ಶಿರಾ :
ಕಳೆದ ಹಲವು ದಿನಗಳಿಂದಲೂ ಕೋವಿಡ್ ಪಾಸಿಟೀವ್‍ನಿಂದ ಹೋಂ ಕ್ವಾರಂಟೇನ್‍ಲ್ಲಿಯೇ ಇದ್ದರೂ ಗುಣಪಡಿಸಿಕೊಳ್ಳಲಾಗದೆ ಮನೆಯಲ್ಲಿಯೇ ಇದ್ದ ಗುಡ್ಡದಹಟ್ಟಿ ಗ್ರಾಮದ 16 ಮಂದಿ ಸೋಂಕಿತರನ್ನು ಮನವೊಲಿಸಿ ಸರ್ಕಾರಿ ಆಸ್ಪತ್ರೆಗೆ ಕರೆ ತಂದ ಶಾಸಕರು ಚಿಕಿತ್ಸಾ ಕ್ರಮ ಕೈಗೊಳ್ಳಲು ನೆರವಾದರು.
ನಗರಕ್ಕೆ ಸಮೀಪದ ಗುಡ್ಡದಹಟ್ಟಿ ಗ್ರಾಮದ 16 ಮಂದಿಗೆ ಪಾಸಿಟೀವ್ ಬಂದ ಹಿನ್ನೆಲೆಯಲ್ಲಿ ಸದರಿ ರೋಗಿಗಳನ್ನು ಚಿಕಿತ್ಸೆಗೆ ಕರೆಸಿಕೊಳ್ಳಲು ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ಪ್ರಯತ್ನಿಸಿದರು.
ಆದರೆ ಆಸ್ಪತ್ರೆಗೆ ಬಾರದೆ ಹೋಂ ಕ್ವಾರಂಟೇನ್‍ನಲ್ಲಿಯೇ ಇದ್ದ ಇವರನ್ನು ಮನವೊಲಿಸಲು ಗುರುವಾರ ಸದರಿ ಗ್ರಾಮಕ್ಕೆ ತೆರಳಿದ ಶಾಸಕ ಡಾ.ಸಿ.ಎಂ.ರಾಜೇಶ್‍ಗೌಡ ರೋಗಿಗಳನ್ನು ಮನವೊಲಿಸಿ ಕೋವಿಡ್ ಕೇರ್ ಸೆಂಟರ್‍ಗೆ ಕರೆ ತಂದು ಚಿಕಿತ್ಸೆ ಕೊಡಿಸುವಲ್ಲಿ ಯಶಸ್ವಿಯಾದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
