಒಡನಾಡಿ , ಜೊತೆಗೆ ಒಬ್ಬ ಹಳ್ಳಿಗಳಲ್ಲಿ ದೇವು , ದಿಂಡ್ರು , ಜಾತ್ರೆಯಂತ ಆನಂದದ ಸಮಯಲ್ಲಿ ಎಲ್ಲರ ಜೊತೆ ಸೇರಿ ಸಖತ್ತಾಗಿರುವ ಒಂದೆರಡು ಕುಣಿತ ಹಾಕುವ ಅತ್ಯಾದ್ಭುತ ಕುಣಿತಗಾರರು ಹೌದು .

ಪಠ್ಯ ಪರಿಷ್ಕರಣೆ: ಚಕ್ರತೀರ್ಥ ಅಧ್ಯಕ್ಷತೆಯ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಕೆ

ಸಿದ್ದರಾಮಯ್ಯ ಅಂದ್ರೆ ಅವರದ್ದೇ ಒಂದು ಗತ್ತು ಗಮ್ಮತ್ತು , ನಡೆ , ನುಡಿಯಲ್ಲಿ ಫೈರ್ ಬ್ಯಾಂಡ್ . ಜೊತೆಗೆ ಹಳ್ಳಿ ಸೊಗಡನ್ನ ಇನ್ನೂ ತಮ್ಮೊಳಗೆ ಉಳಿಸಿಕೊಂಡಿರುವ ಪಕ್ಕಾ ಲೋಕಲ್ ರಾಜಕಾರಣಿ . ಇದಕ್ಕೆ ಸಾಕ್ಷಿ ಎಂಬಂತಿದೆ ಸಿದ್ದರಾಮಯ್ಯರ ವೀರ ಕುಣಿತ . ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ವಗ್ರಾಮ ಮೈಸೂರು ತಾಲೂಕಿನ ಸಿದ್ದರಾಮನಹುಂಡಿ ಗ್ರಾಮದಲ್ಲಿ ಸಿದ್ದರಾಮೇಶ್ವರ ಹಾಗೂ ಚಿಕ್ಕಮ್ಮತಾಯಿ ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಿದ್ರು .

https://youtu.be/SynGtLf4LRc

ಆರು ವರ್ಷದ ನಂತರ ಜಾತ್ರೆ ನಡೆದಿದ್ದು , ಈ ಜಾತ್ರೆಯಲ್ಲಿ ಸಿದ್ದರಾಮಯ್ಯ ಭಾಗಿಯಾಗಿ , ತಮ್ಮೂರಿನ ಸ್ನೇಹಿತರ ಜೊತೆ ವೀರ ಕುಣಿತ ಕುಣಿದು ಕುಪ್ಪಳಿಸಿ , ಹಬ್ಬದ ಉತ್ಸಾಹ ಇಮ್ಮಡಿಗೊಳಿಸಿದ್ರು . ಜಾತ್ರೆಯ ಪ್ರಮುಖ ಆಕರ್ಷಣೆ ಅಂದ್ರೆ ವೀರ ಮಕ್ಕಳ ಕುಣಿತ , ಸಿದ್ದರಾಮಯ್ಯ ಬಾಲ್ಯದಿಂದಲೂ ಮೈಗೂಡಿಸಿಕೊಂಡು ಬಂದಿರುವ ಈ ವೀರ ಮಕ್ಕಳ ಕುಣಿತವನ್ನ ನೆನ್ನೆ ರಾತ್ರಿ ಕುಣಿದ್ರು . ಸಿದ್ದರಾಮನಹುಂಡಿಗೆ ಬರ್ತಿದ್ದಂತೆ ಸಿದ್ದು ನಾನು ಈ ಬಾರಿ ಕುಣಿಯಲ್ಲ ಕಣಯ್ಯ ಎಂದು ಸ್ನೇಹಿತರಿಗೆ ಹೇಳಿದ್ರು .

ಹೊಸಪೇಟೆಯಲ್ಲಿ ಕಾಂಗ್ರೆಸ್ ಡಿಜಿಟಲ್ ಸದಸ್ಯತ್ವ ನೋಂದಣಿ ಅಭಿಯಾನ ಪ್ರಗತಿ ಪರಿಶೀಲನೆ ಸಭೆ

ಆದ್ರೆ ಗ್ರಾಮಸ್ಥರು ಮಾತ್ರ ಸಾರ್ ನೀವು ಒಂದೆರಡು ಕುಣಿತ ಹಾಕ್ಷೇಬೇಕು ಅಂತ ಪಟ್ಟು ಹಿಡಿದ್ರು . ಕೊನೆಗೆ ಗ್ರಾಮಸ್ಥರ ಒತ್ತಾಯಕ್ಕೆ ಮಣಿದ ಸಿದ್ದರಾಮಯ್ಯ , ಪಂಚೆ ಎತ್ಕಟ್ಟಿ ಬರೋಬ್ಬರಿ ನಲವತ್ತು ನಿಮಿಷಗಳ ಕಾಲ ಕುಣಿದು ಗಮನ ಸೆಳೆದ್ರು . ತಾಳಕ್ಕೆ ತಕ್ಕಂತೆ ಸಿದ್ದು ಸ್ಟೆಪ್ ಹಾಕುವ ಜೊತೆಗೆ ವೀರ ಕುಣಿತದ ಪದಗಳನ್ನೂ ಹಾಡಿದ್ರು .

https://youtu.be/SynGtLf4LRc

ಸಿದ್ದರಾಮಯ್ಯನ ಕುಣಿತ ನೋಡಲು ಅವರ ಕುಟುಂಬದ ದಂಡೆ ಬಂದಿತ್ತು . ಸಿದ್ದರಾಮಯ್ಯ ಪುತ್ರ ಯತೀಂದ್ರ ಹಾಗೂ ರಾಕೇಶ್ ಪತ್ನಿ ಸೇರಿದಂತೆ ಅವರ ಬಂಧು ಬಳಗ ಗ್ರಾಮಸ್ಥರೆಲ್ಲ ಸಿದ್ದು ಸ್ಟೆಪ್ ನೋಡಲು ಮುಗಿಬಿದ್ರು . ಈ ಜಾತ್ರೆಗೆ ಸಿದ್ದರಾಮನಹುಂಡಿ ಗ್ರಾಮ ಮಾತ್ರವಲ್ಲದೇ ಪಕ್ಕದ ಹೊಸಹಳ್ಳಿ , ಕುಪ್ಪೇಗಾಲ , ಮುದ್ದೇಗೌಡನಹುಂಡಿ , ಸಹಿತ ಹತ್ತಕ್ಕೂ ಹೆಚ್ಚು ಗ್ರಾಮಗಳಿಂದ ಭಕ್ತರು ಬರ್ತಾರೆ. ನಿನ್ನೆ ಮತ್ತು ಇಂದು ಸ್ವಗ್ರಾಮದಲ್ಲೇ ವಾಸ್ತವ್ಯ ಹೂಡಲಿರುವ ಸಿದ್ದರಾಮಯ್ಯ , ಅಣ್ಣನ ಮನೆಯಲ್ಲಿಯೇ ಇದ್ದ ಅಕ್ಕ ಚಿಕ್ಕಮ್ಮ ಹಾಗೂ ಬಂಧುಗಳ ಜೊತೆ ಕೆಲಹೊತ್ತು ಕಾಲ ಕಳೆದು ರಾಜಕೀಯ ಜಂಜಾಟ ಬಿಟ್ಟು ಫುಲ್ ರಿಲ್ಯಾಕ್ಸ್ ಆದ್ರು .

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap