ದೆಹಲಿಯ ರೈತರ ಹೋರಾಟ ಬೆಂಬಲಿಸಿ ಪದವೀಧರನ ಪಾದಯಾತ್ರೆ

 ಶಿರಾ :

      ಹತ್ತು ಹಲವು ಸಮಸ್ಯೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ದೇಶದ ರೈತರು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸಿ ಎಂಟೆಕ್ ಪದವೀಧರರೊಬ್ಬರು ನಡೆಸುತ್ತಿರುವ ಪಾದಯಾತ್ರೆ ಸಂಬಂಧ ತಾಲ್ಲೂಕು ರೈತ ಸಂಘವು ಪಾದಯಾತ್ರೆಯ ಮೂಲಕ ಆಗಮಿಸಿದ ಪದವೀಧರ ಟೆಕ್ಕಿಯನ್ನು ಮಂಗಳವಾರ ಶಿರಾಕ್ಕೆ ಬರ ಮಾಡಿಕೊಂಡಿತು.

      ಬಾಗಲಕೋಟೆ ಮೂಲದ ನಾಗರಾಜ್ ಕಲಗುಟಿಕರ್ ರಾಜ್ಯದ ಜಿಯೋ ಸ್ಪೇಷಿಯಲ್ ಎಂಜಿನಿಯರಿಂಗ್‍ನಲ್ಲಿ ಎಂಟೆಕ್ ಪದವೀಧರನಾಗಿದ್ದು, ಅನ್ನದಾತರು ದೆಹಲಿಯಲ್ಲಿ ನಿರಂತರವಾಗಿ ನಡೆಸುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸಿ ಮಲೈ ಮಹದೇಶ್ವರ ಬೆಟ್ಟದಿಂದ ಪಾದಯಾತ್ರೆಯಲ್ಲಿ ವಿವಿಧ ಜಿಲ್ಲೆ, ತಾಲ್ಲೂಕುಗಳಲ್ಲಿ ಸಂಚರಿಸಿ ದೆಹಲಿಗೆ ಪಾದಯಾತ್ರೆ ನಡೆಸಿದ್ದಾರೆ.

     ಈ ಪಾದಯಾತ್ರಿಯು ಮಂಗಳವಾರ ಶಿರಾ ನಗರಕ್ಕೆ ಆಗಮಿಸಿದಾಗ ತಾಲ್ಲೂಕು ರೈತ ಸಂಘ ಅವರನ್ನು ಬರಮಾಡಿಕೊಂಡು ಅಭಿನಂದಿಸಿತು. ದೆಹಲಿಗೆ 6,000 ಕಿ.ಮೀ. ಪಾದಯಾತ್ರೆಯ ಮೂಲಕ ತಾವು ತೆರಳುತಿದ್ದು ಪ್ರತಿ ದಿನ 30 ಕಿ.ಮೀ. ಮಾತ್ರ ಪಾದಯಾತ್ರೆಯಲ್ಲಿ ಸಂಚರಿಸುತ್ತೇನೆ. ಸಾಮಾಜಿಕ ಸೇವೆಯಲ್ಲಿ ನಿರತನಾಗಿರುವ ತಾವು ಅಕ್ರಮ ಮರಳು, ಗಣಿಗಾರಿಕೆ, ಭ್ರಷ್ಟಾಚಾರದ ವಿರುದ್ಧವೂ ಹೋರಾಟ ಮಾಡಿಕೊಂಡು ಬಂದಿದ್ದೇನೆಂದು ಪತ್ರಕರ್ತರಿಗೆ ತಿಳಿಸಿದರು.

      ಜಿಲ್ಲಾ ರೈತ ಸಂಘದ ಕಾರ್ಯದರ್ಶಿ ಧನಂಜಯಾರಾಧ್ಯ, ತಾ. ರೈತ ಸಂಘದ ಅಧ್ಯಕ್ಷ ಲಕ್ಷ್ಮಣಗೌಡ, ಪ್ರ. ಕಾರ್ಯದರ್ಶಿ ನಾದೂರು ಕೆಂಚಪ್ಪ, ಮುಕುಂದಪ್ಪ, ತಿಮ್ಮಯ್ಯ, ಶಶಿಕುಮಾರ್, ನರಸಿಂಹಯ್ಯ, ಕಗ್ಗಲಡು ಮಹಾಲಿಂಗಪ್ಪ, ರಾಮಣ್ಣ ಮುಂತಾದವರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap