ಶಿರಾ :
ವಿಷಪೂರಿತವಾದ ಹುಣಸೆಹಣ್ಣನ್ನು ತಿಂದು 12 ಕುರಿಗಳು ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಮೇಲ್ಕೋಟೆ ಗೊಲ್ಲರಹಟ್ಟಿಯಲ್ಲಿ ನಡೆದಿದೆ.
ತಾಲ್ಲೂಕಿನ ಮೇಲ್ಕೋಟೆ ಗೊಲ್ಲರಹಟ್ಟಿ ಮೂರ್ತಿ ಎಂಬ ಕುರಿಗಾಹಿಗೆ ಸೇರಿದ ಕುರಿಗಳು ಜಮೀನೊಂದರಲ್ಲಿ ಬಿದ್ದಿದ್ದ ಹುಣಸೆಹಣ್ಣನ್ನು ತಿಂದಿವೆ. ಹುಣಸೆಬೀಜದ ಸಮೇತ ಹಣ್ಣನ್ನು ತಿಂದಿದ್ದು ಬೀಜಗಳು ಕುರಿಯ ದೇಹದಲ್ಲಿ ಸೇರಿ ವಿಷಪೂರಿತವಾಗಿರಬಹುದೆಂದು ಶಂಕಿಸಲಾಗಿದೆ.
ಬುಧವಾರ ರಾತ್ರಿ ಹೊಟ್ಟೆ ನೋವಿನಿಂದ ನರಳುತ್ತಿದ್ದ 32 ಕುರಿಗಳಿಗೆ ಪಶುಪಾಲನಾ ಇಲಾಖೆಯ ಸಿಬ್ಬಂದಿ ಚಿಕಿತ್ಸೆ ನೀಡಿದರೂ ಕೂಡ 12 ಕುರಿಗಳು ಸಾವನ್ನಪ್ಪಿದ್ದು, 20 ಕುರಿಗಳು ಚಿಂತಾಜನಕ ಸ್ಥಿತಿಯಲ್ಲಿವೆ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
