ಶಿರಾ ತಹಸೀಲ್ದಾರ್ ಕಛೇರಿ ಬಳಿ ನೆಟ್‍ವರ್ಕ್ ಸಮಸ್ಯೆ!!

 ಶಿರಾ : 

    ಹಳೆಯ ತಹಸೀಲ್ದಾರ್ ಕಛೇರಿಯನ್ನು ನೂತನ ಮಿನಿ ವಿಧಾನಸೌಧಕ್ಕೆ ವರ್ಗಾವಣೆ ಮಾಡಿ ಸುಮಾರು ಐದಾರು ತಿಂಗಳುಗಳೆ ಕಳೆದಿವೆ. ಆದರೂ ಈವರೆಗೂ ಈ ವ್ಯಾಪ್ತಿಯಲ್ಲಿ ಮೊಬೈಲ್‍ಗಳ ನೆಟ್‍ವರ್ಕ್ ಸಿಗದಂತಾಗಿದ್ದು ಕೂಡಲೇ ಈ ಸಮಸ್ಯೆಯನ್ನು ಬಗೆಹರಿಸುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.

       ಮಿನಿ ವಿಧಾನಸೌಧವು ರಾಷ್ಟ್ರೀಯ ಹೆದ್ದಾರಿಯಲ್ಲಿ ಇದ್ದು, ಈ ವ್ಯಾಪ್ತಿಯಲ್ಲಿ ಯಾವುದೇ ದೂರವಾಣಿಯ ಟವರ್‍ಗಳು ಇರುವುದಿಲ್ಲ. ಕಛೇರಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಷ್ಟೇ ಅಲ್ಲದೆ ತಹಸೀಲ್ದಾರ್ ಕೂಡ ಕಛೇರಿಯ ಹೊರ ಬಂದು ನೆಟ್‍ವರ್ಕ್ ಇರುವ ಕಡೆ ನಿಂತು ಕರೆ ಮಾಡಿ ಮಾತನಾಡಬೇಕಿದೆ.

     ಸಾರ್ವಜನಿಕರಂತೂ ದೂರವಾಣಿಯ ಮೂಲಕ ಕಛೇರಿಯ ವ್ಯಾಪ್ತಿಯಲ್ಲಿ ನಿಂತು ದೂರವಾಣಿ ಕರೆ ಮಾಡಲು ಕೂಡ ಸಾಧ್ಯವಾಗದೆ ಪರದಾಡುವಂತಾಗಿದೆ. ಈ ಕೂಡಲೇ ತಾಲ್ಲೂಕು ದಂಡಾಧಿಕಾರಿಗಳು ಸಂಬಂಧಪಟ್ಟ ಖಾಸಗಿ ದೂರವಾಣಿ ಕಂಪನಿಗಳಿಗೆ ನೆಟ್‍ವರ್ಕ್ ಟವರ್‍ಗಳನ್ನು ಹಾಕಿಸುವಂತೆ ಸೂಚನೆ ನೀಡಬೇಕಾಗಿ ಸಾರ್ವಜನಿಕರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap