ತುಮಕೂರು
ನಗರದ ಶ್ರೀ ಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯದಲ್ಲಿ 14ನೇ ಪದವಿ ಪ್ರದಾನ ಸಮಾರಂಭ ಸೆ. 16 ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ.
ಶ್ರೀ ಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಸಿದ್ದಗಂಗಾ ಮಠದ ಹಿರಿಯ ಶ್ರೀಗಳಾದ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಕೃಪಾಶೀರ್ವಾದದೊಂದಿಗೆ ನಡೆಯಲಿರುವ 14ನೇ ಪದವಿ ಪ್ರದಾನ ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ವಹಿಸುವರು ಎಂದು ಎಸ್‌ಐಟಿ ಸಿಇಓ ಡಾ. ಶಿವಕುಮಾರಯ್ಯ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಯುರೋಫಿನ್ಸ್ ಐ.ಟಿ. ಸಲ್ಯೂಷನ್ಸ್ ಇಂಡಿಯಾ ಪ್ರೆöÊ.ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾದ ಹರೀಶ್ ರವಿ ಅವರು ಭಾಗವಹಿಸಿ ಪದವಿ ಪ್ರದಾನ ಸಮಾರಂಭದ ಭಾಷಣ ಮಾಡುವರು. ಶ್ರೀ ಸಿದ್ದಗಂಗಾ ವಿದ್ಯಾಸಂಸ್ಥೆಯ ಮತ್ತು ಎಸ್‌ಐಟಿ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಕಾಲೇಜಿನ ಆಡಳಿತ ಮಂಡಳಿ, ಅಕಾಡೆಮಿಕ್ ಕೌನ್ಸಿಲ್‌ನ ಸದಸ್ಯರು ಮತ್ತು ಉದ್ಯಮ, ಶಿಕ್ಷಣ ಕ್ಷೇತ್ರದ ಆಹ್ವಾನಿತರು, ವಿದ್ಯಾರ್ಥಿಗಳು, ಪದವೀಧರರ ಪೋಷಕರು ಭಾಗವಹಿಸುವರು ಎಂದು ವಿವರಿಸಿದರು.
14ನೇ ಪದವಿ ಪ್ರದಾನ ಸಮಾರಂಭದಲ್ಲಿ ಎಂಟೆಕ್‌ನ 18 ಅಭ್ಯರ್ಥಿಗಳು, ಎಂಜಿನಿಯರಿAಗ್‌ನ 723 ಅಭ್ಯರ್ಥಿಗಳು ಮತ್ತು ಬಿ.ಆರ್ಕ್ನ 34 ಅಭ್ಯರ್ಥಿಗಳಿಗೆ ಪದವಿ ಪ್ರಮಾಣ ಪತ್ರಗಳನ್ನು ವಿತರಿಸಲಾಗುವುದು ಎಂದರು.
64 ಚಿನ್ನದ ಪದಕ
ಶ್ರೀ ಸಿದ್ದಗಂಗಾ ಶಿಕ್ಷಣ ಸಂಸ್ಥೆ ಮತ್ತು ದಾನಿಗಳಿಂದ 64 ಚಿನ್ನದ ಪದಕಗಳನ್ನು ಸ್ಥಾಪಿಸಲಾಗಿದೆ ಎಂದು ಅವರು ಹೇಳಿದರು.
ಕ್ಯಾಂಪಸ್ ನೇಮಕಾತಿ
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ (2022-23) ನಡೆಯುತ್ತಿರುವ ಕ್ಯಾಂಪಸ್ ಉದ್ಯೋಗ ಆಯ್ಕೆ ಪ್ರಕ್ರಿಯೆಯಲ್ಲಿ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಈವರೆವಿಗೂ 250 ಪ್ರತಿಷ್ಠಿತ ಕಂಪೆನಿಗಳಿಗೆ 1250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ ಎಂದರು.
210ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕಂಪೆನಿಗಳು ವಾರ್ಷಿಕ 10 ಲಕ್ಷ ರೂ.ಗಳಿಗೂ ಹೆಚ್ಚು ಸಂಬಳ ನೀಡಿವೆ. ಸುಮಾರು 350 ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಕಂಪೆನಿಗಳು ಪೇಯ್ಡ್ ಇಂಟರ್ನಿ್ಸಪ್ ನೀಡಿವೆ ಎಂದು ಅವರು ತಿಳಿಸಿದರು.
ಪ್ರತಿಷ್ಠಿತ ಕಂಪೆನಿಗಳಾದ ಸಿಸ್ಕೋ, ಟ್ವೆಲಿಯೋ, ಇನ್ವೂ÷್ಯಟ್, ಅಮೆಜಾನ್, ಮರ್ಸಿಡೀಸ್ ಬೆನ್ಜ್, ರೆಡ್ ಬಸ್, ವಿ.ಎಂ. ವೇರ್, ಶೆಲ್, ಕಾಂಟಿನೆAಟಿಲ್ ಆಟೋಮೋಟಿವ್, ಡೆಲ್, ಜೆ.ಪಿ. ಮಾರ್ಗೋನ್, ಜಿ.ಈ. ಕಾಗ್ನೆಸೆಂಟ್, ಸೋನಿ, ಸೀಮೆನ್ಸ್, ಎನ್ ಅಂಡ್ ಟಿ ಕನ್‌ಸ್ಟçಕ್ಷನ್, ಭಾರತ್ ಪೋರ್ಜ್, ಒರಾಕಲ್ ಸೇರಿದಂತೆ ಇನ್ನಿತರೆ ಕಂಪೆನಿಗಳು ಭೇಟಿ ನೀಡಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡಿವೆ ಎಂದು ಅವರು ವಿವರಿಸಿದರು.
ಕಾಲೇಜಿನ ಇನ್ಫರ್ಮೇಷನ್ ಸೈನ್ಸ್ ಅಂಡ್ ಇಂಜಿನಿಯರಿAಗ್ ವಿಭಾಗದ ವಿದ್ಯಾರ್ಥಿ ಮೋಹಿತ್ ಕುಮಾರ್ ಕಂಪೆನಿಯ ವಾರ್ಷಿಕ 41.5 ಲಕ್ಷ ರೂ.ಗಳ ಅತ್ಯಂತ ಗರಿಷ್ಠ ಸಂಬಳ ಪಡೆಯಲು ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ ಎಂದರು.
ಅಲ್ಲದೆ 2023-24ನೇ ಸಾಲಿನಲ್ಲಿ ಇನ್ನು ಅಂತಿಮ ವರ್ಷದ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಈಗಾಗಲೇ ಪ್ರತಿಷ್ಠಿತ ಕಂಪೆನಿಗಳು ಉದ್ಯೋಗಕ್ಕಾಗಿ ಆಯ್ಕೆ ಮಾಡಿಕೊಂಡಿವೆ. ಈ ಪೈಕಿ 15 ಮಂದಿ ಒರಾಕಲ್ ಸಂಸ್ಥೆಗೆ ಸೇರಿದಂತೆ 250ಕ್ಕೂ ಹೆಚ್ಚು ಅಂತಿಮ ವರ್ಷದ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದರು.ಪತ್ರಿಕಾಗೋಷ್ಠಿಯಲ್ಲಿ ಎಸ್‌ಐಟಿ ಪ್ರಾಂಶುಪಾಲರಾದ ಪ್ರೊ. ದಿನೇಶ್ ಎಸ್.ವಿ. ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
