ಶಿರಾ :

ಹತ್ತು ಹಲವು ಸಮಸ್ಯೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯಾಧ್ಯಂತ ರಾಜ್ಯ ರಸ್ತೆ ಸಾರಿಗೆಯ ಸಿಬ್ಬಂಧಿ ತರಾವರಿ ಮುಷ್ಕರಗಳನ್ನು ಕೈಗೊಳ್ಳುತ್ತಿದ್ದು ಶಿರಾ ನಗರದ ಸಾರಿಗೆ ಘಟಕದ ಸಿಬ್ಬಂಧಿ ಕೂಡಾ ಕರ್ತವ್ಯಕ್ಕೆ ಹಾಜರಾಗುವುದರ ಜೊತೆಗೆ ವಿನೂತನ ಮುಷ್ಕರಗಳನ್ನು ಕೈಗೊಂಡಿದ್ದಾರೆ.
ಗುರುವಾರ ಬೆಳಿಗ್ಗೆಯಿಂದಲೂ ಕಪ್ಪುಪಟ್ಟಿ ಧರಿಸಿ ಕರ್ತವ್ಯಕ್ಕೂ ಹಾಜರಾಗಿ ಮುಷ್ಕರ ನಡೆಸಿದ ಸಿಬ್ಬಂಧಿ ಶುಕ್ರವಾರ ಸಂಜೆ ಬಸ್ ನಿಲ್ದಾಣದಲ್ಲಿ ಬೋಂಡಾ, ಬಜ್ಜಿ ಹಾಗೂ ಚುರುಮುರಿ ಮಾರಾಟ ಮಾಡಿ ಸರ್ಕಾರವನ್ನು ಎಚ್ಚರಿಸುವ ಪ್ರಯತ್ನ ಮಾಡಿದರು.
ಸಾರಿಗೆ ಸಿಬ್ಬಂಧಿಯಾದ ಶ್ರೀರಂಗ, ಸಾದಿಕ್(ಅಧ್ಯಕ್ಷರು), ಲಿಂಹಪ್ಪ(ಖಜಾಂಚಿ), ಕಲಾ, ಶಶಿರೇಖಾ, ಸುರೇಶ್, ಸುಧೀಂದ್ರ, ಪ್ರಕಾಶ್, ಬೂತೇಶ್, ಕಾಂತರಾಜು, ಸರಸ್ವತಿ, ತಿಮ್ಮರಾಜು, ಮುಭಾರಕ್, ಓಬಣ್ಣ ಮುಂತಾದವರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








