*ಶಿರಸಿ*:
ಕರ್ನಾಟಕದ ಅತಿದೊಡ್ಡ ಜಾತ್ರೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಶ್ರೀ ಮಾರಿಕಾಂಬಾ ಜಾತ್ರೆ ಫೆಬ್ರವರಿ 24 ರಿಂದ ಮಾರ್ಚ್ 4 ರವರೆಗೆ ನಿಗದಿಯಾಗಿದೆ.
ಇಂದು ಮಾರಿಕಾಂಬಾ ದೇವಾಲಯದ ಸಭಾ ಮಂಟಪದಲ್ಲಿ ಜಾತ್ರೆ ಪೂರ್ವಭಾವಿ ಸಭೆ ನಡೆಯಿತು.ನಂತರ ಜಾತ್ರಾ ಮೂಹೂರ್ತ ಮತ್ತು ಯುಗಾಧಿತನಕದ ಜಾತ್ರೆ ಹಾಗು ಮರುಪ್ರತಿಷ್ಟಾವಿಧಿ ಚಾಲನೆ ಕುರಿತು ಚರ್ಚಿಸಿ ನಿರ್ಧಾರ ಕೈಗೊಳ್ಳಲಾಯಿತು.
ಸಭೆಯಲ್ಲಿ ಶಾಸಕ ಬೀಮಣ್ಣ ನಾಯ್ಕ್, AC ಕಾವ್ಯಾರಾಣಿ, ನಗರಸಭೆ ಪೌರಾಯುಕ್ತ ಪ್ರಕಾಶ ಚನ್ನಪ್ಪನವರ, DYSP ಶ್ರೀಮತಿ ಗೀತಾ ಪಾಟೀಲ್, CPI ಶಶಿಕಾಂತ ವರ್ಮಾ, ಮಾರಿಕಾಂಬಾ ದೇಗುಲದ ಅಧ್ಯಕ್ಷ ಆರ್. ಜಿ. ನಾಯ್ಕ್, ಉಪಾಧ್ಯಕ್ಷ ಸುದೆeಶ ಜೋಗಳೇಕರ್, ಜಗದೀಶ ಗೌಡ, ಹಾಗೂ ಧರ್ಮದರ್ಶಿಗಳು, ಬಾಬದಾರರು, ಸಾರ್ವಜನಿಕರು ಉಪಸ್ಥಿತರಿದ್ದರು.








