ಶಿರಾ ಕನಕ ಪತ್ತಿನ ಸಹಕಾರ ಸಂಘಕ್ಕೆ 1,42,23,362 ರೂಗಳ ನಿವ್ವಳ ಲಾಭ

 ಶಿರಾ : 

      ಕೇವಲ 19 ವರ್ಷಗಳ ಅವಧಿಯಲ್ಲಿ ಮಾಜಿ ಶಾಸಕರಾದ ಹಾಗೂ ಕನಕ ಪತ್ತಿನ ಸಹಕಾರ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಎಸ್.ಕೆ.ದಾಸಪ್ಪ ಅವರ ನೇತೃತ್ವದಲ್ಲಿ ರೂಪುಗೊಂಡ ನಮ್ಮ ಸಹಕಾರ ಸಂಘವು 1,42,23,362 ರೂಗಳ ನಿವ್ವಳ ಲಾಭ ಗಳಿಸುವ ಮೂಲಕ ಸಹಕಾರ ಕ್ಷೇತ್ರದಲ್ಲಿ ಸದೃಢತೆಗೊಳ್ಳಲು ಕಾರಣವಾಗಿದೆ ಎಂದು ಸಂಘದ ಅಧ್ಯಕ್ಷ ಆರ್.ಡಿ.ಮಂಜುನಾಥ್ ಹೇಳಿದರು.

      ನಗರದ ಕನಕ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಶುಕ್ರವಾರ ನಡೆದ 2019-20ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

      ಕೇವಲ 19 ವರ್ಷಗಳ ಅವಧಿಯಲ್ಲಿ ಮಾಜಿ ಶಾಸಕರಾದ ಎಸ್.ಕೆ.ದಾಸಪ್ಪ ಅವರು ನೀಡಿದ ಮಾರ್ಗದರ್ಶನದಂತೆ ಸಂಘದ ಆಡಳಿತ ಮಂಡಳಿ ನಡೆಯುತ್ತಾ ಬಂದಿದ್ದು ಇದೀಗ 7 ಶಾಖೆಗಳನ್ನು ತೆರೆಯಲು ಸಾದ್ಯವಾಗಿದೆ. 1,49,53,150 ರೂ ಷೇರು ಬಂಡವಾಳ ಹೊಂದಿದ್ದು 8,15,32,580 ರೂ ಆಪದ್ಧನ ನಿಧಿ ಮತ್ತು ಇತರೆ ನಿಧಿಗಳನ್ನು ಹೊಂದಲು ಸಾದ್ಯವಾಗಿದೆ ಎಂದರು.

      43,18,02,714 ರೂ ರೇವಣಿಯನ್ನು ಹೊಂದಿರುವ ಸಂಘವು 1,42,23,362 ರೂಗಳ ನಿವ್ವಳ ಲಾಭ ಗಳಿಸಲು ಸಂಘದ ಷೇರುದಾರರು ಹಾಗೂ ಸಿಬ್ಬಂದಿಯ ಪರಿಶ್ರಮ ಶ್ಲಾಘನಾರ್ಹ. ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗ ಸೂಚಿಯ ಅನ್ವಯ ವಾರ್ಷಿಕ ಸಭೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಲಾಗಿದೆ ಎಂದರು.

      ಸಂಘದ ಸದಸ್ಯರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಮರಣೋತ್ತರ ನಿಧಿಯನ್ನು 5,000 ದಿಂದ 8,000 ರೂಗಳಿಗೆ ಹೆಚ್ಚಿಸಲಾಗಿದೆ. ಪ್ರತಿಭಾ ಪುರಸ್ಕಾರವನ್ನು ಪ್ರತೀ ವರ್ಷದಂತೆ ಈ ವರ್ಷವೂ ಸಂಘದ ಷೇರುದಾರರ ಮಕ್ಕಳಿಗೆ ನೀಡಲಾಗಿದೆ ಕೋವಿಡ್‍ನ ಸಂಕಷ್ಟದಲ್ಲೂ ಕೂಡಾ 15% ಡಿವಿಡೆಂಟನ್ನು ಮಂದುರಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಮಂಜುನಾಥ್ ತಿಳಿಸಿದರು.
 
      ರಾಜ್ಯ ತೆಂಗು ಮತ್ತು ನಾರು ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಬಿ.ಕೆ.ಮಂಜುನಾಥ್ ಮಾತನಾಡಿ ಸಾಲ ವಸೂಲಾತಿಯಲ್ಲೂ ಕೂಡಾ ಮುನ್ನಡೆ ಕಾಯ್ದುಕೊಂಡಿರುವ ನಮ್ಮ ಸಂಘವು ಶೇ.95 ರಷ್ಟು ಸಾಲ ವಸೂಲಾತಿಯ ಕ್ರಮ ಕೈಗೊಂಡಿದೆ ಎಂದರು.

     ಸಂಘದ ನಿರ್ದೇಶಕ ಡಿ.ರಂಗನಾಥ್ ಮಾತನಾಡಿ ರಾಷ್ಟ್ರೀಕೃತ ಬ್ಯಾಂಕುಗಳಂತೆ ನಮ್ಮ ಸಹಕಾರ ಸಂಘವು ಕೂಡಾ ಕಾರ್ಯ ನಿರ್ವಹಿಸಬೇಕಿದ್ದು ಇದಕ್ಕಾಗಿ ಕೋರ್ ಬ್ಯಾಂಕಿಂಗ್ ವ್ಯವಸ್ಥೆಗೂ ಮುನ್ನಡಿ ಇಡಲಿದೆ. ಸದಸ್ಯರಿಗೆ ಆರೋಗ್ಯ ನಿಧಿಯನ್ನು ಸ್ಥಾಪನೆ ಮಾಡಲಾಗಿದೆ ಎಂದರು.

      ನಿರ್ದೇಶಕರಾದ ಎಸ್.ಎಲ್.ರಂಗನಾಥ್ ಮಾತನಾಡಿ ನಮ್ಮ ಸಂಘವು 8,65,000 ರೂಗಳಿಂದ 65 ಕೋಟಿ ರೂಗಳ ದುಡಿಯುವ ಬಂಡವಾಳಕ್ಕೆ ದಾಪುಗಾಲು ಇಟ್ಟಿದ್ದು ಸಹಕಾರ ಕ್ಷೇತ್ರದಲ್ಲಿ ಲಭ್ಯವಾಗುವ ಪ್ರಶಸ್ತಿಗಳನ್ನು ಕೂಡಾ ತನ್ನದಾಗಿಸಿಕೊಂಡಿದ್ದು ಇದಕ್ಕೆ ಷೇರುದಾರರು, ಸದಸ್ಯರು, ಸಿಬ್ಬಂದಿ ಕೂಡಾ ಕಾರಣಕರ್ತರು ಎಂದರು.

      ಸಂಘದ ಉಪಾಧ್ಯಕ್ಷರಾದ ಡಿ.ಆರ್.ಸೀತಣ್ಣ, ನಿರ್ದೇಶಕರಾದ ಬಿ.ಜೆ.ಕರಿಯಪ್ಪ, ಎಸ್.ಪಿ.ಶಿವಶಂಕರ್, ಪುರುಷೋತ್ತಮ್, ಜಯಶಂಕರ್, ಎಲ್.ಭಾನುಪ್ರಕಾಶ್, ಕೆ.ಎಂ.ಪದ್ಮರಾಜು, ಶ್ರೀಮತಿ ಲಕ್ಷ್ಮೀದೇವಿ ದಯಾನಂದ್, ಶ್ರೀಮತಿ ಪಿ.ಲಲಕ್ಷ್ಮೀದೇವಿ ಸುರೇಶ್, ಬಸವರಾಜುಣ್ಪ್ರಧಾನ ವ್ಯವಸ್ಥಾಪಕ ಆರ್.ಲಕ್ಷ್ಮಣ್, ವಿವಿಧ ಶಾಖೆಗಳ ವ್ಯವಸ್ಥಾಪಕರಾದ ಪ್ರಭಾಕರ್, ಅಶ್ವಥಯ್ಯ, ಈರಣ್ಣ, ನಾಗೇಂದ್ರಪ್ಪ, ಶೇಖರ್, ತಿಪ್ಪಣ್ಣ, ಆಂತರೀಕ ಲೆಕ್ಕ ಪರಿಶೋಧಕ ನಾರಾಯಣರಾವ್, ಹಿರಿಯ ಸದಸ್ಯ ಶಿವಣ್ಣ ಸೇರಿದಂತೆ ಸಹಕಾರ ಸಂಘದ ಸಿಬ್ಬಂದಿ ಹಾಗೂ ಸದಸ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap