ನವದೆಹಲಿ:
ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ಅಭಿವೃದ್ಧಿಪಡಿಸಿದ್ದ ಕೋವ್ಯಾಕ್ಸಿನ್ ಲಸಿಕೆಯ ಅಡ್ಡಪರಿಣಾಮಗಳ ಬಗ್ಗೆ ವರದಿ ಬಂದಿದೆ. ಈ ಲಸಿಕೆ ಪಡೆದ ವರ್ಷದ ಬಳಿಕ ಅನೇಕರಲ್ಲಿ ಸೈಡ್ ಎಫೆಕ್ಟ್ ಕಂಡುಬಂದಿವೆ ಎಂದು ಬನಾರಸ್ ಹಿಂದೂ ವಿವಿ (Banaras Hindu University) ನಡೆಸಿದ ಅಧ್ಯಯನ ತಿಳಿಸಿದೆ.
ಕೋವಿಡ್ ಲಸಿಕೆಗಳ ಅಡ್ಡಪರಿಣಾಮಗಳ ಬಗ್ಗೆ ಇತ್ತೀಚಿಗೆ ಮೇಲಿಂದ ಮೇಲೆ ವರದಿಗಳು ಬರುತ್ತಿವೆ. ಎರಡು ವಾರಗಳ ಹಿಂದಷ್ಟೇ ಕೋವಿಶೀಲ್ಡ್ ಅಡ್ಡಪರಿಣಾಮಗಳ ಬಗ್ಗೆ ವರದಿ ಆಗಿತ್ತು.
ಇದೀಗ ಕೋವ್ಯಾಕ್ಸಿನ್ ಸರದಿ. ಈ ವರದಿ ಪ್ರಕಾರ ಕೋವ್ಯಾಕ್ಸಿನ್ ಪಡೆದ ಹದಿಹರೆಯದವರು ಮತ್ತು ಯುವಕರಲ್ಲಿ ಹೆಚ್ಚು ಅಡ್ಡಪರಿಣಾಮ ಕಂಡುಬಂದಿದೆ.