ಶಿರಾದಲ್ಲಿ ಕಟ್ಟಾಳುವಿನಂತಹ ಜೆ.ಡಿ.ಎಸ್. ಕಾರ್ಯಕರ್ತರಿದ್ದಾರೆ – ಎಂಎಲ್‍ಸಿ ತಿಪ್ಪೇಸ್ವಾಮಿ

ಶಿರಾ : 

      ದಿವಂಗತ ಮಾಜಿ ಸಚಿವ ಬಿ.ಸತ್ಯನಾರಾಯಣ್ ಅವರ ನೇತೃತ್ವದಲ್ಲಿ ತನ್ನದೇ ಆದ ಬಲವರ್ಧನೆಯನ್ನು ಕಂಡಿದ್ದ ಜೆ.ಡಿ.ಎಸ್. ಪಕ್ಷಕ್ಕೆ ಈಗ ಮತ್ತಷ್ಟು ಶಕ್ತಿ ತುಂಬುವ ಕೆಲಸವಾಗಬೇಕಿದ್ದು, ಈ ಕ್ಷೇತ್ರದಲ್ಲಿ ಈಗಲೂ ಪಕ್ಷದಲ್ಲಿ ಕಟ್ಟಾಳುವಿನಂತೆ ಪಕ್ಷ ಸಂಘಟನೆ ಮಾಡಬಲ್ಲ ಕಾರ್ಯಕರ್ತರಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಕೆ.ಎ.ತಿಪ್ಪೇಸ್ವಾಮಿ ಹೇಳಿದರು.

      ನಗರದ ಜೆ.ಡಿ.ಎಸ್. ಕಛೇರಿಯಲ್ಲಿ ಗುರುವಾರ ನಡೆದ ಪಕ್ಷದ ತಾಲ್ಲೂಕು ಮತ್ತು ಬೂತ್ ಮಟ್ಟದ ಸಭೆ, ವೀಕ್ಷಕರು ಮತ್ತು ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

      ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಮಾಜಿ ಪ್ರಧಾನಿಗಳಾದ ದೇವೇಗೌಡರ ಮತ್ತು ಹೆಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಇಡೀ ರಾಜ್ಯದಲ್ಲಿ ಪಕ್ಷದ ಸಂಘಟನೆಗೆ ವಿಶೇಷ ಒತ್ತು ನೀಡಲು ಕ್ರಮ ವಹಿಸಲಾಗಿದೆ. ಬೆಂಗಳೂರಿನಲ್ಲಿ ವಿಕಾಸ ಮತ್ತು ವಿಕೇಂದ್ರೀಕರಣ ಕಾರ್ಯಕ್ರಮವನ್ನು ಈಗಾಗಲೆ ಕೈಗೊಳ್ಳಲಾಗಿದ್ದು, ಪಕ್ಷದ ಸಂಘಟನೆಯ ದೃಷ್ಟಿಯಿಂದ ವೀಕ್ಷಕರನ್ನು ನೇಮಕ ಮಾಡಿ ನೂತನ ಪದಾಧಿಕಾರಿಗಳ ಆಯ್ಕೆಗೆ ಪಕ್ಷ ಮುಂದಾಗಿದೆ ಎಂದರು.

      ಶಿರಾ ಕ್ಷೇತ್ರದಲ್ಲಿ ಬಿ.ಸತ್ಯನಾರಾಯಣ್‍ರಂತೆ ಪಕ್ಷದ ಸಂಘಟನೆಯನ್ನು ಕೈಗೊಳ್ಳುವ ಸಮರ್ಥ ಮುಖಂಡರ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಕಾರ್ಯಕರ್ತರ ಸಹಮತವನ್ನು ಪಡೆದುಕೊಂಡು ಅರ್ಹ ಮುಖಂಡರನ್ನು ವಿವಿಧ ಪದಾಧಿಕಾರಿಗಳ ಸ್ಥಾನಕ್ಕೆ ನೇಮಕ ಮಾಡಲಾಗುವುದು. ಪಕ್ಷದ ಹಿತದೃಷ್ಟಿಯಿಂದ ಆಯ್ಕೆ ಮಾಡಿದ ಮುಖಂಡರು ತಮ್ಮ ಸ್ಥಾನಗಳಲ್ಲಿ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳದೆ ಪಕ್ಷ ಸಂಘಟನೆಗೆ ಮುಂದಾಗಬೇಕು ಎಂದರು.

      ಜಿಲ್ಲಾ ಜೆ.ಡಿ.ಎಸ್. ಅಧ್ಯಕ್ಷ ಆರ್.ಸಿ.ಆಂಜಿನಪ್ಪ ಮಾತನಾಡಿ, ಮುಂದೆ ಸ್ಥಳೀಯ ನಗರಸಭೆ, ತಾ.ಪಂ. ಹಾಗೂ ಜಿ.ಪಂ. ಚುನಾವಣೆಗಳು ಎದುರಾಗಲಿದ್ದು, ಎಲ್ಲಾ ಕ್ಷೇತ್ರಗಳಲ್ಲೂ ಜೆ.ಡಿ.ಎಸ್. ಮುಂಚೂಣಿಯಲ್ಲಿರುವಂತೆ ಕಾರ್ಯಕರ್ತರು ಸಂಘಟನೆಯಲ್ಲಿ ತೊಡಗಬೇಕು ಎಂದರು.

      ಬೆಳ್ಳಿ ಲೋಕೇಶ್ ಮಾತನಾಡಿ, ಶಿರಾ ನಗರವೂ ಸೇರಿದಂತೆ ಈ ಕ್ಷೇತ್ರದಲ್ಲಿ ಒಟ್ಟು 300 ಬೂತ್‍ಗಳಿದ್ದು, ಈ ಎಲ್ಲಾ ಬೂತ್‍ಗಳಿಗೂ ತಲಾ 10 ಮಂದಿಯಂತೆ ಮುಖಂಡರನ್ನು ನೇಮಕ ಮಾಡಲಾಗುವುದು. ಪಕ್ಷದ ಪದಾಧಿಕಾರಿಗಳನ್ನು ಜಾತ್ಯತೀತವಾಗಿ ಗುರ್ತಿಸಿ, ಅಧಿಕಾರವನ್ನು ಹಂಚುವ ಕೆಲಸವನ್ನು ಕಾರ್ಯಕರ್ತರುಗಳೆ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಎಲ್ಲಾ ಸಮುದಾಯಗಳನ್ನು ಒಟ್ಟುಗೂಡಿಸುವ ಕೆಲಸ ಪಕ್ಷದ ಧ್ಯೇಯೋದ್ದೇಶವಾಗಿದೆ ಎಂದರು.

      ತಾಲ್ಲೂಕು ಜೆ.ಡಿ.ಎಸ್. ಅಧ್ಯಕ್ಷ ಆರ್.ಉಗ್ರೇಶ್ ಮಾತನಾಡಿ, ಯಾರೂ ಕೂಡ ಪಕ್ಷ ನೀಡಿದ ಅಧಿಕಾರಕ್ಕೆ ಅಂಟಿಕೊಂಡು ಕೂರಬಾರದು. ಪಕ್ಷದ ಸಂಘಟನೆಯ ದೃಷ್ಟಿಯಿಂದ ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು. ಪಕ್ಷದಲ್ಲಿ ಎಲ್ಲಾ ಸಮುದಾಯದ ಮುಖಂಡರಿಗೂ ಸ್ಥಾನಮಾನಗಳ ಅವಕಾಶ ಲಭ್ಯವಾಗುವುದು ಅಗತ್ಯ ಎಂದರು.

      ಶಾಸಕ ವೀರಭದ್ರಯ್ಯ, ಮಾಜಿ ಶಾಸಕರಾದ ತಿಮ್ಮರಾಯಪ್ಪ, ಸುಧಾಕರಲಾಲ್, ಗಂಗಣ್ಣ, ತಿಮ್ಮಾರೆಡ್ಡಿ, ಜಿ.ಪಂ. ಮಾಜಿ ಸದಸ್ಯ ಸಿ.ಆರ್.ಉಮೇಶ್, ಪಿ.ಎಲ್.ಡಿ. ಬ್ಯಾಂಕ್ ನಿರ್ದೇಶಕ ಟಿ.ಡಿ.ಮಲ್ಲೇಶ್, ಬಿ.ಸತ್ಯಪ್ರಕಾಶ್, ಬಂಡೆ ರಾಮಕೃಷ್ಣ, ಆಂಜಿನಪ್ಪ, ರವಿಶಂಕರ್, ಚಂದ್ರಶೇಖರ್, ಕೃಷ್ಣೇಗೌಡ, ಲಿಂಗದಹಳ್ಳಿ ಚೇತನ್‍ಕುಮಾರ್, ನಾಗರಾಜು, ಅರೆಹಳ್ಳಿ ಬಾಬು, ಮುದ್ದುಗಣೇಶ್, ಪರಮೇಶ್‍ಗೌಡ, ರೆಹಮತ್, ಶಕೀಲಾಬಾನು, ಪಾಂಡುರಂಗಪ್ಪ, ಪ್ರಕಾಶಗೌಡ, ಬೂವನಹಳ್ಳಿ ನಟರಾಜು, ರಾಮಕೃಷ್ಣ, ಪುಟ್ಟಸಿದ್ಧಪ್ಪ ಯಾದವ್, ಸೋಮಶೇಖರ್, ವೀರೇಂದ್ರ, ಕೋಟೆ ಮಹದೇವ ಮುಂತಾದವರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap