ಅರ್ಧ ಬೆಲೆಗೆ ಚಿನ್ನ ನೀಡುವುದಾಗಿ ನಂಬಿಸಿ 16 ಲಕ್ಷ ವಂಚನೆ!!

ಶಿರಾ : 

      ನಗರದ ಹಳೆಯ ರಾಷ್ಟ್ರೀಯ ಹೆದ್ದಾರಿ -4 ರ ಬೇಕರಿ ಬಳಿ ಶುಕ್ರವಾರ ಅರ್ಧ ಬೆಲೆಗೆ ಚಿನ್ನ ನೀಡುವುದಾಗಿ ನಂಬಿಸಿ  16 ಲಕ್ಷ ಹಣ ಪಡೆದು ನಕಲಿ ಚಿನ್ನದ ನಾಣ್ಯ ನೀಡಿ ವಂಚಿಸಿ ಪರಾರಿಯಾಗಿದ್ದಾರೆ.

     ಫೋನ್ ನಲ್ಲಿ ಪರಿಚಯವಾಗಿ ಅರ್ಧ ಬೆಲೆಗೆ ಚಿನ್ನ ನೀಡುವುದಾಗಿ ಹೇಳಿದಾಗ ಅವರ ಬಗ್ಗೆ ಏನನ್ನು ವಿಚಾರಿಸದೆ ಅವರ ಮಾತಿನ ಮೋಡಿಗೆ ಸಿಲುಕಿ ಅತಿ ಆಸೆಗೆ ಬಲಿಯಾಗಿ ಅಪರಿಚಿತರಿಗೆ ಹಣ ನೀಡಿದ ತಮಿಳುನಾಡಿನ ಚೆನ್ನೈ ನಗರದ ಪುದುನಗರ ವಾಸಿಯಾದ ರಜನೀಯಮ್ಮ ವಂಚನೆಗೆ ಒಳಗಾದ ಮಹಿಳೆಯಾಗಿದ್ದಾಳೆ.

       ರಜನೀಯಮ್ಮ ಎನ್ನುವ ಮಹಿಳೆಗೆ ಪರಮೇಶ್ವರಿ ಎನ್ನುವರು ಪದೇ ಪದೇ ಫೋನ್ ಮಾಡಿ ನಮಗೆ ನಿಧಿ ಸಿಕ್ಕಿದೆ. ನಮ್ಮ ಬಳಿ ಹಳೆಯ ಚಿನ್ನದ ನಾಣ್ಯಗಳಿದ್ದು ನಮಗೆ ಹಣದ ಅವಶ್ಯಕತೆ ಇರುವುದರಿಂದ ನಮಗೆ ನಗದು ಹಣ ನೀಡಿದರೆ ನಿಮಗೆ ಅರ್ಧ ಬೆಲೆಗೆ ಚಿನ್ನದ ನಾಣ್ಯ ನೀಡುವುದಾಗಿ ನಂಬಿಸಿದ್ದಾರೆ.

ವಂಚಕರ ಮಾತಿಗೆ ಮರುಳಾದ ರಜನೀಯಮ್ಮ ತನ್ನ ಬಳಿಯಿದ್ದ ಸುಮಾರು 430 ಗ್ರಾಂ ಚಿನ್ನದ ಆಭರಣಗಳನ್ನು ಒತ್ತೆ ಇಟ್ಟು 16 ಲಕ್ಷ ಹಣವನ್ನು ತೆಗೆದುಕೊಂಡು ತಮಿಳುನಾಡಿನಿಂದ ಕರ್ನಾಟಕಕ್ಕೆ ಬಂದಿದ್ದಾಳೆ.

     ಹಣ ತೆಗೆದುಕೊಂಡು ಎಲ್ಲಿಗೆ ಬರಬೇಕು ಎಂದು ರಜನೀಯಮ್ಮ ಕೇಳಿದಾಗ ಚಿತ್ರದುರ್ಗಕ್ಕೆ ಬರುವಂತೆ ಹೇಳಿದ್ದಾರೆ. ನಂತರ ಪದೇ ಪದೇ ಸ್ಥಳವನ್ನು ಬದಲಾಯಿಸಿ ಕೊನೆಗೆ ಶಿರಾದಲ್ಲಿ ಚಿನ್ನ ನೀಡುವುದಾಗಿ ಹೇಳಿದ್ದಾರೆ.

      ಶಿರಾದಲ್ಲಿ ಬೆಳಿಗ್ಗೆ 7.30 ರ ಸಮಯದಲ್ಲಿ ಬಾಗಿಲು ಹಾಕಿದ್ದ ಬೇಕರಿ ಬಳಿ 16 ಲಕ್ಷ ಹಣ ಪಡೆದು ನಕಲಿ ಚಿನ್ನದ ನಾಣ್ಯಗಳನ್ನು ನೀಡಿ ಪೊಲೀಸರು ಬರುತ್ತಿದ್ದಾರೆ ತಕ್ಷಣ ಜಾಗ ಖಾಲಿ ಮಾಡಿ ಎಂದು ಅವರು ತರಾತುರಿಯಲ್ಲಿ ಕಾರಿನಲ್ಲಿ ಹೊರಟು ಹೋಗಿದ್ದಾರೆ. ಅವರು ಹೋದ ನಂತರ ಇವರು ನಾಣ್ಯಗಳನ್ನು ಪರಿಶೀಲಿಸಿದಾಗ ನಕಲಿ ಚಿನ್ನ ನೀಡಿದ್ದು ಮೋಸ ಹೋಗಿರುವುದು ಗೊತ್ತಾಗಿದೆ. ಈ ಬಗ್ಗೆ ಶಿರಾ ನಗರ ಠಾಣೆಯ ಪೊಲೀಸರಿಗೆ ದೂರು ನೀಡಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link