ಶಿರಾ ಬೀಡಿ ಕಾರ್ಮಿಕರ ಕಾಲನಿ : ಅಪೂರ್ಣ ಮನೆಗಳ ಬಗ್ಗೆ ಕ್ರಮ

  ಶಿರಾ :

      2008 ರಲ್ಲಿ ಶಿರಾ ನಗರದಲ್ಲಿರುವ ನಿರಾಶ್ರಿತ ಅರ್ಹ ಬೀಡಿ ಕಾರ್ಮಿಕರ ಕುಟುಂಬಗಳಿಗೆ ಸೂರನ್ನು ಒದಗಿಸುವ ಸಲುವಾಗಿ ಬೆಂಗಳೂರಿನ ಕೆಂಗೇರಿಯಲ್ಲಿರುವ ಕರ್ನಾಟಕ ರಾಜ್ಯ ಬೀಡಿ ಕಾರ್ಮಿಕರ ವಿವಿಧೋದ್ದೇಶ ಸಹಕಾರ ಸಂಘವು 281 ಮಂದಿ ಬೀಡಿ ಕಾರ್ಮಿಕರಿಂದ ಸಹಾಯ ಧನದ ಮುಂಗಡ ಹಣವನ್ನು ಪಾವತಿಸಿಕೊಂಡು ನಿವೇಶನದ ಜೊತೆಗೆ ಮನೆ ಕಟ್ಟಿಕೊಡಲು ಮುಂದಾಗಿದ್ದು, ಈವರೆಗೆ ಅಪೂರ್ಣಗೊಂಡ ಕೆಲ ಮನೆಗಳೂ ಸೇರಿದಂತೆ ಅರ್ಹ ಫಲಾನುಭವಿಗಳಿಗೆ ಸೂರು ಒದಗಿಸುವ ನಿಟ್ಟಿನಲ್ಲಿ ಸಹಕಾರ ಸಂಘ ಕ್ರಮ ವಹಿಸಿದೆ ಎಂದು ಸಂಘದ ಅಧ್ಯಕ್ಷ ವೆಂಕಟೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

      ಅರ್ಹರಿಗೆ ವಸತಿಗಳನ್ನು ಕಲ್ಪಿಸುವ ಸಲುವಾಗಿ ರಾಜ್ಯ ಬೀಡಿ ಕಾರ್ಮಿಕರ ವಿವಿಧೋದ್ದೇಶ ಸಹಕಾರ ಸಂಘವು ರಾಜೀವ್‍ಗಾಂಧಿ ಗ್ರಾಮೀಣ ವಸತಿ ನಿಗಮದ ಮೊರೆ ಹೋಯಿತು. ಸದರಿ ಸಂಘದ ಕೋರಿಕೆಯ ಮೇರೆಗೆ 281 ಬೀಡಿ ಕಾರ್ಮಿಕರಿಗೆ ಕೆಲ ಷರತ್ತುಗಳಿಗೆ ಒಳಪಟ್ಟು ಯೋಜನೆಯನ್ನು ಅನುಷ್ಠಾನಗೊಳಿಸಲು ರಾಜೀವ್‍ಗಾಂಧಿ ನಿಗಮದಿಂದ 27.6.2011 ರಂದು ಅನುಮೋದನೆಯನ್ನೂ ನೀಡಿತ್ತು.

     ಭಾರತ ಸರ್ಕಾರ ಕಾರ್ಮಿಕ ಕಲ್ಯಾಣ ಆಯುಕ್ತರ ಮೂಲಕ ಸಹಾಯ ಧನ ಪ್ರತಿ ಮನೆಗೆ 40,000 ರೂ.ಗಳಂತೆ ಒಟ್ಟು 112.40 ಲಕ್ಷ ರೂ, ವಾಜಪೇಯಿ ವಸತಿ ಯೋಜನೆಯಡಿಯಲ್ಲಿ ಪ್ರತಿ ಮನೆಗೆ 50,000 ರೂ.ಗಳಂತೆ ಒಟ್ಟು 140.50 ಲಕ್ಷ ರೂ. ಫಲಾನುಭವಿಗಳ ವಂತಿಕೆಯ ಹಣ ತಲಾ 10,000 ರೂ.ಗಳಂತೆ ಒಟ್ಟು 281 ಮಂದಿ ಫಲಾನುಭವಿಗಳಿಂದ ಒಟ್ಟು 28.10 ಲಕ್ಷ ರೂ.ಗಳನ್ನು ಪಡೆಯಲಾಗಿತ್ತು. ಆದರೆ IಊSUP ಏಉಖಊಅಐ ಹೌಸಿಂಗ್ ಸಾಲ ಮಂಜೂರಾಗದ ಪರಿಣಾಮ ಕೆಲ ಮನೆಗಳ ಕಾಮಗಾರಿ ಅಪೂರ್ಣಗೊಳ್ಳಲು ಕಾರಣವಾಗಿದೆ ಎಂದು ಅವರು ತಿಳಿಸಿದ್ದಾರೆ.

      281 ಮನೆಗಳ ಪೈಕಿ 24 ಮನೆಗಳು ರೂಫ್ ಲೆವೆಲ್ ಆಗಿವೆ, 32 ಮನೆಗಳ ಲಿಂಟಲ್ ಲೆವೆಲ್‍ವರೆಗೂ ಕಾಮಗಾರಿ ನಡೆದಿದೆ. 26 ಮನೆಗಳಿಗೆ ಕಿಟಕಿ, ಚೌಕಟ್ಟು, ಬಾಗಿಲುಗಳ ಕಾಮಗಾರಿ ನಡೆಯಬೇಕಿದೆ. ಸುಮಾರು 50 ಲಕ್ಷ ರೂ.ಗಳ ಅಂದಾಜು ವೆಚ್ಚದ ಕಾಮಗಾರಿ ಬಾಕಿ ಇದೆ. ಕೋವಿಡ್ ಹಿನ್ನೆಲೆಯಲ್ಲಿ ಇಲಾಖಾ ಮಟ್ಟದ ಕಡತಗಳ ವಿಲೇವಾರಿಯಾಗದೆ ಬಾಕಿ ಉಳಿದ ಪರಿಣಾಮ ಕಾಮಗಾರಿ ಕುಂಠಿತಗೊಳ್ಳಲು ಕಾರಣವಷ್ಟೇ ಅಲ್ಲದೆ, ಹೌಸಿಂಗ್ ಸಾಲಕ್ಕಾಗಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರದ ಮೂಲಕ ಮನವಿ ಮಾಡಲಾಗಿದೆ. 281 ಗೃಹ ನಿರ್ಮಾಣಗಳಿಗಾಗಿ ಪ್ರತಿ ಸದಸ್ಯರಿಗೆ 50,000 ರೂ.ಗಳಂತೆ ಒಟ್ಟು 139.50 ಲಕ್ಷ ರೂ.ಗಳ ಸಾಲ ಮಂಜೂರಾತಿಗೆ ಮನವಿ ಮಾಡಲಾಗಿದೆ ಎಂದು ವೆಂಕಟೇಶ್ ತಿಳಿಸಿದ್ದಾರೆ.

      5 ವರ್ಷದ ಹಿಂದೆ ಪಡೆದ ಜಮೀನು ರಿಜಿಸ್ಟರ್ ಆಗಿದ್ದು, ಕಳೆದ ಎರಡು ವರ್ಷದ ಹಿಂದೆ ಪಡೆದ 1 ಎಕರೆ ಜಮೀನು ರಿಜಿಸ್ಟರ್ ಆಗಬೇಕಿದ್ದು, ಭೂಮಿಯ ಮಾಲೀಕರಿಗೆ ಹಣ ಪಾವತಿಸಿದ ನಂತರ ಖಾತೆಯಾಗಲಿದೆ. ಎರಡನೆ ಹಂತದ ಫಲಾನುಭವಿಗಳಿಗೂ ಸೌಲಭ್ಯ ಲಭ್ಯವಾಗಲಿದೆ. ಅರ್ಹ ಫಲಾನುಭವಿಗಳು ಆತಂಕ ಪಡುವ ಅಗತ್ಯವಿಲ್ಲ. ಅಪೂರ್ಣಗೊಂಡ ಮನೆಗಳ ಕಾಮಗಾರಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ನಮ್ಮ ಸಹಕಾರ ಸಂಘವು ಎಲ್ಲಾ ರೀತಿಯ ಕ್ರಮ ವಹಿಸುತ್ತಿದೆ ಎಂದು ಅವರು ಹೇಳಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap