ಶಿರಾ : ಮುಜರಾಯಿ ಇಲಾಖೆಯಿಂದ ಸರ್ಕಾರಿ ಉರ್ದು ಶಾಲೆಗೆ ಬೀಗ ; ಪ್ರತಿಭಟನೆ!!

 ಶಿರಾ:

      ಶಾಲೆಯಲ್ಲಿ ಕೂತು ಪಾಠ ಕೇಳುತ್ತಾ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುತ್ತಿದ್ದ ಮಕ್ಕಳು ಶಾಲೆಯ ನಿವೇಶನದ ಕಾನೂನಾತ್ಮಕ ತೊಡಕಿನಿಂದಾಗಿ ಮಕ್ಕಳ ಭವಿಷ್ಯ ಬೀದಿಗೆ ಬಿದ್ದ ಪರಿಣಾಮ ಪೋಷಕರು ಹಾಗೂ ಶಾಲಾ ಮಕ್ಕಳು ಬೀಗ ಜಡಿದ ಶಾಲೆಯ ಮುಂದೆ ಕೂತು ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ಶಿರಾ ನಗರದಲ್ಲಿ ನಡೆದಿದೆ.

      ಶಿರಾ ನಗರದ ಅಸ್ಸಾರ್ ಮೊಹಲ್ಲಾದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಒಟ್ಟು 64 ಮಂದಿ ವಿದ್ಯಾರ್ಥಿಗಳಿದ್ದಾರೆ. ಮೂರು ಮಂದಿ ಶಿಕ್ಷಕರಿದ್ದಾರೆ. ಶಾಲೆಯನ್ನು ನಡೆಸುವ ಸಲುವಾಗಿ ಈ ಹಿಂದೆ ಇದ್ದ ರೇಷ್ಮೆ ಇಲಾಖೆಯ ಕೊಠಡಿಗಳನ್ನು ಕ್ಷೇತ್ರ ಶಿಕ್ಷಣ ಇಲಾಖೆಗೆ ಹಸ್ತಾಂತರಿಸಲಾಗಿತ್ತು.

      ಹಾಲಿ ಶಾಲೆಯು ನಡೆಯುತ್ತಿರುವ ಜಾಗವು ಮುಜರಾಯಿ ಇಲಾಖೆಯ ಶ್ರೀ ಷಹರ್‍ಗಂಜ್ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಸಂಬಂಧಿಸಿದ್ದು ಎನ್ನಲಾಗಿದ್ದು, ಖಾತೆ ಸಂಖ್ಯೆ 2333/2229/7892 ರಲ್ಲಿ 140×140 ಗಜಗಳುಳ್ಳ ಈ ಜಮೀನಿನಲ್ಲಿ ಇದ್ದ ರೇಷ್ಮೆ ಇಲಾಖೆಯ ಕಛೇರಿಯನ್ನು ಹಳೆಯ ಆಸ್ಪತ್ರೆಗೆ ವರ್ಗಾವಣೆಗೊಳಿಸಲಾಗಿತ್ತು. ಸದರಿ ಆಸ್ತಿಗೆ ಸಂಬಂಧಿಸಿದಂತೆ ಕಳೆದ ಹಲವು ವರ್ಷಗಳಿಂದಲೂ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು.

      ಕಳೆದ ಕೆಲ ದಿನಗಳ ಹಿಂದೆ ಪ್ರಕರಣ ಇತ್ಯರ್ಥಗೊಂಡು ಮುಜರಾಯಿ ಇಲಾಖೆಗೆ ಈ ಆಸ್ತಿ ಸಂಬಂಧಿಸಿದ್ದು ಎಂಬ ಪ್ರಕರಣ ಇತ್ಯರ್ಥಗೊಂಡ ಪರಿಣಾಮ ಮುಜರಾಯಿ ಇಲಾಖೆಯ ತಾಲ್ಲೂಕು ದಂಡಾಧಿಕಾರಿಗಳು ಕ್ಷೇತ್ರ ಶಿಕ್ಷಣ ಇಲಾಖೆಗೆ ಮಾಹಿತಿ ನೀಡಿ ಸದರಿ ಶಾಲಾ ಕೊಠಡಿಗೆ ಸೋಮವಾರ ರಾತ್ರಿಯೆ ಬೀಗ ಜಡಿಸಿದ್ದಾರೆ.

     ಮಂಗಳವಾರ ಬೆಳಗ್ಗೆ ಶಾಲಾ ಮಕ್ಕಳು ಶಾಲೆಗೆ ಹಾಜರಾಗಲು ಬಂದ ಕೂಡಲೆ ಶಾಲಾ ಕೊಠಡಿಗಳಿಗೆ ಬೀಗ ಮುದ್ರೆ ಜಡಿದು ಸೀಲ್ ಹಾಕಿರುವುದನ್ನು ಕಂಡು ದಂಗಾಗಿದ್ದಾರೆ. ಶಾಲೆಯ ಶಿಕ್ಷಕರು ಕೂಡ ಶಾಲಾ ಕೊಠಡಿಯಿಂದ ಹೊರಗುಳಿದಿದ್ದಾರೆ. ಶಾಲೆಗೆ ಮುಜರಾಯಿ ಇಲಾಖೆಯು ಬೀಜ ಜಡಿದಿರುವುದನ್ನು ಕಂಡು ಹಾಗೂ ಶಾಲೆ ನಡೆಸಲು ಪರ್ಯಾಯ ವ್ಯವಸ್ಥೆ ಕಲ್ಪಿಸದ ಪರಿಣಾಮ ಶಾಲಾ ಮಕ್ಕಳ ಪೋಷಕರು ಕ್ಷೇತ್ರ ಶಿಕ್ಷಣ ಇಲಾಖೆಯ ವಿರುದ್ಧ ಮಂಗಳವಾರ ಶಾಲೆಯ ಎದುರು ಪ್ರತಿಭಟನೆ ನಡೆಸಿದರು.

     ಸದರಿ ಶಾಲೆಯಲ್ಲಿ 64 ಮಂದಿ ಮಕ್ಕಳಿದ್ದು ಬೇಗಂ ಮೊಹಲ್ಲಾ, ಬೀಡಿ ಕಾಲನಿ, ಅಸ್ಸಾರ್ ಮೊಹಲ್ಲಾ, ಗೌಳಿಗರಹಟ್ಟಿ, ಆಸೀಂ ಲೇಔಟ್ ಸೇರಿದಂತೆ ವಿವಿಧ ಬಡಾವಣೆಗಳಿಂದ ಮಕ್ಕಳು ಈ ಶಾಲೆಗೆ ಬರುತ್ತಿದ್ದು, ಇದೇ ಭಾಗದಲ್ಲಿ ಬೇರೆ ಕೊಠಡಿಯಲ್ಲಾದರೂ ಶಾಲೆಯನ್ನು ತೆರೆಯುವಂತೆ ಒತ್ತಾಯಿಸಿದರು.

      ಸದರಿ ಪ್ರತಿಭಟನೆಗೆ ಸಂಬಂಧಪಟ್ಟಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದು, ಪ್ರತಿಭಟನೆಯ ಸ್ಥಳಕ್ಕೆ ನಾನು ಭೇಟಿ ನೀಡಿದ್ದು, ಪೋಷಕರ ಮನವೊಲಿಸುವ ಪ್ರಯತ್ನ ಮಾಡಿದ್ದೇನೆ. ಸದರಿ ಶಾಲಾ ಕೊಠಡಿಗಳ ಸ್ಥಳವು ಮುಜರಾಯಿಗೆ ಸೇರಿದ್ದು, ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥಗೊಂಡಿದೆ. ಸದರಿ ಸ್ಥಳವು ಶಿಕ್ಷಣ ಇಲಾಖೆಯದ್ದಲ್ಲ. ಹೀಗಾಗಿ ಸಮೀಪದಲ್ಲಿಯೇ ಇರುವ ಸರ್ಕಾರಿ ಜಾಗದಲ್ಲಿರುವ ರೇಷ್ಮೆ ಇಲಾಖೆಯ ಕೊಠಡಿಯಲ್ಲಿಯೆ ಪಾಠ ಪ್ರವಚನ ನಡೆಸಲು ಸೂಚನೆ ನೀಡಲಾಗಿದೆ ಎಂದು ಬಿ.ಇ.ಓ. ಶಂಕರಪ್ಪ

      ಸದರಿ ಶಾಲಾ ಕೊಠಡಿಗಳ ಸ್ಥಳವು ಮುಜರಾಯಿಗೆ ಸೇರಿದ್ದು, ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥಗೊಂಡಿದೆ. ಸದರಿ ಸ್ಥಳವು ಶಿಕ್ಷಣ ಇಲಾಖೆಯದ್ದಲ್ಲ. ಹೀಗಾಗಿ ಸಮೀಪದಲ್ಲಿಯೆ ಇರುವ ಸರ್ಕಾರಿ ಜಾಗದಲ್ಲಿರುವ ರೇಷ್ಮೆ ಇಲಾಖೆಯ ಕೊಠಡಿಯಲ್ಲಿಯೇ ಪಾಠ ಪ್ರವಚನ
ನಡೆಸಲು ಸೂಚನೆ ನೀಡಲಾಗಿದೆ.

– ಶಂಕರಪ್ಪ, ಬಿ.ಇ.ಓ., ಶಿರಾ.

Recent Articles

spot_img

Related Stories

Share via
Copy link