ಶಿರಾ :
ಶಿರಾ ತಾಲ್ಲೂಕಿನಲ್ಲಿ ಕೋವಿಡ್ ನಿರ್ವಹಣೆಗೆ ಸಂಬಂಧಪಟ್ಟಂತೆ ಎಲ್ಲವೂ ಸರಿಯಾಗಿಯೇ ನಡೆಯುತ್ತಿದೆ ಎಂಬ ಅಂಶ ಮೇಲ್ನೋಟಕ್ಕೆ ಮಾತ್ರ ಕಾಣಬರುತ್ತಿದೆ ಎಂಬುದಕ್ಕೆ ಆರೋಗ್ಯ ಸಚಿವರ ದಿಢೀರ್ ಭೇಟಿ ಹಾಗೂ ಆರೋಗ್ಯ ಇಲಾಖೆಯ ವೈದ್ಯರ ಮೇಲೆ ಸಚಿವರು ತೆಗೆದುಕೊಂಡ ತೀವ್ರ ತರಾಟೆಯೇ ಜ್ವಲಂತ ಸಾಕ್ಷಿ ಆದ ಘಟನೆ ಗುರುವಾರ ನಡೆಯಿತು.
ಗುರುವಾರ ಮಧ್ಯಾಹ್ನ ಏಕಾಏಕಿ ಶಿರಾ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಆರೋಗ್ಯ ಸಚಿವ ಡಾ.ಸುಧಾಕರ್ ಅವರು ಜಿಲ್ಲಾ ಉಸ್ತುವಾರಿ ಸಚಿವರೊಟ್ಟಿಗೆ ಭೇಟಿ ನೀಡಿ, ಆಸ್ಪತ್ರೆಯ ಕೋವಿಡ್ ಸೆಂಟರ್ ಹಾಗೂ ಒಳರೋಗಿಗಳ ಕೊಠಡಿಗಳಿಗೂ ಭೇಟಿ ನೀಡಿ ಪರಿಶೀಲಿಸಿದ ನಂತರ, ಇಲ್ಲಿನ ಆಡಳಿತ ವೈದ್ಯಾಧಿಕಾರಿ ಡಾ.ಶ್ರೀನಾಥ್ ಅವರ ಮೇಲೆ ಫುಲ್ ಗರಂ ಆಗಿಯೇ ಬಿಟ್ಟರು…!.
ದಿನ ದಿನಕ್ಕೂ ಶಿರಾ ತಾಲ್ಲೂಕಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು ,ಕೋವಿಡ್ ಸೆಂಟರ್ಗಳಿಗೆ ದಾಖಲಾದ ರೋಗಿಗಳನ್ನು ವೈರಿಗಳೆಂಬಂತೆ ಕಾಣಲಾಗುತ್ತಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ. ಸರ್ಕಾರದ ಸೌಲಭ್ಯಗಳನ್ನು ರೋಗಿಗಳಿಗೆ ತಲುಪಿಸಲು ಕೂಡ ನಿಮ್ಮಿಂದ ಸಾದ್ಯವಾಗುತ್ತಿಲ್ಲ. ಕರ್ತವ್ಯ ನಿರ್ವಹಿಸಲು ಸಾದ್ಯವಾಗದಿದ್ದರೆ ಮೊದಲು ಕೆಲಸ ಬಿಟ್ಟು ಹೊರ ಹೋಗಿ ಎಂದು ಆರೋಗ್ಯ ಸಚಿವರು ವೈದ್ಯರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು ಎನ್ನಲಾಗಿದೆ.
ಸಚಿವರೊಂದಿಗೆ ಸ್ಥಳಕ್ಕೆ ಆಗಮಿಸಿದ್ದ ವಿಧಾನ ಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ, ಕೋವಿಡ್ ಸೆಂಟರ್ನಲ್ಲಿರುವ ರೋಗಿಗಳನ್ನು ವೈದ್ಯರು ಕೋವಿಡ್ ಸೆಂಟರ್ಗೆ ಭೇಟಿ ನೀಡಿ ಮಾತನಾಡಿಸುತ್ತಲೂ ಇಲ್ಲ. ಅವರಿಗೆ ಚಿಕಿತ್ಸೆ ನೀಡಲು ಕೂಡ ಕೋವಿಡ್ ಸೆಂಟರ್ ಒಳಗೆ ಹೋಗುತ್ತಿಲ್ಲ. ಕೆಲ ನರ್ಸ್ಗಳು ಮಾತ್ರ ಕೋವಿಡ್ ಸೆಂಟರ್ಗೆ ಹೋಗುತ್ತಾರಷ್ಟೆ. ಸೋಂಕಿತ ರೋಗಿಗಳನ್ನು ಇಲ್ಲಿ ವೈರಿಗಳಂತೆ ಕಾಣಲಾಗುತ್ತಿದೆ ಎಂದು ದೂರಿದರು.
ನಗರವೂ ಸೇರಿದಂತೆ ತಾಲ್ಲೂಕು ಮಟ್ಟದಲ್ಲಿ ಕೋವಿಡ್ನಿಂದ ಮೃತಪಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ಸಂಬಂಧ ನಿಖರವಾದ ಅಂಕಿ-ಅಂಶಗಳು ಸ್ಥಳೀಯ ವೈದ್ಯರಿಂದ ಲಭ್ಯವಾಗುತ್ತಿಲ್ಲವೆಂಬ ಚಿದಾನಂದ್ ಎಂ.ಗೌಡ ಅವರ ಸಂಶಯಕ್ಕೆ, ಜಿಲ್ಲಾ ಆರೋಗ್ಯಾಧಿಕಾರಿಗಳೊಂದಿಗೆ ಈ ಸಂಬಂಧ ಮಾತನಾಡುತ್ತೇನೆಂದು ಆರೋಗ್ಯ ಸಚಿವರು ಪ್ರತಿಕ್ರ್ರಿಯಿಸಿದರು.
ಶಿರಾ ಕೋವಿಡ್ ಸೆಂಟರ್ನಲ್ಲಿ ದಾಖಲಾದ ಸೋಂಕಿತ ಅನೇಕ ರೋಗಿಗಳು ಆ್ಯಕ್ಸಿಜನ್ ಪಡೆಯುತ್ತಿದ್ದು, ಅಗತ್ಯವಾದಷ್ಟು ಆ್ಯಕ್ಸಿಜನ್ ನೀಡದೆ ಒಂದೆರಡು ಗಂಟೆಗಳಿಗೊಮ್ಮೆ ಆ್ಯಕ್ಸಿಜನ್ ನೀಡಿ, ಈ ಆ್ಯಕ್ಸಿಜನ್ ತೆಗೆದು ಮತ್ತಲವು ರೋಗಿಗಳಿಗೆ ಆ್ಯಕ್ಸಿಜನ್ ಪೂರೈಸಲಾಗುತ್ತಿದೆ. ಆರೋಗ್ಯ ಇಲಾಖೆಯ ಸಿಬ್ಬಂದಿ ಈ ರೀತಿ ಮಾಡಿದರೆ ಅಪಾಯದ ಅಂಚಿನಲ್ಲಿರುವ ಸೋಂಕಿತ ರೋಗಿಗಳ ಪಾಡೇನಾಗಬೇಕು ಸಾರ್? ಈ ವ್ಯವಸ್ಥೆ ಮೊದಲು ಸರಿಯಾಗಬೇಕು ಎಂದು ರೇಷ್ಮೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಆರ್.ಗೌಡ ಆರೋಗ್ಯ ಸಚಿವರ ಗಮನಕ್ಕೆ ತಂದರು.
ರೀ…ಸುಮ್ನೆ ಇರಿ ಗೌಡ್ರೆ ಎಲ್ಲಾದರೂ ಉಂಟಾ? ಈ ರೀತಿ ಮಾಡಲು ಸಾಧ್ಯವಿಲ್ಲ. ಇಡೀ ಜಿಲ್ಲೆಯಲ್ಲಿ ಸೋಂಕಿತ ರೋಗಿಗಳನ್ನು ಎಲ್ಲೂ ಈ ರೀತಿ ಕಾಣುತ್ತಿಲ್ಲ. ಜಿಲ್ಲೆಯಲ್ಲಿ ಸಾರ್ವಜನಿಕರಿಂದ ಯಾವುದೇ ದೂರುಗಳೂ ಇಲ್ಲಾ ಎಂದು ಎಸ್.ಆರ್.ಗೌಡರ ಆರೋಪವನ್ನು ತಳ್ಳಿ ಹಾಕಿದ ಜಿಲ್ಲಾ ಸಚಿವರು, ಇಡೀ ಜಿಲ್ಲೆಯಲ್ಲಿ ಎಲ್ಲವೂ ಸರಿಯಾಗಿಯೇ ಇದೆ ಎಂಬ ರೀತಿ ಸಮರ್ಥಿಸಿಕೊಂಡರು ಎನ್ನಲಾಗಿದೆ.
ಆರೋಗ್ಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ವಿಧಾನಪರಿಷತ್ ಸದಸ್ಯರು ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸ್ಥಳೀಯ ಶಾಸಕರಾದ ಡಾ.ಸಿ.ಎಂ.ರಾಜೇಶ್ಗೌಡರು ಕೂಡ ಸ್ಥಳದಲ್ಲಿಯೇ ಇದ್ದರಾದರೂ ಆರೋಗ್ಯ ಇಲಾಖೆಯ ಮೇಲೆ ಆರೋಗ್ಯ ಸಚಿವರು ಕಿಡಿಕಾರುವಾಗಲೂ ಶಾಸಕರು ಮೌನಕ್ಕೆ ಶರಣಾಗಿದ್ದರು.
ಶಾಸಕರ ಮೌನಕ್ಕೆ ಅಚ್ಚರಿ ಅನ್ನಿಸಿದರೂ ಈವರೆಗೆ ಶಾಸಕರು ಅವರ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡುತ್ತಿರುವುದು ಹಗಲಿನಷ್ಟೇ ಸತ್ಯ. ಆಮ್ಲಜನಕ ಸಾಂದ್ರಕಗಳ ಪೂರೈಕೆ, ಆಮ್ಲಜನಕ ಉತ್ಪಾದನಾ ಘಟಕದ ಸ್ಥಾಪನೆಗೆ ಪ್ರಯತ್ನ, ಕೋವಿಡ್ ಸೆಂಟರ್ಗಳಿಗೆ ಭೇಟಿ, ತಮ್ಮ ಪಕ್ಷದ ಕಾರ್ಯಕರ್ತರ ಸಹಾಯವಾಣಿ ಪಡೆಯ ನಿಷ್ಠಾವಂತಿಕೆಯ ಕರ್ತವ್ಯಗಳ ಬಗ್ಗೆ ಒಂದಷ್ಟು ಉತ್ತಮ ಪ್ರತಿಕ್ರಿಯೆ ಇದೆಯಾದರೂ ಕೋವಿಡ್ ರೋಗಿಗಳಿಗೆ ಕೋವಿಡ್ ಸೆಂಟರ್ಗಳಲ್ಲಿ ನೀಡುತ್ತಿರುವ ಚಿಕಿತ್ಸೆ, ಆರೋಗ್ಯ ಇಲಾಖೆಯ ಕರ್ತವ್ಯ ಲೋಪಗಳ ಬಗ್ಗೆ ತಾಲ್ಲೂಕಿನ ಸಾರ್ವಜನಿಕರಲ್ಲಿ ವ್ಯಾಪಕ ಅಸಮಾಧಾನ ಮೂಡತೊಡಗಿದೆ.
ಶಾಸಕರು ಕ್ಷೇತ್ರದ ತುಂಬಾ ಓಡಾಡಿಕೊಂಡು ಕೋವಿಡ್ ನಿರ್ವಹಣೆಗೆ ಕ್ರಿಯಾಶೀಲ ಕಾಳಜಿಯನ್ನು ತೋರುತ್ತಿದ್ದರೂ, ಕನಿಷ್ಠ ಪಕ್ಷ ಸ್ಥಳೀಯ ಆರೋಗ್ಯ ಇಲಾಖೆಯನ್ನು ಸುಧಾರಣೆಗೊಳಿಸಲಾಗಲಿಲ್ಲವಲ್ಲವೆಂಬ ಕೊರಗು ಸಾರ್ವಜನಿಕರಲ್ಲಿ ಮೂಡತೊಡಗಿದೆ. ಇಷ್ಟಕ್ಕೂ ಬಿ.ಜೆ.ಪಿ. ಪಕ್ಷದ ಕೆಲ ಜನಪ್ರತಿನಿಧಿಗಳು ಹಾಗೂ ಅಧಿಕಾರದ ಚುಕ್ಕಾಣಿ ಹಿಡಿದವರೆ ತಾಲ್ಲೂಕು ಆಡಳಿತದ ಬಗ್ಗೆ ಗರಂ ಆಗಿರುವುದನ್ನು ಕಂಡರೆ ಎಲ್ಲಿ ಎಡವಟ್ಟಾಗಿದೆ ಅಂಬುದನ್ನು ಶಾಸಕರೆ ಅರಿತುಕೊಳ್ಳಬೇಕಿದೆ.
ಶಾಸಕರು ಕ್ಷೇತ್ರದ ತುಂಬಾ ಓಡಾಡಿಕೊಂಡು ಕೋವಿಡ್ ನಿರ್ವಹಣೆಗೆ ಕ್ರಿಯಾಶೀಲ ಕಾಳಜಿಯನ್ನು ತೋರುತ್ತಿದ್ದರೂ, ಕನಿಷ್ಠ ಪಕ್ಷ ಸ್ಥಳೀಯ ಆರೋಗ್ಯ ಇಲಾಖೆಯನ್ನು ಸುಧಾರಣೆಗೊಳಿಸಲಾಗಲಿಲ್ಲವಲ್ಲವೆಂಬ ಕೊರಗು ಸಾರ್ವಜನಿಕರಲ್ಲಿ ಮೂಡತೊಡಗಿದೆ. ಇಷ್ಟಕ್ಕೂ ಬಿ.ಜೆ.ಪಿ. ಪಕ್ಷದ ಕೆಲ ಜನಪ್ರತಿನಿಧಿಗಳು ಹಾಗೂ ಅಧಿಕಾರದ ಚುಕ್ಕಾಣಿ ಹಿಡಿದವರೇ ತಾಲ್ಲೂಕು ಆಡಳಿತದ ಬಗ್ಗೆ ಗರಂ ಆಗಿರುವುದನ್ನು ಕಂಡರೆ ಎಲ್ಲಿ ಎಡವಟ್ಟಾಗಿದೆ ಅಂಬುದನ್ನು ಶಾಸಕರೇ ಅರಿತುಕೊಳ್ಳಬೇಕಿದೆ.
ಆರೋಗ್ಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ವಿಧಾನಪರಿಷತ್ ಸದಸ್ಯರು ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಬದಲ್ಲಿ ಸ್ಥಳೀಯ ಶಾಸಕರಾದ ಡಾ.ಸಿ.ಎಂ.ರಾಜೇಶ್ಗೌಡರು ಕೂಡಾ ಸ್ಥಳದಲ್ಲಿಯೇ ಇದ್ದರಾದರೂ ಆರೋಗ್ಯ ಇಲಾಖೆಯ ಮೇಲೆ ಆರೋಗ್ಯ ಸಚಿವರು ಕಿಡಿಕಾರುವಾಗಲೂ ಶಾಸಕರು ಮೌನಕ್ಕೆ ಶರಣಾಗಿದ್ದರು.
ಶಿರಾ ನಗರವೂ ಸೇರಿದಂತೆ ತಾಲ್ಲೂಕು ಮಟ್ಟದಲ್ಲಿ ಕೋವಿಡ್ನಿಂದ ಮೃತ ಪಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು ಈ ಸಂಬಂಧ ನಿಖರವಾದ ಅಂಕಿ-ಅಂಶಗಳು ಸ್ಥಳೀಯ ವೈದ್ಯರಿಂದ ಲಭ್ಯವಾಗುತ್ತಿಲ್ಲವೆಂಬ ಚಿದಾನಂದ್ ಎಂ.ಗೌಡ ಅವರ ಪ್ರಶ್ನೆಗೆ ಜಿಲ್ಲಾ ಆರೋಗ್ಯಾಧಿಕಾರಿಗಳೊಂದಿಗೆ ಈ ಸಂಬಂಧ ಮಾತನಾಡುತ್ತೇನೆಂದು ಆರೋಗ್ಯ ಸಚಿವರು ಪ್ರತಿಕ್ರ್ರಿಯಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
