ತುಮಕೂರು :
ಶಿರಾ ತಾಲೂಕು ಉಜ್ಜನಕುಂಟೆ ಗ್ರಾಮದಲ್ಲಿ ಜೂ.24ರಂದು ಬೆಳಿಗ್ಗೆ 8.45ರ ಸಮಯದಲ್ಲಿ ಮನೆಯಲ್ಲೇ ಬೆಂಕಿ ಅವಘಡದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದು ಕೊಲೆ ಶಂಕೆ ವ್ಯಕ್ತವಾಗಿದೆ.
ಗ್ರಾಮದ ಸರೋಜಮ್ಮ (65) ಮೃತ ದುರ್ದೆವಿಯಾಗಿದ್ದು, ಸೊಸೆ ಸುಧಾಮಣಿ ಬಗ್ಗೆ ಅತ್ತೆ ಸರೋಜಮ್ಮ ಅನುಮಾನ ವ್ಯಕ್ತಪಡಿಸುತ್ತಿದ್ದ ಹಿನ್ನೆಲೆಯಲ್ಲಿ ಸೊಸೆಯೇ ಬೆಂಕಿ ಹಚ್ಚಿ ಕೃತ್ಯವೆಸಗಿರುವುದಾಗಿ ಅಳಿಯ ಪ್ರೇಮ್‍ಕುಮಾರ್ ದೂರು ನೀಡಿದ್ದಾರೆ.
ತಾವರೆಕೆರೆ ಪಿಎಸ್ಸೈ ಪಾಲಾಕ್ಷಯ್ಯ ಪ್ರಕರಣ ದಾಖಲಿಸಿಕೊಂಡು ಸೊಸೆ ಸುಧಾಮಣಿ ಹಾಗೂ ಹಿರಿಯೂರಿನ ಶ್ರೀರಂಗಪ್ಪ (35) ಎಂಬುವರನ್ನು ಬಂಧಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ