ಪಾಕ್ ಗೆ ನಿದ್ದೆಗೆಡಿಸುವ ಸುದ್ದಿ, ಭಾರತದ ಈ ‘ಬಾಹುಬಲಿ’ ಮಿಸೈಲ್ ಪರೀಕ್ಷೆ ಯಶಸ್ವಿ

ನವದೆಹಲಿ:

 ಪಾಕಿಸ್ತಾನದ ಪಾಲಿಗೆ ನಿದ್ದೆಗೆಡಿಸುವ ಸುದ್ದಿಯೊಂದು ಪ್ರಕಟವಾಗಿದೆ. ವಿಶ್ವದ ಅತ್ಯಂತ ಅಪಾಯಕಾರಿ ಮಿಸೈಲ್ ಗಳಲ್ಲಿ ಒಂದಾದ ಬ್ರಹ್ಮೋಸ್ ಕ್ಷಿಪಣಿಯ ಯಶಸ್ವಿ ಪರೀಕ್ಷೆಯನ್ನು ಭಾರತ ಕೈಗೊಂಡಿದೆ.

ಅಂಡಮಾನ್-ನಿಕೊಬಾರ್ ನಿಂದ ಈ ಪರೀಕ್ಷೆ ನಡೆಸಲಾಗಿದೆ

ಮೂಲಗಳ ಪ್ರಕಾರ, ಭಾರತವು  ಬುಧವಾರ ಅಂಡಮಾನ್-ನಿಕೋಬಾರ್‌ನಲ್ಲಿ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿ  ಬ್ರಹ್ಮೋಸ್ ಅನ್ನು ಪರೀಕ್ಷಿಸಿದೆ. ರಕ್ಷಣಾ ಸಚಿವಾಲಯದ ಪ್ರಕಾರ, ಬ್ರಹ್ಮೋಸ್ ಕ್ಷಿಪಣಿ ಪರೀಕ್ಷೆಯಲ್ಲಿ ತನ್ನ ಗುರಿಯನ್ನು ನಿಖರವಾಗಿ ಹೊಡೆಯುವಲ್ಲಿ ಯಶಸ್ವಿಯಾಗಿದೆ. ಭಾರತದ ಈ ಪರೀಕ್ಷೆಯು ಪಾಕಿಸ್ತಾನಕ್ಕೆ  ದೊಡ್ಡ ಸಂಕೇತ ಎಂದೇ ಪರಿಗಣಿಸಲಾಗುತ್ತಿದೆ.

ಬಲವಂತವಾಗಿ ಹಿಜಾಬ್​ ತೆಗೆಸಿದ ಕಂಡಕ್ಟರ್​! ಹಿಡಿಶಾಪ ಹಾಕಿದ ಪ್ರಯಾಣಿಕರೂ ಸತ್ಯ ತಿಳಿದು ಶಾಕ್​

ಪಾಕಿಸ್ತಾನದಲ್ಲಿ ಬಿದ್ದ ಬ್ರಹ್ಮೋಸ್

ಕಳೆದ ಕೆಲವು ದಿನಗಳಿಂದ ಬ್ರಹ್ಮೋಸ್ ಪಾಕಿಸ್ತಾನದಲ್ಲಿ ನಿರಂತರ ಚರ್ಚೆಯ ವಿಷಯವಾಗಿದೆ. ಇದಕ್ಕೆ ಕಾರಣ ಎಂದರೆ, ಮಾರ್ಚ್ 9 ರಂದು, ಭಾರತದ ಈ ಕ್ಷಿಪಣಿಯು ನಿರ್ವಹಣಾ ಸಮಯದಲ್ಲಿ ಆಕಸ್ಮಿಕವಾಗಿ ಹಾರಿ, ಪಾಕಿಸ್ತಾನದೊಳಗೆ 124 ಕಿ.ಮೀ.ತಲುಪಿತ್ತು. ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ, ಆದರೆ ಹತ್ತಿರದ ಅನೇಕ ಮನೆಗಳು ಧರೆಗುರುಳಿವೆ. ಅಚ್ಚರಿಯ ವಿಷಯವೆಂದರೆ ಈ ಕ್ಷಿಪಣಿಯನ್ನು ಹೊಡೆದುರುಳಿಸುವುದನ್ನು ಬಿಟ್ಹಾಕಿ, ಪಾಕಿಸ್ತಾನದ ಏರ್ ಡಿಫೆನ್ಸ್ ಸಿಸ್ಟಂ ಈ ಕ್ಷಿಪಣಿಯನ್ನು ಪತ್ತೆಹಚ್ಚಲು ಕೂಡ ವಿಫಲವಾಗಿದೆ.

 

ಶ್ರೀಲಂಕಾದಲ್ಲಿ ಆಹಾರದ ಕೊರತೆ: ಗಗನಕ್ಕೇರಿದ ಅಕ್ಕಿ, ಸಕ್ಕರೆ, ಹಾಲಿನ ಪುಡಿ ಬೆಲೆ!. ಇಲ್ಲಿ ಯಾವ ವಸ್ತುವಿನ ಬೆಲೆ ಎಷ್ಟಿದೆ ಗೊತ್ತಾ?

ಫೇಲಾದ ಪಾಕ್ ರೇಡಾರ್ ಗಳು

ಸ್ಥಳೀಯ ಜನರಿಂದ ಮಾಹಿತಿ ಪಡೆದ ನಂತರ, ಪಾಕಿಸ್ತಾನಿ ಸೇನೆಯು ಘಟನೆಯ ಬಗ್ಗೆ ಅರಿತುಕೊಂಡಿದೆ, ಇದರಿಂದಾಗಿ ದೇಶ ಮತ್ತು ದೇಶದ ಹೊರಗಡೆ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ. ಇದರ ನಂತರ, ತನ್ನ ಖ್ಯಾತಿಯನ್ನು ಉಳಿಸಲು, ಪಾಕಿಸ್ತಾನಿ ಸೇನೆಯು 24 ಗಂಟೆಗಳ ನಂತರ ಹೇಳಿಕೆಯನ್ನು ನೀಡಿ, ತಮ್ಮ ದೇಶದ ರೇಡಾರ್ ಈ ಕ್ಷಿಪಣಿಯನ್ನು ಉಡಾವಣೆಯಾದ ತಕ್ಷಣ ಅದನ್ನು ಟ್ರ್ಯಾಕ್ ಮಾಡಲು ಆರಂಭಿಸಿದೆ ಎಂದು ಹೇಳಿದೆ. ಆದರೆ, ಪಾಕಿಸ್ತಾನಿ ಸೇನೆಯು ಕ್ಷಿಪಣಿಯನ್ನು ಟ್ರ್ಯಾಕ್ ಮಾಡಿದ್ದರೆ ಅದನ್ನು ಏಕೆ ಹೊಡೆದುರುಳಿಸಲಿಲ್ಲ ಎಂಬ ಪ್ರಶ್ನೆಗೆ ಅದರ ಬಳಿ ಉತ್ತರವಿರಲಿಲ್ಲ.

ಪಾಕಿಸ್ತಾನದ ಮಾಧ್ಯಮ ವರದಿಗಳ ಪ್ರಕಾರ, ಮಿಯಾನ್ ಚುನ್ನು ಪ್ರದೇಶದಲ್ಲಿ ಬಿದ್ದ ಕ್ಷಿಪಣಿ ಬೇರೆ ಯಾವುದೇ ಕ್ಷಿಪನಿಯಾಗಿರದೆ, ಬ್ರಹ್ಮೋಸ್ ಕ್ಷಿಪಣಿಯಾಗಿದೆ ಎನ್ನಲಾಗಿದೆ. ಆದರೆ, ಅದರ ಪ್ರಚಂಡ ವೇಗ ಮತ್ತು ನೆಲಕ್ಕೆ ಬಹಳ ಹತ್ತಿರದಿಂದ ಅದು ಹಾರಿದ ಕಾರಣ ಯಾವುದೇ ರೇಡಾರ್ ಅದನ್ನು ಗುರುತಿಸಿಲ್ಲ ಎಂದಿವೆ.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap