ಶಿರಾ :
ಹತ್ತು ಹಲವು ಬಾರಿ ಗ್ರಾಮ ಪಂಚಾಯ್ತಿ, ತಾಲ್ಲೂಕು ಆಡಳಿತ ಹಾಗೂ ಶಾಸಕರಿಗೆ ಮನವಿ ಸಲ್ಲಿಸಿದರೂ ರಸ್ತೆಯ ಅಭಿವೃದ್ಧಿ ಮಾಡದೆ ಜನಪ್ರತಿನಿಧಿಗಳು ಕೈಚೆಲ್ಲಿ ಕೂತ ಪರಿಣಾಮ ಗ್ರಾಮದ ಮಹಿಳೆಯರು ಸಿಟ್ಟಿಗೆದ್ದು ರಸ್ತೆಯ ನಡುವೆಯೆ ರಾಗಿ ಬೆಳೆಯ ಪೈರನ್ನು ನಾಟಿ ಮಾಡುವ ಮೂಲಕ ವಿಭಿನ್ನ ಪ್ರತಿಭಟನೆ ಮಾಡಿದ್ದಾರೆ.
ತಾಲ್ಲೂಕಿನ ಕೊಟ್ಟ ಗ್ರಾಮ ಪಂಚಾಯ್ತಿಯ ಓಜುಗುಂಟೆ ಗೊಲ್ಲರಹಟ್ಟಿ ಗ್ರಾಮದ ರಸ್ತೆ ಸರಿ ಇಲ್ಲದೆ ಜನರು ಓಡಾಡುವುದೇ ಕಷ್ಟವಾಗಿದೆ. ಶಿರಾ ನಗರಕ್ಕೆ ಸಮೀಪದಲ್ಲಿಯೆ ಈ ಗ್ರಾಮ ಇದ್ದರೂ ಯಾವ ಜನಪ್ರತಿನಿಧಿಗಳೂ ಈ ಗ್ರಾಮದ ರಸ್ತೆ ಅಭಿವೃದ್ಧಿಗೆ ಕಿಂಚಿತ್ತೂ ಪ್ರಯತ್ನಿಸಲೇ ಇಲ್ಲ. ಈ ಪರಿಣಾಮ ಕುಪಿತಗೊಂಡ ಗ್ರಾಮದ ಮಹಿಳೆಯರು ಸೋಮವಾರ ರಾತ್ರಿ ಮಳೆ ಬಂದು ರಸ್ತೆ ಅಧ್ವಾನವಾಗಿದ್ದನ್ನು ಕಂಡು ರಸ್ತೆಯ ಮಧ್ಯದಲ್ಲಿಯೇ ರಾಗಿ ಪೈರನ್ನು ನಾಟಿ ಮಾಡಿ ಪ್ರತಿಭಟನೆ ನಡೆಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
