ಶಿರಾ :
ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಜಿಲ್ಲೆಯ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ಬಿ.ವಿ.ವೀರಪ್ಪ, ನ್ಯಾಯಮೂರ್ತಿ ನಟರಾಜ್ ರಂಗಸ್ವಾಮಿ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಜಿ.ಎಸ್.ಸಂಗ್ರೇಶಿ ಇವರುಗಳು ಶನಿವಾರ ಶಿರಾ ನಗರದ ಹೆಚ್ಚುವರಿ ಸಿವಿಲ್ ನ್ಯಾಯಾಲಯಕ್ಕೆ ಭೇಟಿ ಕೊಟ್ಟಿದ್ದರು.
ಶನಿವಾರ ಬೆಳಗ್ಗೆ ನ್ಯಾಯಾಲಯಕ್ಕೆ ಭೇಟಿ ನೀಡಿದ ಅವರು, ವಕೀಲರ ಭವನದ ಕಾಮಗಾರಿಯನ್ನೂ ವೀಕ್ಷಿಸಿದರು. ನ್ಯಾಯಾಲಯಕ್ಕೆ ಹೊಂದಿಕೊಂಡಂತೆ ಮಿನಿ ವಿಧಾನಸೌಧದದ ನೂತನ ಕಟ್ಟಡದ ನಂತರ ಖಾಲಿ ಇರುವ ಹಳೆಯ ತಹಸೀಲ್ದಾರ್ ಕಛೇರಿಯನ್ನು ವೀಕ್ಷಣೆ ಮಾಡಿದರು.
ಹಳೆಯ ತಹಸೀಲ್ದಾರ್ ಕಟ್ಟಡವು ನ್ಯಾಯಾಲಯಕ್ಕೆ ಸೂಕ್ತವಾಗಿದ್ದು, ಸದರಿ ಕಟ್ಟಡವನ್ನು ನ್ಯಾಯಾಲಯಕ್ಕೆ ಕಂದಾಯ ಇಲಾಖೆಯು ಹಸ್ತಾಂತರಿಸುವ ಸಂಬಂಧ ಶಿಫಾರಸ್ಸು ಮಾಡಲು ಸೂಚಿಸಿದರು.
ಇದೇ ಸಂದರ್ಭದಲ್ಲಿ ವಕೀಲರ ಸಂಘದಿಂದ ಹಳೆಯ ತಹಸೀಲ್ದಾರ್ ಕಛೇರಿಯನ್ನು ನ್ಯಾಯಾಲಯದ ಕೆಲಸ ಕಾರ್ಯಗಳಿಗೆ ಇಲ್ಲವೇ ತಾ. ವಕೀಲರ ಸಂಘಕ್ಕೆ ನೀಡುವಂತೆ ನ್ಯಾಯಾಧೀಶರಲ್ಲಿ ಮನವಿ ಮಾಡಿದರು.
ಸಿವಿಲ್ ನ್ಯಾಯಾಧೀಶ ಎಸ್.ಮಹೇಶ್, ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಕೆ.ಎಸ್.ಆಶಾ, ಸಿವಿಲ್ ನ್ಯಾಯಾಧೀಶರಾದ ಗೀತಾ, ವಕೀಲರ ಸಂಘದ ಅಧ್ಯಕ್ಷ ಧರಣೇಶ್‍ಗೌಡ, ಖಜಾಂಚಿ ಗುರುಮೂರ್ತಿ, ಪ್ರ. ಕಾರ್ಯದರ್ಶಿ ಕಂಬದೂರಪ್ಪ, ಉಪಾಧ್ಯಕ್ಷ ವೈ.ಟಿ.ರಾಮಚಂದ್ರಪ್ಪ, ಜಂಟಿ ಕಾರ್ಯದರ್ಶಿ ರಾಮಕೃಷ್ಣ ಸೇರಿದಂತೆ ಹಿರಿಯ ವಕೀಲರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
