ಕಾರವಾರ : ಬೆಳ್ಳಂಬೆಳಿಗ್ಗೆ ಸಿಡಿಲು ಬಡಿದು ಎರಡು ಮನೆಗಳಿಗೆ ಹಾನಿ

ಕಾರವಾರ:

    ಬೆಳ್ಳಂಬೆಳಿಗ್ಗೆ ಸಿಡಿಲು ಬಡಿದು ಎರಡು ಮನೆಗಳಿಗೆ ಹಾನಿಯಾಗಿದ್ದು ಅದೃಷ್ಟವಶಾತ್ ಮನೆಯಲ್ಲಿದ್ದವರು ಪ್ರಾಣಪಾಯದಿಂದ ಪಾರಾಗಿರುವ ಘಟನೆ ಅಂಕೋಲಾ ತಾಲ್ಲೂಕಿನ ಹಾರವಾಡದಲ್ಲಿ ಮಂಗಳವಾರ ಮುಂಜಾನೆ ನಡೆದಿದೆ.

    ಅಂಕೋಲಾ ಹಾರವಾಡದ ಗಾಬಿತವಾಡದಲ್ಲಿ ವಿಠ್ಠಲ ಸೀತಾರಾಮ ನಾಯ್ಕ ಮತ್ತು ಗೀತಾ ನಾರಾಯಣ ಖಾರ್ವಿ ಮನೆಗೆ ಬಡಿದ ಸಿಡಿಲು ತೀವ್ರ ಹಾನಿಯಾಗಿದೆ. ಮುಂಜಾನೆ ಮನೆಯಲ್ಲಿ ಕೆಲವರು ಎದ್ದು ಕೆಲಸದಲ್ಲಿ ತೊಡಗಿದ್ದ ವೇಳೆ ಇದ್ದಕ್ಕಿದ್ದಂತೆ ಕಣ್ಣೆದು ಲೈಟ್ ಪಾಸಾದಂತಾಯಿತು. ಬಳಿಕ ಇಡಿ ಮನೆ ಹೊಗೆಯಿಂದ ತುಂಬಿಕೊಂಡಿತ್ತು. ಏನಾಯಿತು ಎಂದುಕ್ಕೊಳ್ಳುವಷ್ಟರಲ್ಲಿ ಸಿಡಿಲು ಬಡಿದ ಪರಿಣಾಮ ಮನೆಯ ಮೀಟರ್ ಬೋರ್ಡ್‌, ಮನೆಯ ಹೆಂಚು, ವಿದ್ಯುದ್ದೀಪಗಳು, ಯಂತ್ರೋಪಕರಣಗಳಿಗೆ ಹಾನಿಯಾಗಿತ್ತು ಎಂದು ಮನೆಯವರು ತಿಳಿಸಿದ್ದಾರೆ.

   ಇನ್ನು ಮನೆಯ ಎದುರಿನ ತೆಂಗಿನ ಮರಕ್ಕೂ ಬಡಿದ ಸಿಡಿಲು ಬಡಿದಿದೆ. ಮನೆಯ ಗೋಡೆ ಹಾಗೂ ನೆಲಕ್ಕೂ ಸಿಡಿಲು ಬಡಿದು ಹಾನಿಯಾಗಿದೆ. ಆದರೆ ಮನೆಯಲ್ಲಿ ಕೆಲವರು ಮಲಗಿದ್ದರು. ಆದರೆ ಯಾರಿಗೂ ಹಾನಿಯಾಗಿಲ್ಲ. ಅದೃಷ್ಟವಸಾತ್ ಎಲ್ಲರೂ ಪ್ರಾಣಪಯಾದಿಂದ ಪಾರಾಗಿದ್ದಾರೆ.

Recent Articles

spot_img

Related Stories

Share via
Copy link