ಶಿರಾ :
ಕಳೆದ ಎರಡೂವರೆ ವರ್ಷಗಳಿಂದಲೂ ತೆರವಾಗಿದ್ದ ಶಿರಾ ನಗರ ಸಭೆಯ ಚುನಾವಣೆಗೆ ಇದೀಗ ತೆರೆ ಬೀಳುವ ಎಲ್ಲಾ ಸೂಚನೆಗಳೂ ಕಂಡುಬಂದಿವೆ.
ಕಳೆದ ಎರಡೂವರೆ ವರ್ಷಗಳ ಹಿಂದೆಯೇ ಇಲ್ಲಿನ ನಗರಸಭೆಯ ಆಡಳಿತ ಮಂಡಳಿಯ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗವು ಮೀಸಲಾತಿಯನ್ನು ನಿಗಿದಿಪಡಿಸಿ ವಾರ್ಡ್‍ವಾರು ಮೀಸಲಾತಿಯನ್ನು ಪ್ರಕಟಿಸಿತ್ತು.
ಮೀಸಲಾತಿಗೆ ಸಂಬಂಧಿಸಿದಂತೆ ಅಭ್ಯರ್ಥಿ ಆಕಾಂಕ್ಷಿಗಳು ಕೆಲ ವಾರ್ಡ್‍ಗಳ ಮೀಸಲಾತಿ ಪ್ರಕಟಣೆಯ ವಿರುದ್ಧ ಉಚ್ಛ ನ್ಯಾಯಾಲಯಕ್ಕೆ ಆಕ್ಷೇಪಣೆ ಸಲ್ಲಿಸಿದ್ದರು. ಈ ಸಂಬಂಧ ನಗರಸಭೆಯ ಚುನಾವಣೆಗೆ ದಿನಾಂಕ: 9.2.2016 ರಲ್ಲಿ ಸ್ಪಷ್ಟಪಡಿಸಿರುವಂತೆ ಸರ್ಕಾರದ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ 2011ರ ಜನಗಣತಿಯನ್ನು ಆಧರಿಸಿ ದಿ: 21.1.2021 ರಂದು ನಗರಸಭೆಗೆ ವಾರ್ಡ್‍ವಾರು ಮೀಸಲಾತಿ ನಿಗದಿಪಡಿಸಿ ಕರಡು ಅಧಿಸೂಚನೆಯನ್ನು ಹೊರಡಿಸಿತ್ತು. ಸದರಿ ಅಧಿಸೂಚನೆಯನ್ನು ಪ್ರಕಟಿಸಿದ 7 ದಿನಗಳ ಒಳಗಾಗಿ ಆಕ್ಷೇಪಣೆಗಳನ್ನು ಲಿಖಿತವಾಗಿ ಸಲ್ಲಿಸಲು ಆಹ್ವಾನಿಸಲಾಗಿತ್ತು.
ಕರ್ನಾಟಕ ನಗರಸಭೆ ಕಾಯ್ದೆ 1964ರ ಕಲಂ 11ರ ಅನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಶಿರಾ ನಗರಸಭೆಯ 31 ವಾರ್ಡ್‍ಗಳಿಗೆ ಚುನಾವಣಾ ಆಯೋಗವು ಅಂತಿಮವಾಗಿ ವಾರ್ಡ್‍ವಾರು ಮೀಸಲಾತಿಯನ್ನು ಪ್ರಕಟಿಸಿದೆ. ಆಕ್ಷೇಪಣೆಗಳ ನಂತರ ವಾರ್ಡ್‍ವಾರು ಮೀಸಲಾತಿ ಪ್ರಕಟಗೊಂಡ ಕೂಡಲೇ ಶಿರಾ ನಗರದ ಜನತೆ ನಿಟ್ಟುಸಿರು ಬಿಡುವಂತಾಗಿದೆ. ಕಳೆದ ಎರಡೂವರೆ ವರ್ಷಗಳಿಂದಲೂ ಆಡಳಿತ ಮಂಡಳಿಯೇ ಇಲ್ಲದೆ ವಾರ್ಡ್‍ಗಳ ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸುವವರೇ ಇಲ್ಲದಂತಾಗಿದ್ದರು.
ವಾರ್ಡ್‍ಗಳಲ್ಲಿ ಸದಸ್ಯರು ಇಲ್ಲದ ಪರಿಣಾಮ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಂದ ಸಮಸ್ಯೆಗಳನ್ನು ನೀಗಿಸಿಕೊಳ್ಳುವುದೇ ಜನತೆಗೆ ಒಂದು ಸವಾಲಾಗಿ ಪರಿಣಮಿಸಿತ್ತು. ಇನ್ನು ಕೆಲವೇ ದಿನಗಳಲ್ಲಿ ಚುನಾವಣೆ ಘೋಷಣೆಯಾಗುವುದೆಂಬ ನಿರೀಕ್ಷೆಯು ಜನತೆಯಲ್ಲಿದ್ದು, ನಗರಸಭೆ ಚುನಾವಣೆಯನ್ನು ಕಾಯುವುದು ಅನಿವಾರ್ಯವೂ ಆಗಿದೆ.
ಮೀಸಲಾತಿ ಪಟ್ಟಿ ಪ್ರಕಟಗೊಂಡ ಕೂಡಲೇ ಆಯಾ ವಾರ್ಡ್‍ಗಳ ಅಭ್ಯರ್ಥಿ ಆಕಾಂಕ್ಷಿಗಳಲ್ಲಿ ಒಂದು ರೀತಿಯಲ್ಲಿ ಸಂಚಲನವೇ ಮೂಡಿದ್ದು, ಕಳೆದ ಎರಡೂವರೆ ವರ್ಷಗಳಿಂದಲೂ ಚುನಾವಣೆಗಾಗಿ ಬಹು ನಿರೀಕ್ಷೆಯಲ್ಲಿದ್ದವರಿಗೆ ನೆಮ್ಮದಿ ಸಿಕ್ಕಂತಾಗಿದೆ.
ವಾರ್ಡ್ ಸಂಖ್ಯೆ :
ವಾರ್ಡ್ 1 ಪರಿಶಿಷ್ಟ ಜಾತಿ,
ವಾರ್ಡ್ 2 ಹಿಂದುಳಿದ ವರ್ಗ ಎ ಮಹಿಳೆ
ವಾರ್ಡ್ 3 ಸಾಮಾನ್ಯ
ವಾರ್ಡ್ 4 ಪ.ಜಾತಿ ಮಹಿಳೆ
ವಾರ್ಡ್ 5 ಪ.ಜಾತಿ
ವಾರ್ಡ್ 6 ಹಿಂದುಳಿದ ವರ್ಗ ಬಿ ಮಹಿಳೆ
ವಾರ್ಡ್ 7 ಸಾಮಾನ್ಯ
ವಾರ್ಡ್ 8 ಹಿಂದುಳಿದ ವರ್ಗ ಎ
ವಾರ್ಡ್ 9 ಸಾಮಾನ್ಯ ಮಹಿಳೆ
ವಾರ್q 10 ಪ.ಪಂಗಡ
ವಾರ್ಡ್ 11 ಸಾಮಾನ್ಯ
ವಾರ್ಡ್ 12 ಸಾಮಾನ್ಯ
ವಾರ್ಡ್ 13 ಸಾಮಾನ್ಯ
ವಾರ್ಡ್ 14 ಹಿಂದುಳಿದ ವರ್ಗ ಎ
ವಾರ್ಡ್ 15 ಹಿಂದುಳಿದ ವರ್ಗ ಎ ಮಹಿಳೆ
ವಾರ್ಡ್ 16 ಸಾಮಾನ್ಯ ಮಹಿಳೆ
ವಾರ್ಡ್ 17 ಹಿಂದುಳಿದ ವರ್ಗ ಬಿ
ವಾರ್ಡ್ 18 ಸಾಮಾನ್ಯ
ವಾರ್ಡ್ 19 ಹಿಂದುಳಿದ ವರ್ಗ ಎ
ವಾರ್ಡ್ 20 ಸಾಮಾನ್ಯ ಮಹಿಳೆ
ವಾರ್ಡ್ 21 ಹಿಂದುಳಿದ ವರ್ಗ ಎ
ವಾರ್ಡ್ 22 ಸಾಮಾನ್ಯ
ವಾರ್ಡ್ 23 ಸಾಮಾನ್ಯ ಮಹಿಳೆ
ವಾರ್ಡ್ 24 ಸಾಮಾನ್ಯ ಮಹಿಳೆ
ವಾರ್ಡ್ 25 ಸಾಮಾನ್ಯ
ವಾರ್ಡ್ 26 ಪ.ಜಾತಿ
ವಾರ್ಡ್ 27 ಸಾಮಾನ್ಯ ಮಹಿಳೆ
ವಾರ್ಡ್ 28 ಸಾಮಾನ್ಯ ಮಹಿಳೆ
ವಾರ್ಡ್ 29 ಹಿಂದುಳಿದ ವರ್ಗ ಎ ಮಹಿಳೆ
ವಾರ್ಡ್ 30 ಪ.ಜಾತಿ ಮಹಿಳೆ
ವಾರ್ಡ್ 31 ಸಾಮಾನ್ಯ ಮಹಿಳೆ
ಮುಕ್ತಿ ಸಿಕ್ಕಂತಾಯಿತು :
ಈವರೆಗೆ ನೆನೆಗುದಿಗೆ ಬಿದ್ದಿದ್ದ ಶಿರಾ ನಗರಸಭೆಯ ಚುನಾವಣೆಗೆ ಕೊನೆಗೂ ಕಂಕಣಭಾಗ್ಯ ಒದಗಿ ಬಂದಿದೆ. ವಾರ್ಡ್‍ಗಳಲ್ಲಿ ಸದಸ್ಯರುಗಳಿಲ್ಲದೆ ಸಮಸ್ಯೆಗಳನ್ನು ನಿವೇದಿಸಿಕೊಳ್ಳಲು ಪಡಿಪಾಟಲು ಬೀಳುತ್ತಿದ್ದ ಸಾರ್ವಜನಿಕರಿಗೆ ಕೊನೆಗೂ ಮುಕ್ತಿ ಸಿಕ್ಕಂತಾಗಿದೆ. ಅಂತಿಮ ವಾರ್ಡ್‍ವಾರು ಮೀಸಲಾತಿ ಪಟ್ಟಿ ಪ್ರಕಟಗೊಂಡಿದ್ದು, ನಗರದ ಜನತೆಯ ಸಮಸ್ಯೆಗಳು ಇತ್ಯರ್ಥಗೊಳ್ಳುತ್ತವೆಯೇನೋ ಎಂದು ಕಾದು ನೋಡಬೇಕಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ