ನೀರು ಕುಡಿಯಲು ಹೋದ ಬಾಲಕನನ್ನು ಥಳಿಸಿದ ಜಮೀನು ಮಾಲಿಕ

ಶಿರಾ : 

      ಕುರಿಗಳಿಗೆ ಆಹಾರವನ್ನು ಹುಡುಕಿಕೊಂಡು ನೆರೆಯ ಜಿಲ್ಲೆಗಳು ಹಾಗೂ ಅಂತಾರಾಜ್ಯಗಳಿಗೂ ತೆರಳುವುದು ಬರದ ಬೀಡಾದ ಶಿರಾ ಭಾಗದ ಕುರಿಗಾಹಿಗಳ ಪ್ರತಿ ವರ್ಷದ ಅಲೆಮಾರಿ ಜೀವನವಾಗಿದೆ. ಈ ರೀತಿ ಕುರಿಗಳ ಹಿಂಡನ್ನು ಒಡೆದುಕೊಂಡು ನೆರೆ ಜಿಲ್ಲೆಯೊಂದಕ್ಕೆ ಹೋಗಿ ಪಾಳು ಭೂಮಿಯಲ್ಲಿ ಕುರಿ ಮೇಯಿಸುತ್ತಿದ್ದ ಶಿರಾ ಭಾಗದ ಕುರಿಗಾಹಿ ಬಾಲಕನೊಬ್ಬನನ್ನು ಜಮೀನು ಮಾಲೀಕರು ಮರವೊಂದಕ್ಕೆ ಕಟ್ಟಿ ಹಾಕಿ, ಹಿಂಸಿಸಿದ ಘಟನೆಯೊಂದು ಶ್ರೀರಂಗಪಟ್ಟಣದ ಬೆಳಗೊಳದ ಕರಾವಳಿ ಫುಡ್‍ಕೋರ್ಟ್ ಹಿಂಭಾಗದ ಜಮೀನಿನಲ್ಲಿ ಸೋಮವಾರ ನಡೆದಿದೆ.

      ಶಿರಾ ತಾಲ್ಲೂಕು ತಾವರೇಕೆರೆ ಸಮೀಪದ ಗೊಲ್ಲರಹಟ್ಟಿಯ ಕುರಿಗಾಹಿಗಳು ಕುರಿಗಳ ಮೇವಿಗಾಗಿ ಕುರಿ ಮಂದೆಯನ್ನು ಒಡೆದು ಕೊಂಡು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಸಮೀಪದ ಬೀಳು ಬಿದ್ದ ಜಮೀನೊಂದರಲ್ಲಿ ಕುರಿ ಮೇಯಿಸುತ್ತಿದ್ದು, ಊಟಕ್ಕೆಂದು ತೋಟವೊಂದಕ್ಕೆ ನೀರು ತರಲು ಹೋದಾಗ, ಜಮೀನಿನ ಮಾಲೀಕ ಹರ್ಷ ಎಂಬುವರು ಕುರಿಗಾಹಿಯನ್ನು ಮರಕ್ಕೆ ಕಟ್ಟಿ ಹಾಕಿ ಹಿಂಸಿಸಿದ್ದಾರೆ.

      ಸದರಿ ಘಟನೆಯನ್ನು ಕಂಡ ಸ್ಥಳೀಯರೆ ಮುಂದಾಗಿ ಆರಕ್ಷಕ ಠಾಣೆಗೆ ದೂರು ನೀಡಿದ್ದು, ಈ ಸಂಬಂಧ ಕೃಷ್ಣರಾಜಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಶಿರಾ ತಾಲ್ಲೂಕು ಯಾದವ ಸಂಘ ತೀವ್ರವಾಗಿ ಖಂಡಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link