ಕೊರೊನಾ ಬಗ್ಗೆ ವೈದ್ಯರಿಂದ ಮಹತ್ವದ ವಾದ

ಒಮಿಕ್ರಾನ್:ಕೊರೊನಾ ಬಗ್ಗೆ ವೈದ್ಯರಿಂದ ಮಹತ್ವದ ವಾದ: `ಒಮಿಕ್ರಾನ್ ಹರಡಲು ಬಿಡಿ, ಜನರಲ್ಲಿ ಹೆಚ್ಚಾಗಲಿದೆ ರೋಗ ನಿರೋಧಕ ಶಕ್ತಿ'ಒಮಿಕ್ರಾನ್ ಹರಡಲು ಬಿಡಿ, ಜನರಲ್ಲಿ ಹೆಚ್ಚಾಗಲಿದೆ ರೋಗ ನಿರೋಧಕ ಶಕ್ತಿ’

           ಕೊರೊನಾ ವೈರಸ್ ಹೊಸ ರೂಪಾಂತರ ಒಮಿಕ್ರಾನ್ ವಿಶ್ವಾದ್ಯಂತ ಹಾನಿಯನ್ನುಂಟುಮಾಡ್ತಿದೆ. ಇತ್ತೀಚಿನ ಅಧ್ಯಯನಗಳು ಒಮಿಕ್ರಾನ್ ರೂಪವು ಜನರಲ್ಲಿ ವೇಗವಾಗಿ ಹರಡುತ್ತಿದೆ ಎಂಬುದು ಗೊತ್ತಾಗಿದೆ. ಆದ್ರೆ ಸಾವಿನ ಬಗ್ಗೆ ವಿಜ್ಞಾನಿಗಳು ಹೆಚ್ಚಿನ ಮಾಹಿತಿ ನೀಡಿಲ್ಲ.

        ದಕ್ಷಿಣ ಆಫ್ರಿಕಾ ಮತ್ತು ಬ್ರಿಟನ್‌ ನ ಡೇಟಾವನ್ನು ನೋಡಿದರೆ, ಆಸ್ಪತ್ರೆಗೆ ದಾಖಲಾದ ಹಾಗೂ ಸಾವನ್ನಪ್ಪಿದ ಒಮಿಕ್ರಾನ್ ರೋಗಿಗಳ ಸಂಖ್ಯೆ ಕಡಿಮೆ. ಆದ್ರೆ ನಿರ್ಲಕ್ಷ್ಯ ಬೇಡವೆಂದು ವೈದ್ಯರು ಎಚ್ಚರಿಕೆ ನೀಡ್ತಿದ್ದಾರೆ.

ಈ ಮಧ್ಯೆ ಕೆಲ ವಿಜ್ಞಾನಿಗಳು ವಿಚಿತ್ರ ವಾದ ಮಂಡನೆ ಮಾಡಿದ್ದಾರೆ. ಒಮಿಕ್ರಾನ್ ಕಡಿಮೆ ಮಾರಣಾಂತಿಕವಾಗಿದೆ. ಹಾಗಾಗಿ ಲಾಕ್ ಡೌನ್, ಕರ್ಫ್ಯೂ ಮೂಲಕ ಅದನ್ನು ನಿಯಂತ್ರಿಸುವ ಬದಲು ಅದನ್ನು ಹರಡಲು ಬಿಡಬೇಕೆಂದು ತಜ್ಞರು ಹೇಳಿದ್ದಾರೆ. ಇದ್ರ ಹಿಂದೆ ಮಹತ್ವದ ಕಾರಣವಿದೆ. ಒಮಿಕ್ರಾನ್ ಸಾಂಕ್ರಾಮಿಕವಾದ್ರೂ ಮಾರಣಾಂತಿಕವಲ್ಲ. ಸಾವಿನ ಸಂಖ್ಯೆ ಅತಿ ಕಡಿಮೆ.

ಒಮಿಕ್ರಾನ್ ನಿಂದ ಜನರಲ್ಲಿ ಕೊರೋನಾ ವಿರುದ್ಧ ರೋಗ ನಿರೋಧಕ ಶಕ್ತಿ ಬೆಳೆಯುತ್ತದೆ. ಅದು ದೀರ್ಘಕಾಲ ಒಟ್ಟಿಗೆ ಇರುತ್ತದೆ. ಇಲ್ಲಿಂದ ಕೊರೊನಾ ಸಾಂಕ್ರಾಮಿಕದ ಅಂತ್ಯವು ಪ್ರಾರಂಭವಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ. ಹೀಗೆ ವಾದ ಮಂಡನೆ ಮಾಡಿದ ತಜ್ಞರಲ್ಲಿ ಅಮೆರಿಕದ ವೈದ್ಯ ಫ್ಶೈನ್ ಇಮ್ರಾನಿ ಸೇರಿದ್ದಾರೆ.

ಒಮಿಕ್ರಾನ್ ರೂಪಾಂತರವು ಡೆಲ್ಟಾಕ್ಕಿಂತ ಗಾಳಿಯಲ್ಲಿ 70 ಪಟ್ಟು ವೇಗವಾಗಿ ಚಲಿಸುತ್ತದೆ. ಆದರೆ ಇದು ಡೆಲ್ಟಾ ರೂಪಾಂತರದಂತೆ ಜನರನ್ನು ಹೆಚ್ಚು ಅನಾರೋಗ್ಯಕ್ಕೆ ಒಳಪಡಿಸುತ್ತಿಲ್ಲ. ಒಮಿಕ್ರಾನ್ ರೂಪಾಂತರವು ಶ್ವಾಸಕೋಶ ಮತ್ತು ಶ್ವಾಸನಾಳವನ್ನು ಸಂಪರ್ಕಿಸುವ ಶ್ವಾಸನಾಳದಲ್ಲಿ ವೇಗವಾಗಿ ಬೆಳೆಯುತ್ತದೆ.

ಆದರೆ ಇದು ಶ್ವಾಸಕೋಶದ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ. ಒಮಿಕ್ರಾನ್, ಡೆಲ್ಟಾಕ್ಕಿಂತ ನಿಧಾನವಾಗಿ ಸೋಂಕನ್ನು ಹರಡುತ್ತದೆ ಎಂದು ವೈದ್ಯರು ಹೇಳಿದ್ದಾರೆ.

ಹಾಗಾಗಿ ಒಮಿಕ್ರಾನ್ ಸೋಂಕಿತ ಜನರಿಗೆ ಆಮ್ಲಜನಕದ ಬೆಂಬಲ ಅಗತ್ಯವಿಲ್ಲ. ಇದಲ್ಲದೆ, ನಮ್ಮ ಶ್ವಾಸನಾಳವು ಮ್ಯೂಕೋಸಲ್ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೊಂದಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕೇಂದ್ರವಾಗಿದೆ. ಆದ್ದರಿಂದ ಒಮಿಕ್ರಾನ್ ಇಲ್ಲಿ ಹರಡಲು ಪ್ರಾರಂಭಿಸಿದ ತಕ್ಷಣ,

ಈ ಕೇಂದ್ರವು ಸ್ವಯಂಚಾಲಿತವಾಗಿ ಸಕ್ರಿಯಗೊಳ್ಳುತ್ತದೆ ಮತ್ತು ಅದರಿಂದ ಬಿಡುಗಡೆಯಾಗುವ ಪ್ರತಿಕಾಯಗಳು ಒಮಿಕ್ರಾನ್ ಅನ್ನು ಕೊಲ್ಲುತ್ತವೆ. ಅಂದರೆ, ಒಮಿಕ್ರಾನ್ ದೇಹದಲ್ಲಿಯೇ ಗಂಭೀರ ಕಾಯಿಲೆಯಾಗಿ ಬೆಳೆಯಲು ಸಾಧ್ಯವಿಲ್ಲ. ಆದ್ದರಿಂದ ಒಮಿಕ್ರಾನ್ ಒಂದು ವರದಂತೆ ಎಂದು ತಜ್ಞರು ಹೇಳಿದ್ದಾರೆ.

ಹಾಗೆ ಒಮಿಕ್ರಾನ್ ನಿಂದ ಸಾವು ಸಂಭವಿಸುವುದಿಲ್ಲ ಎನ್ನಲು ಸಾಧ್ಯವಿಲ್ಲ ಎಂದು ಡಾ. ಇಮ್ರಾನಿ ಹೇಳಿದ್ದಾರೆ. ಈಗಾಗಲೇ ಕೆಲವು ಕಾಯಿಲೆಯಿಂದ ಬಳಲುತ್ತಿರುವ ಜನರ ಮೇಲೆ ಇದು ಪರಿಣಾಮ ಬೀರಬಹುದು.

ಆದರೆ ಆರೋಗ್ಯವಂತ ಜನರು ಹೆಚ್ಚಿನ ಸಮಸ್ಯೆಯನ್ನು ಎದುರಿಸುವುದಿಲ್ಲ. ಒಮಿಕ್ರಾನ್ ಒಂದು ರೀತಿಯಲ್ಲಿ ನೈಸರ್ಗಿಕ ಲಸಿಕೆಯಾಗಲಿದೆ ಮತ್ತು ಸಾಂಕ್ರಾಮಿಕ ರೋಗದ ಅಂತ್ಯ ಖಚಿತ ಎಂದಿದ್ದಾರೆ.

ಆದ್ರೆ ಇದನ್ನು ಸಂಪೂರ್ಣವಾಗಿ ನಂಬಲು ಸಾಧ್ಯವಿಲ್ಲ. ಯಾಕೆಂದ್ರೆ ಕೊರೊನಾ ಆರಂಭದಲ್ಲಿಯೂ ಇಮ್ರಾನ್ ಸೇರಿದಂತೆ ಅನೇಕ ತಜ್ಞರು ನೀಡಿದ್ದ ವಾದಗಳು ಸುಳ್ಳಾಗಿದ್ದವು. ಕೊರೊನಾ ಲಸಿಕೆ ಹಾಗೂ ಲಾಕ್ ಡೌನ್ ಅಗತ್ಯವಿಲ್ಲವೆಂದು ಇಮ್ರಾನ್ ಕೂಡ ವಾದಿಸಿದ್ದರು. ಆದ್ರೆ ಅವರ ಲೆಕ್ಕಾಚಾರ ಉಲ್ಟಾ ಆಗಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap