ಶಿರಾ:
ಕೋವಿಡ್ ಸೋಂಕಿನ ಎರಡನೇ ಅಲೆ ಶಿರಾ ನಗರವೂ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲೂ ಕೂಡಾ ಹೆಚ್ಚಾಗುತ್ತಿದ್ದು ನಗರಸಭೆಯ ಅಧಿಕಾರಿಗಳು ಮತ್ತು ಸಿಬ್ಬಂಧಿ ಕಟ್ಟುನಿಟ್ಟನ ಕ್ರಮ ಕೈಗೊಂಡರೂ ಬಹುತೇಕ ಸಾರ್ವಜನಿಕರು ಮಾಸ್ಕ್ ಧರಿಸದೆಯೇ ಓಡಾಡುತ್ತಿರುವುದನ್ನು ಕಂಡು ತಾಲ್ಲೂಕು ದಂಡಾಧಿಕಾರಿಗಳೇ ಈಗ ದಿನ ನಿತ್ಯವೂ ರಸ್ತೆಗಿಳಿದು ದಂಡ ವಿಧಿಸತೊಡಗಿದ್ದಾರೆ.
ಸರ್ಕಾರವು ಕಳೆದ ಎರಡು ದಿನಗಳ ಹಿಂದಷ್ಟೇ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ನೀಡಿದ್ದರೂ ಅನಾವಶ್ಯಕವಾಗಿ ಓಡಾಡುವುದೂ ಸೇರಿದಂತೆ ಮಾಸ್ಕ್ ಧರಿಸದೆ ವ್ಯವಹಾರ ಮಾಡುವ ಅಂಗಡಿ, ಮುಗ್ಗಟ್ಟುಗಲು, ವಿವಿಧ ವ್ಯಾರಸ್ಥರ ಅಂಗಡಿಗಳಿಗೂ ತೆರಳಿ ಮಾಸ್ಕ್ ಧರಿಸದವರ ಮೇಲೆ ದಂಡ ವಿಧಿಸಿ ತಾಲ್ಲೂಕು ದಂಡಾಧಿಕಾರಿ ಶ್ರೀಮತಿ ಮಮತಾ ಅಂಗಡಿಗಳ ಮಾಲೀಕರಿಗೆ ಸೂಚನೆಗಳನ್ನೂ ನೀಡಿದ್ದಾರೆ.
ರಾಜ್ದಲ್ಲಿ 144 ಸೆಕ್ಷನ್ ಜಾರಿಯಲ್ಲಿದ್ದು ಯಾರೂ ಕೂಡಾ ಅನಗತ್ಯವಾಗಿ ಓಡಾಡದಂತೆ ಎಚ್ಚರಿಕೆಯನ್ನು ನೀಡಿದ್ದಾರೆ. ನಗರಸಭೆಯ ಆಯುಕ್ತ ಪರಮೇಶ್ವರಪ್ಪ ಸೇರಿದಂತೆ ಇಲಾಖೆಯ ಸಿಬ್ಬಂಧಿ ಈ ಸಂದರ್ಬದಲ್ಲಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ