ಸಿದ್ದರಾಮಯ್ಯನವರೇ ಐದು ವರ್ಷ ಸಿಎಂ: ಕೆ.ಎನ್. ರಾಜಣ್ಣ

ತುಮಕೂರು:

  ಸಿದ್ದರಾಮಯ್ಯ ಅವರೇ ಐದು ವರ್ಷ ಸಿಎಂ ಆಗಿ ಮುಂದುವರೆಯುತ್ತಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಿಂದ ಖಾಲಿ ಆಗಲ್ಲ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ನುಡಿದಿದ್ದಾರೆ.

    ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನದಿಂದ ಏಕೆ ಬದಲಾಗುತ್ತಾರೆ. ಒಂದು ವರ್ಷ ಸಿದ್ದರಾಮಯ್ಯ ಕೆಲಸ ಮಾಡೋದ್ರಲ್ಲಿ ಹಿಂದೆ ಬಿದ್ದಿದ್ದಾರಾ? ಅಥವಾ ಯಾವುದಾದರೂ ಹಗರಣ ಇದಾವಾ? ಇಲ್ಲ ಅಂದಮೇಲೆ ಯಾವ ಆಧಾರದ ಮೇಲೆ ಅವರನ್ನು ಬದಲಾಯಿಸಲು ಹೋಗುತ್ತಾರೆ.

ಗ್ಯಾರಂಟಿ ಯೋಜನೆ ಮುಂದುವರಿಯಲಿದೆ ಎಂದು ಸಿದ್ದರಾಮಯ್ಯ ನವರೇ ಹೇಳಿದ್ದಾರೆ. ಹಾಗಾಗಿ ಸಿಎಂ ಸ್ಥಾನ ಬದಲಾವಣೆ ಆಗಲ್ಲ. ಹಾಗೇ ಯಾವ ಸಚಿವರ ಖಾತೆಗಳೂ ಬದಲಾವಣೆ ಆಗೋದಿಲ್ಲ ಎಂದಿದ್ದಾರೆ 

ಮೂವರು ಡಿಸಿಎಂ ಆಗಬೇಕು ಎನ್ನುವದು ನನ್ನ ನಿರಂತರ ವಾದ ಇದ್ದೇ ಇದೆ. ಈಗ ಲೋಕಲ್ ಬಾಡಿ ಚುನಾವಣೆ ಇದೆ ಹಾಗಾಗಿ ಮೂವರು ಡಿಸಿಎಂ ಬೇಕು. ಲೋಕಸಭಾ ಚುನಾವಣೆ ಇದ್ದಿದ್ದರಿಂದ ಮಲ್ಲಿಕಾರ್ಜುನ ಖರ್ಗೆ ಅವರು ಸುಮ್ಮನಿರಲು ಹೇಳಿದ್ದರು. ಹಾಗಾಗಿ ಇಷ್ಟು ದಿನ ಸುಮ್ಮನಿದ್ದೆ ಅದರ ಬಗ್ಗೆ ಮಾತಾಡಿರಲಿಲ್ಲ. ನಾನೂ ಕೂಡ ಖರ್ಗೆ ಅವರನ್ನು ಮತ್ತೆ ಖುದ್ದಾಗಿ ಭೇಟಿ ಮಾಡಿ ಈ ವಿಚಾರ ಚರ್ಚೆ ಮಾಡುತ್ತೇನೆ ಎಂದರು.

ಖರ್ಗೆ ಸಿಎಂ‌‌ ವಿಚಾರ:- ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯ ರಾಜಕಾರಣಕ್ಕೆ ಬರುತ್ತಾರೆ, ‌ಸಿಎಂ ಆಗುತ್ತಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಖರ್ಗೆ ಅವರು ಸಿಎಂ ಆಗಬೇಕು ಅನ್ನೋದನ್ನ ಅಪೇಕ್ಷೆ ಪಡೋದನ್ನು ಯಾರೂ ಅಡ್ಡಿ ಪಡಿಸೋಕೆ ಆಗಲ್ಲ. ಯಾರೂ ತಪ್ಪಿಸೋಕೂ ಆಗಲ್ಲ. ಸಿಎಂ ಆಗೋ ಸಾಧ್ಯತೆ ಇದ್ರೆ ಖರ್ಗೆ ಆಗಲೇ ಆಗುತ್ತಿದ್ದರು. ಈಗ ಆ ಲಕ್ಷಣ ಇಲ್ಲ ಎಂದರು.

ಅದು ಸೋಲಿನ ಬಳಿಕ ಸಹಜವಾಗಿ ಏಳುವ ಅಸಮಾಧಾನ. ಅದು ಸೋತವರಿಗೆ ಆಗುವ ಸಹಜ ಅಸಮಾಧಾನ, ಮುಂದೆ ಅದು ಸರಿಯಾಗಲಿದೆ ಎಂದರು.

*ಡಿಕೆ ಶಿವಕುಮಾರ್ ಸಿಎಂ ವಿಚಾರ*:- ಡಿಕೆ ಶಿವಕುಮಾರ್ ಸಿಎಂ ಆಗೋಕೆ ಸಿಎಂ ಕುರ್ಚಿ ಖಾಲಿ ಇದೆಯಾ? ಆ ಜಾಗದಲ್ಲಿ ಸಿದ್ದರಾಮಯ್ಯನವರು ಇಲ್ಲವಾ? ಖಾಲಿ ಆದನಂತರ ಯಾರನ್ನು ಮಾಡುತ್ತಾರೆ ಎಂಬ ಪ್ರಶ್ನೆ ಆ ನಂತರ ನೋಡಬೇಕು ಎಂದರು.

ಜಿಲ್ಲಾ ಉಸ್ತುವಾರಿಗಳ ಬದಲಾವಣೆ ವಿಚಾರ:- ಹಾಸನ ಜಿಲ್ಲೆ ಉಸ್ತುವಾರಿ ಬದಲಾವಣೆ ಮಾಡ್ತಾರಾ? ಮಾಡಿದ್ರೆ ಮಾಡಲಿ, ನಾನು ಯಾವಾಗಲೂ ಕೇಳಿರಲಿಲ್ಲ. ವಾಪಸ್ ತಗೊಂಡ್ರೆ ವಾಪಸ್ ತಗೊಳಲ್ಲಿ. ನಾನು ರಾಜಕೀಯದ ಅಧಿಕಾರಕ್ಕಾಗಿ ಆಸೆ ಪಡೋನಲ್ಲ ಎಂದರು

ತುಮಕೂರು ಜಿಲ್ಲೆಯಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಶತ್ರುಗಳ ಶತ್ರು ಮಿತ್ರರಾಗಿದ್ದಾರೆ. ಜೆಡಿಎಸ್- ಬಿಜೆಪಿ ನಮ್ಮ ಶತ್ರುಗಳು. ಇಬ್ಬರೂ ಮಿತ್ರರಾಗಿ ಗೆಲುವು ಸಾಧಿಸಿದ್ದಾರೆ.

ಅವರ ಮಿತ್ರತ್ವ ಎಷ್ಟು ದಿನ ಇರತ್ತೋ ನೋಡೋಣ. ಮೋದಿ ಪ್ರಧಾನಿ ಆದರೆ ದೇವೇಗೌಡರು ದೇಶ ಬಿಟ್ಟು ಹೋಗ್ತಿನಿ ಅಂದಿದ್ರು. ಈಗ ನೀನೇ ಕಣಪ್ಪ ದೇಶ ಕಾಪಾಡೋನು ಅಂತಾ‌ ಸ್ವಾರ್ಥಕ್ಕಾಗಿ ಊಸರವಳ್ಳಿ ಥರ ಬಣ್ಣ ಬದಲಾಯಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಮಾಧ್ಯಮದವರೊಂದಿಗೆ ಮಾತನಾಡುವುದಕ್ಕೂ ಮೊದಲು ಸಚಿವ ರಾಜಣ್ಣ ಜಿಲ್ಲಾಸ್ಪತ್ರೆಗೆ ಭೇಟಿ ಕೊಟ್ಟು ಅಸ್ವಸ್ಥರ ಆರೋಗ್ಯ ವಿಚಾರಿಸಿದರು. ಚಿನ್ನೇನಹಳ್ಳಿ ಜಾತ್ರೆ ವೇಳೆ ಅಸ್ವಸ್ಥರಾಗಿ ಹಲವರು ಆಸ್ಪತ್ರೆಗೆ ಸೇರಿದ್ದರು. ಆಸ್ಪತ್ರೆಗೆ ದಾಖಲಾಗಿದ್ದವರನ್ನು ಭೇಟಿ ಮಾಡಿ ಅವರ ಆರೋಗ್ಯ ವಿಚಾರಿಸಿದರು. ಈ ವೇಳೆ ಮಾತನಾಡಿದ ರಾಜಣ್ಣ, 

ಮಧುಗಿರಿಯ ಚಿನ್ನೇನಹಳ್ಳಿ ಜಾತ್ರೆ ಮಹೋತ್ಸವ ಇತ್ತು. ಮಳೆ ಕೂಡ ಹೆಚ್ಚಾಗಿದೆ. ಮಳೆ ನೀರಿನಿಂದನೋ ಅಥವಾ ಊಟದಿಂದನೋ ಕೆಲವರು ಅಸ್ವಸ್ಥರಾಗಿದ್ದಾರೆ.ಪೆದ್ದಣ್ಣ, ಲಕ್ಷ್ಮಮ್ಮ ಎನ್ನುವವರಿಗೆ ಗಂಭೀರವಾಗಿತ್ತು, ಈಗ ಚೇತರಿಕೆ ಆಗುತ್ತಿದೆ. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು ಸ್ಪಷ್ಟನೆ ನೀಡಿದರು.

ತುಮಕೂರಿನಿಂದ ವಿ.ಸೋಮಣ್ಣ ಗೆದ್ದು ಮಂತ್ರಿಯಾಗಿದ್ದಾರೆ. ಅವರು ಮಂತ್ರಿ ಆಗಿರೋದಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಜಿಲ್ಲೆಯ ಇತಿಹಾಸದಲ್ಲಿ ಯಾರೂ ಕೇಂದ್ರದ ಮಂತ್ರಿ ಆಗಿರಲಿಲ್ಲ. ಸೋಮಣ್ಣ ಆಗಿದ್ದಾರೆ, ಸೋಮಣ್ಣ ಜನಪರ ಕೆಲಸ ಮಾಡೋರು ಅಂತಾ ಹೇಳುತ್ತಾರೆ ಅದು ಸಾಧಿಸಿ ತೋರಿಸಲಿ. ತುಮಕೂರು ರಾಯದುರ್ಗ ರೈಲ್ವೇ ಮಾರ್ಗ ಪೂರ್ಣಗೊಳಿಸಲಿ.ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದಿಂದ ಹಣ ತರಲಿ ಎಂದರು.

ಹೇಮಾವತಿ ಎಕ್ಸ್‌ಪ್ರೆಸ್‌ ಕೆನಾಲ್ ಗೆ ನಾನೂ, ಜಿ.ಪರಮೇಶ್ವರ್ ಇಬ್ಬರ ವಿರೋಧ ಇದೆ. ಎಲ್ಲಿ ಗಟ್ಟಿ ಧ್ವನಿಯಲ್ಲಿ ಮಾತಾಡಬೇಕೋ ಅಲ್ಲಿ ಮಾತಾಡಿದ್ದೇವೆ. ಏನೇ ಕಾಮಗಾರಿ ಆದರೂ ನೀರು ಕೊಡದಂತೆ ನಾವು ತಡೆಯುತ್ತೇವೆ.

Recent Articles

spot_img

Related Stories

Share via
Copy link
Powered by Social Snap