ವಾಮಮಾರ್ಗದಲ್ಲಿ ಸಿಂಹ ಸೈಟ್ ಪಡೆದಿದ್ದಾರೆ- ಮರಿಗೌಡ

ಮೈಸೂರು: 

   ಸಿದ್ದರಾಮಯ್ಯ ಅವರಿಗೆ ಕಾಳಜಿ, ಪ್ರೀತಿ, ಗೌರವದಿಂದ ಸಲಹೆ ಕೊಟ್ಟಿದ್ದೆ. ಅದನ್ನೂ ಅರ್ಥ ಮಾಡಿಕೊಳ್ಳದೆ ಮರಿಗೌಡನಂಥ ದಡ್ಡ ಶಿಕಾಮಣಿ, ಬಕ್ರಗಳನ್ನು ಜತೆಗಿಟ್ಟುಕೊಂಡಿದ್ದಾರೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಲೇವಡಿ ಮಾಡಿದ್ದಾರೆ.ಮೈಸೂರಿನಲ್ಲಿ ಮಾತನಾಡಿದ ಅವರು, ಮೈಸೂರಿನ ಡಿಸಿಯಾಗಿದ್ದ ಶಿಖಾ ಅವರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ ಒಂದೂವರೆ ತಿಂಗಳು ತಲೆ ಮರೆಸಿಕೊಂಡಿದ್ದ. ಅಂಥ ವ್ಯಕ್ತಿಯನ್ನು ಮುಡಾ ಅಧ್ಯಕ್ಷನನ್ನಾಗಿ ಮಾಡಿದ್ದಾರೆ” ಎಂದರು.

    ಇದೇ ವೇಳೆ ತಮ್ಮ ವಿರುದ್ಧ ಪ್ರತಾಪ್ ಸಿಂಹ ಏಕವಚನ ಬಳಕೆ ಮಾಡಿದ್ದಕ್ಕೆ ಮರಿಗೌಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಧೋರಣೆಯಿಂದಾಗಿ ಲೋಕಸಭೆ ಚುನಾವಣೆಯಲ್ಲಿ ಸಿಂಹ ಅವರಿಗೆ ಬಿಜೆಪಿ ಟಿಕೆಟ್ ನೀಡಲಿಲ್ಲ ಟಾಂಗ್ ನೀಡಿದ್ದಾರೆ.

   ಮುಡಾ ಸ್ವಾಧೀನಪಡಿಸಿಕೊಂಡಿರುವ ಜಮೀನಿಗೆ ಸಿದ್ದರಾಮಯ್ಯ ಅವರ ಪತ್ನಿ 2014ರಲ್ಲಿ ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದರು. 2013ರಿಂದ 2018ರವರೆಗೆ ಸಿದ್ದರಾಮಯ್ಯ ಸಿಎಂ ಆಗಿದ್ದರೂ ತಮ್ಮ ಪ್ರಭಾವ ಬಳಸಿ ಪರಿಹಾರ ಕೊಡಿಸಿರಲಿಲ್ಲ. ಆದರೆ 2021ರಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರದಲ್ಲಿದ್ದಾಗ ಆಕೆಗೆ ಪರಿಹಾರವಾಗಿ ನಿವೇಶನಗಳನ್ನು ನೀಡಲಾಗಿತ್ತು.

   ಸರ್ಕಾರ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದರೂ, ಮುಡಾದಲ್ಲಿ ಯಾವ ಪಕ್ಷದ ಸರ್ಕಾರದ ಅವಧಿಯಲ್ಲಿ ಅಕ್ರಮಗಳು ನಡೆದಿವೆ ಎಂಬುದು ಸ್ಪಷ್ಟವಾಗುತ್ತದೆ. ಸಿದ್ದರಾಮಯ್ಯ ಅವರು ಎರಡನೇ ಅವಧಿಗೆ ಸಿಎಂ ಆಗುತ್ತಾರೆ ಎಂದು ಬಿಜೆಪಿ ನಾಯಕರು ಹೊಟ್ಟೆಕಿಚ್ಚು ಪಡುತ್ತಿದ್ದಾರೆ. ಹೀಗಾಗಿ ಅವರ ಹೆಸರಿಗೆ ಕಳಂಕ ತರಲು ಯತ್ನಿಸುತ್ತಿದ್ದಾರೆ ಎಂದು ಮರಿಗೌಡ ಆರೋಪಿಸಿದ್ದಾರೆ.

    ಮಾಜಿ ಸಂಸದ ಪ್ರತಾಪ್‌ ಸಿಂಹ ಅವರು ವಾಮಮಾರ್ಗದಲ್ಲಿ ತಮ್ಮ ಪತ್ನಿ ಹೆಸರಿನಲ್ಲಿ ನಿವೇಶನ ಪಡೆದಿದ್ದಾರೆ ಎಂದು ಮುಡಾ ಅಧ್ಯಕ್ಷ ಕೆ.ಮರೀಗೌಡ ಆರೋಪಿಸಿದ್ದಾರೆ. ಪ್ರತಾಪ್‌ ಸಿಂಹ ಅವರು ಸಂಸದರಾಗಿದ್ದಾಗ ತಮ್ಮ ಪತ್ನಿ ಡಾ.ಜೆ.ಎಸ್‌.ಅರ್ಪಿತಾ ಅವರಿಗೆ ರಾಜ್ಯ ಸರಕಾರದ ಜಿ.ಕೆಟಗರಿಯಲ್ಲಿ ವಿಜಯ ನಗರದ ನಾಲ್ಕನೇ ಹಂತದಲ್ಲಿ 40*60 ನಿವೇಶನ ಪಡೆದಿದ್ದಾರೆ. ನಿವೇಶನ ಹಕ್ಕು ಪತ್ರ ಪಡೆಯಲು ಮನೆ ನಿರ್ಮಿಸ ಬೇಕು. ಇಲ್ಲದಿದ್ದರೆ ಉಪ ನೋಂದಣಾಧಿಕಾರಿಗಳ ಮಾರುಕಟ್ಟೆ ಮೌಲ್ಯದ ಶೇ. 25ರಷ್ಟು ಮೊತ್ತವನ್ನು ದಂಡದ ರೂಪದಲ್ಲಿ ಪಾವತಿಸಬೇಕೆಂಬುದು ನಿಯಮ. ಆದರೆ, ಪ್ರತಾಪ್‌ ಸಿಂಹ ನಕ್ಷೆ ಮಂಜೂರಾತಿ ಪಡೆಯಲು ಎಸಿ ಶೀಟಿನ ಮನೆಯನ್ನು ನಿರ್ಮಿಸಿ ಅದನ್ನೇ ಮನೆಯೆಂದು ಬಿಂಬಿಸಿ ಮುಡಾದಿಂದ ಪೂರ್ಣಗೊಂಡ ವರದಿ ಪಡೆದಿದ್ದಾರೆ.

 

Recent Articles

spot_img

Related Stories

Share via
Copy link
Powered by Social Snap