ಶಿರಾ :
ಇಂದಿನ ಯುವ ಪೀಳಿಗೆಯು ಸರಳ ವಿವಾಹವಾಗುವ ಮೂಲಕ ಆಡಂಬರದ, ವೈಭವಯುತ ದುಂದು ವೆಚ್ಚದ ವಿವಾಹಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಸ ಋಷಿ ಕುವೆಂಪುರವರ ವಿವಾಹಸಂಹಿತೆ ಪರಿಕಲ್ಪನೆಯಡಿಯಲ್ಲಿ ಸರಳ ವಿವಾಹವಾಗುವುದರ ಮೂಲಕ ಆದರ್ಶಯುತ ವೈವಾಹಿಕ ಜೀವನಕ್ಕೆ ಸಾಕ್ಷಿ ಪ್ರಜ್ಞೆಯಾಗಬೇಕೆಂದು ಯುವ ಚಿಂತಕ ಕೊಟ್ಟ ಶಂಕರ್ ಕರೆ ನೀಡಿದರು.
ಅವರು ಶಿರಾ ನಗರದ ಶ್ರೀರಾಮ ಕಲ್ಯಾಣ ಮಂಟಪದಲ್ಲಿ ನಡೆದ ಗೊಲ್ಲಹಳ್ಳಿ ಸ.ಪ್ರೌ. ಮುಖ್ಯ ಶಿಕ್ಷಕರಾದ ರಾಮಚಂದ್ರಪ್ಪ ಅವರ ಪುತ್ರ ಅವಿನಾಶ್ ಮತ್ತು ಚೈತ್ರ ಅವರ ಮಂತ್ರ ಮಾಂಗಲ್ಯ ಕಾರ್ಯಕ್ರಮದಲ್ಲಿ ನೂತನ ವಧು ವರರಿಗೆ “ವಿವಾಹ ಪ್ರತಿಜ್ಞಾ ವಿಧಿ” ಯನ್ನು ಬೋಧಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ವಧು-ವರರ ತಂದೆ-ತಾಯಿಗಳು, ಸಾಹಿತಿಗಳು, ಚಿಂತಕರು ಇದ್ದರು. ಹಸಿರು ಉಳಿಸಿ ಎನ್ನುವ ಅಭಿಯಾನದಡಿ ಪರಿಸರ ರಕ್ಷಣೆಗೆ ಮನಸ್ಸು ಮಾಡಲಿ ಎನ್ನುವ ದೃಷ್ಟಿಯಿಂದ ವಿವಾಹಕ್ಕೆ ಆಗಮಿಸಿದ್ದ ಎಲ್ಲ ಬಂಧುಗಳಿಗೂ ಸಸಿಗಳನ್ನು ನೀಡುವ ಮೂಲಕ ತಾಲ್ಲೂಕಿನಲ್ಲಿ ಮಾದರಿ ಮತ್ತು ಸರಳ ವಿವಾಹಕ್ಕೆ ನಾಂದಿ ಹಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
