ಕುರುಬ ಸಮುದಾಯಕ್ಕೆ ಎಸ್.ಟಿ. ಮೀಸಲಾತಿ ಕೇಳುವ ಹಕ್ಕು ನಮಗಿದೆ

ಶಿರಾ : 

     ಕಾಡು-ಮೇಡುಗಳಲ್ಲಿ, ಗುಡ್ಡಗಾಡುಗಳಲ್ಲಿ ಅಲೆಯುತ್ತಾ ಅಲೆಮಾರಿಗಳಂತೆ ಬದುಕುತ್ತಿರುವ ಕುರುಬ ಸಮುದಾಯವನ್ನು ಪ.ಪಂಗಡಕ್ಕೆ ಸೇರ್ಪಡೆ ಮಾಡುವ ಸಂಬಂಧ ಸರ್ಕಾರವನ್ನು ಒತ್ತಾಯಿಸುವ ಹಕ್ಕು ನಮಗಿದ್ದು ಮೀಸಲಾತಿ ಲಭ್ಯವಾಗುವವರೆಗೂ ಹೋರಾಟ ನಿಲ್ಲದ ಎಂದು ಶ್ರೀ ಕಾಗಿನೆಲೆ ಕನಕ ಗುರುಪೀಠದ ಪೀಠಾಧ್ಯಕ್ಷ ಶ್ರೀ ನಿರಂಜನಾನಂದಪುರಿಸ್ವಾಮೀಜಿ ಹೇಳಿದರು.

     ಕಾಗಿನೆಲೆಯಿಂದ ಬೆಂಗಳೂರಿಗೆ ಎಸ್.ಟಿ. ಮೀಸಲಾತಿಗಾಗಿ ಒತ್ತಾಯಿಸಿ ಹೊರಟಿರುವ ಪಾದಯಾತ್ರೆಯು ಹೆದ್ದಾರಿಯ ಕಳ್ಳಂಬೆಳ್ಳವನ್ನು ಶುಕ್ರವಾರ ಮಧ್ಯಾನ್ಹ ತಲುಪಿದ್ದು ಈ ಪಾದಯಾತ್ರೆಯ ಸಭೆಯನ್ನು ಉದ್ದೇಶಿಸಿ ಶ್ರೀಗಳು ಮಾತನಾಡಿದರು.

      ಕುರುಬ ಸಮುದಾಯದ ಒಗ್ಗಟ್ಟಿನ ಪ್ರರ್ಶನವನ್ನು ಸರ್ಕಾರಗಳು ಎಂದೂ ಕೂಡಾ ಕಂಡಿರಲಿಲ್ಲ. ಕಾಗಿನೆಲೆಯಿಂದ ಪಾದಯಾತ್ರೆ ಹೊರಟ ನಂತರ ದಿನ ದಿನಕ್ಕೂ ಈ ಯಾತ್ರೆಯ ಕಿಚ್ಚು ಹೆಚ್ಚಾಗಿದ್ದು ಫೆ:7 ರಂದು ರಾಜಧಾನಿಯಲ್ಲಿ ಸೇರುವ ಜನಸಂಖ್ಯೆಗೆ ಸರ್ಕಾರ ಬಗ್ಗಲೇ ಬೇಕು. ನಮ್ಮ ಮೀಸಲಾತಿಯನ್ನು ನಮಗೆ ನೀಡುವ ಕೆಲಸ ಮೊದಲಾಗಬೇಕು ಎಂದರು.

      ಹೊಸದುರ್ಗ ಶಾಖಾ ಮಠದ ಶ್ರೀ ಈಶ್ವರಾನಂದಪುರಿಸ್ವಾಮೀಜಿಗಳು ಮಾತನಾಡಿ ನಾಯಕ ಜನಾಂಗ ಕತ್ತಲಲ್ಲಿ ಇದೆ ಎಂದು ದೇವೇಗೌಡರು ಪ್ರಭಾವ ಬೀರಿ ಉಗ್ರಪ್ಪ, ವೀರಣ್ಣ, ಹಾವನೂರು ಎಲ್ಲರೂ ಕೂಡಿ ಆ ಸಮಾಜವನ್ನು ಎಸ್.ಟಿ.ಗೆ ಸೇರಿಸಲು ಮುಂದಾದಾಗಲು ನಮ್ಮ ಕುರುಬ ಸಮುದಾಯ ಪ್ರಶ್ನೆ ಮಾಡಲಿಲ್ಲ. ಅನೇಕ ಸಂದರ್ಬಗಳಲ್ಲಿ ತಾವೂ ಕೂಡಾ ಕತ್ತಲಲ್ಲಿ ಬದುಕುತ್ತಿದ್ದರೂ ಕುರುಬ ಸಮುದಾಯ ಎಲ್ಲವನ್ನೂ ಸಹಿಸಿಕೊಂಡು ಬಂದಿದ್ದು ಇನ್ನು ಮುಂದೆ ಸುಮ್ಮನೇ ಕೂರಲು ಸಾದ್ಯವಿಲ್ಲ ಎಂದರು.

      ಕುರುಬ ಸಮುದಾಯವೂ ಕೂಡಾ ಒಂದು ಬುಡಕಟ್ಟು ಜನಾಂಗವಾಗಿದ್ದು ಇದೀಗ ಪ್ರಭಾವಿ ಸಮುದಾಯಗಳು ಕೂಡಾ ವರ್ಗ2 ಎ ಗೆ ಬರಲಿದ್ದು ಇನ್ನು ಮುಂದೆ ಕುರುಬರಿಗೆ ಉಳಿಗಾಲವೇ ಇರುವುದಿಲ್ಲ. ಹೀಗಾಗಿ ನಮ್ಮ ಹಕ್ಕನ್ನು ನಾವು ಪ್ರತಿಪಾಧನೆ ಮಾಡುವ ಅಗತ್ಯವಿದೆ ಎಂದು ಸ್ವಾಮೀಜಿ ಹೇಳಿದರು.

      ಈಗಾಗಲೇ ಬೀದರ್, ಗುಲ್ಬರ್ಗ, ಯಾದಗಿರಿ ಹಾಗೂ ಕೊಡಗು ಭಾಗದಲ್ಲಿ ಕುರುಬರು ಎಸ್.ಟಿ. ಮೀಸಲಾತಿ ಪಡೆದಿದ್ದಾರೆ. ನಾವು ಹೊಸದಾಗಿ ಮೀಸಲಾತಿ ಕೊಡಿ ಎಂದು ಕೇಳುತ್ತಿಲ್ಲ. ಹಾಲಿ ಇರುವ ನಾಲ್ಕು ಜಿಲ್ಲೆಗಳನ್ನೂ ಸೇರ್ಪಡೆ ಮಾಡಿಕೊಂಡಂತೆ ರಾಜ್ಯದ ಎಲ್ಲಾ ಕುರುಬ ಸಮುದಾಯವನ್ನೂ ಎಸ್.ಟಿ.ಗೆ ಸೇರಿಸುವ ಒತ್ತಾಯ ನಮ್ಮದು ಎಂದು ಶ್ರೀ ಈಶ್ವರಾನಂದಪುರಿಸ್ವಾಮೀಜಿ ತಿಳಿಸಿದರು.

      ಮಧ್ಯಾನ್ಹ ಊಟದ ನಂತರ ಸಹಸ್ರಾರು ಮಂದಿ ಪಾದಯಾತ್ರಿಗಳು ಹೆದ್ದಾರಿಯಗುಂಡ ವಿವಿಧ ಸ್ವಾಮೀಜಿಗಳ ಒಟ್ಟಿಗೆ ಶೀಬಿಯತ್ತ ಪ್ರಯಾಣ ಬೆಳೆಸಿದರು. ರಾಜ್ಯದ ವಿವಿಧ ಜಿಲ್ಲೆಗಳ ಅನೇಕ ಕುರುಬ ಸಮುದಾಯದ ಬಂಧುಗಳು ಪಾದಯಾತ್ರೆಯಲ್ಲಿ ಸಂಚರಿಸುತ್ತಿರುವುದು ಯಾತ್ರೆಯ ಕಿಚ್ಚನ್ನು ಹೆಚ್ಚಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link