ದುರ್ಬಳಕೆಯಾಗುತ್ತಿವೆ ಸ್ಲೀಪರ್‌ ಬಸ್ಸುಗಳು………!

ಚೆನ್ನೈ 

      ಪ್ರಯಾಣಿಕರ ಸುರಕ್ಷತೆ ಹಾಗೂ ಆರಾಮದಾಯಕ ಪ್ರಯಾಣಕ್ಕಾಗಿ ಸ್ಲೀಪರ್ ಕೋಚ್ ಬಸ್‌ಗಳನ್ನು ಪರಿಚಯಿಸಲಾಗಿದೆ. ಆದರೀಗ ಈ ಬಸ್‌ಗಳು ಎಷ್ಟು ಸುರಕ್ಷಿತ ಎನ್ನುವ ಪ್ರಶ್ನೆಗಳು ಹುಟ್ಟಿಕೊಂಡಿವೆ. ಚೆನ್ನೈನ ಉಳುಂದೂರುಪೇಟೆ ಟೋಲ್‌ ಬಳಿ ಸ್ಲೀಪರ್ ಕೋಚ್ ಬಸ್‌ನಲ್ಲಿ ನಡೆದ ಅತ್ಯಾಚಾರ ಪ್ರಕರಣ ಪ್ರಯಾಣಿಕರನ್ನು ಬೆಚ್ಚಿ ಬೀಳಿಸಿದೆ.

     ಹೀಗಾಗಿ ಲಾಡ್ಜ್‌ಗಳಲ್ಲಿ ದಾಳಿ ನಡೆಸುತ್ತಿರುವಂತೆಯೇ ಓಮ್ನಿ ಸ್ಲೀಪರ್‌ ಕೋಚ್‌ ಬಸ್‌ಗಳ ಮೇಲೂ ದಾಳಿ ನಡೆಸಬೇಕು ಎಂಬ ಒತ್ತಾಯ ಕೇಳಿಬಂದಿದೆ. ಆರ್ಡಿನರಿ ಬಸ್‌ಗಳಿಗಿಂತ ಈಗ ಓಮ್ನಿ ಬಸ್‌ಗಳು ಹೆಚ್ಚು ಜನಪ್ರಿಯವಾಗುತ್ತಿವೆ. ಇವುಗಳನ್ನು ಎಸಿ ಬಸ್ ಎಂದು ಹೇಳಬೇಕಾಗಿಲ್ಲ. ಹಾಸಿಗೆ, ಪರದೆ, ಮಲಗುವ ವ್ಯವಸ್ಥೆ ಇತ್ಯಾದಿ ವಿಶೇಷ ಸೌಕರ್ಯಗಳೊಂದಿಗೆ ಸಜ್ಜುಗೊಂಡಿರುವ ಸ್ಲೀಪರ್ ಕೋಚ್ ಬಸ್‌ಗಳಿಗೆ ಈಗ ಬೇಡಿಕೆ ಹೆಚ್ಚಾಗಿದೆ. 

     ಪ್ರಯಾಣ ದರ ಜಾಸ್ತಿ.. ಸ್ಲೀಪರ್ ಕೋಚ್ ಬಸ್‌ಗಳಲ್ಲಿ ಹಬ್ಬ ಹರಿದಿನಗಳಲ್ಲಿ ಪ್ರಯಾಣ ದರ 3 ಪಟ್ಟು ಜಾಸ್ತಿ. ಆದರೆ ಪ್ರಯಾಣಿಕರಿಗೆ ನೆಮ್ಮದಿ ಒದಗಿಸುವ ಇಂತಹ ಓಮ್ನಿ ಬಸ್ಸುಗಳಲ್ಲಿ ನಿಗದಿತ ಸಮಯದೊಳಗೆ ತೊಂದರೆಯಿಲ್ಲದೆ ಊರುಗಳಿಗೆ ತಲುಪಬಹುದು. ಮಲಗಿಕೊಂಡು ಹೋಗುವುದರಿಂದ ಸಮಯದ ಉಳಿತಾಯ ಕೂಡ ಆಗುವುದರಿಂದ ಈ ಬಸ್‌ಗಳಿಗೆ ಬೇಡಿಕೆ ಅಧಿಕ. 

   ಬಸ್ ನೊಳಗೆ ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಚೆನ್ನೈ ಪೊಲೀಸರಿಗೆ ಸಾಕಷ್ಟು ದೂರುಗಳು ಬರುತ್ತಿವೆ. ಲಾಡ್ಜ್‌ಗಳಿಗಿಂತ ಬಸ್‌ಗಳು ಸೇಫ್ ಎಂದು ವೇಶ್ಯಾವಾಟಿಕೆ ನಡೆಯುತ್ತಿದೆ ಎನ್ನಲಾಗುತ್ತಿದೆ. ಹೀಗಾಗಿ ಪೊಲೀಸರು ಕೂಡ ಓಮ್ನಿ ಬಸ್‌ಗಳ ಮೇಲೆ ಕಣ್ಣಿಟ್ಟು ಪದೇ ಪದೇ ದಾಳಿ ನಡೆಸಿ ಅಪರಾಧ ಕಡಿಮೆ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap