ಶಿರಾ :
ಚಲಿಸುತ್ತಿದ್ದ ವ್ಯಾಗನ್-ಆರ್ ಕಾರಿನ ಟೈರ್ ಬಸ್ರ್ಟ್ ಆಗಿ ರಸ್ತೆಯ ಡಿವೈಡರ್‍ಗೆ ಡಿಕ್ಕಿ ಹೊಡೆದು ದಂಪತಿ ಸಾವನ್ನಪ್ಪಿರುವ ಘಟನೆ ಶಿರಾ ಬೈಪಾಸ್ ರಸ್ತೆಯಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.
ಶನಿವಾರ(ಆ.28) ಮಧ್ಯಾಹ್ನ ಹಾವೇರಿಯಿಂದ ಬೆಂಗಳೂರಿಗೆ ಸಾಫ್ಟ್‍ವೇರ್ ಎಂಜಿನಿಯರ್‍ಗಳಾದ ವಿನಾಯಕಸ್ವಾಮಿ ಬೆಳಗಿ(36) ಹಾಗೂ ಪತ್ನಿ ಶಿಲ್ಪ(32) ತಮ್ಮ 5 ವರ್ಷದ ಮಗುವಿನ ಜೊತೆಯಲ್ಲಿ ಬರುವಾಗ ಶಿರಾ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಾರು ಟೈರ್ ಬಸ್ರ್ಟ್ ಆಗಿ ಕಾರು ಡಿವೈಡರ್‍ಗೆ ಡಿಕ್ಕಿ ಹೊಡೆದು, ಶಿಲ್ಪ ಸ್ಥಳದಲ್ಲಿಯೇ ಸಾವನ್ನಪ್ಪಿ, ಪತಿ ವಿನಾಯಕಸ್ವಾಮಿ ಬೆಳಗಿ ಬೆಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಮೃತಪಟ್ಟಿದ್ದಾರೆ.
ಈ ದಂಪತಿಯ 5 ವರ್ಷದ ಮಗಳು ತುಮಕೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ