ಶಿರಾ :
ತಾಲ್ಲೂಕಿನ 42 ಗ್ರಾಮ ಪಂಚಾಯ್ತಿಗಳ ಪೈಕಿ 41 ಗ್ರಾಪಂಗಳ 660 ಸ್ಥಾನಗಳಿಗೆ ಈಗಾಗಲೇ ಚುನಾವಣೆ ನಡೆದಿದ್ದು, 1921 ಮಂದಿ ಸ್ಪರ್ಧಿಸಿದ್ದರು. ಡಿ. 30 ರಂದು ಶಿರಾ ನಗರದ ಜ್ಯೋತಿ ನಗರದಲ್ಲಿರುವ ಸರ್ಕಾರಿ ಪ್ರ.ದ. ಕಾಲೇಜಿನಲ್ಲಿ ಮತ ಎಣಿಕೆ ನಡೆಸಲು ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ತಾಲ್ಲೂಕು ದಂಡಾಧಿಕಾರಿ ಹಾಗೂ ಚುನಾವಣಾಧಿಕಾರಿ ಮಮತ ತಿಳಿಸಿದರು.
ಈ ಸಂಬಂಧ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು, ಡಿ.27 ರಂದು ನಡೆದ ಎರಡನೇ ಹಂತದ ಚುನಾವಣೆಯಲ್ಲಿ 93,770 ಪುರುಷರು, 86,526 ಮಹಿಳೆಯರು ಸೇರಿದಂತೆ ಒಟ್ಟು 1,80,300 ಮತದಾರರು ಮತದಾನ ಮಾಡಿದ್ದಾರೆ.
ಡಿ.30 ರಂದು ಮತ ಎಣಿಕೆಯು ಬೆಳಗ್ಗೆ 8 ಗಂಟೆಗೆ ಆರಂಭಗೊಳ್ಳಲಿದ್ದು, ಮತ ಎಣಿಕೆಗಾಗಿ 14 ಕೊಠಡಿಗಳು, 90 ಟೇಬಲ್ಗಳ ವ್ಯವಸ್ಥೆಗೊಳಿಸಲಾಗಿದೆ. ಮತ ಎಣಿಕೆಯನ್ನು ಯಶಸ್ವಿಗೊಳಿಸಲು ಆರಕ್ಷಕ ಇಲಾಖೆ ಹಾಗೂ ಕಂದಾಯ ಇಲಾಖೆಯು ಎಲ್ಲಾ ವ್ಯವಸ್ಥೆಯನ್ನು ಕೈಗೊಂಡಿದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
