ಬೆಂಗಳೂರು : ಕಿರುತೆರೆ ನಟಿ ಬಂಧನ…..!

ಬೆಂಗಳೂರು: 
     ಕನ್ನಡ ಕಿರುತೆರೆ ನಟಿಯೊಬ್ಬರನ್ನು ಅರೆಸ್ಟ್  ಮಾಡಿದ ಘಟನೆ ವರದಿಯಾಗಿದೆ. ನ್ಯಾಯಾಲಯದಲ್ಲಿ  ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ನಟಿಯನ್ನು ಬಂಧಿಸಲಾಗಿದ್ದು, ಸದ್ಯ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
     ವಿಚಾರಣೆಗೆ  ಹಾಜರಾಗದ ಹಿನ್ನೆಲೆ ಸಿನಿಮಾ ನಟಿಯೊಬ್ಬರ ವಿರುದ್ಧ ಶಿವಮೊಗ್ಗ ನ್ಯಾಯಾಲಯದಲ್ಲಿ ಜಾಮೀನು ರಹಿತ ಬಂಧನ ವಾರೆಂಟ್‌ ಜಾರಿ ಮಾಡಲಾಗಿತ್ತು.ಈ ಹಿನ್ನಲೆಯಲ್ಲಿ ವಿನೋಬನಗರ ಠಾಣೆ ಪೊಲೀಸರು ನಟಿಯನ್ನು ಬಂಧಿಸಿ ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಿದರು.
     ನಟಿ ಉಷಾ ಎಂಬವರ ವಿರುದ್ಧ ವಾರೆಂಟ್‌ ಜಾರಿಯಾಗಿತ್ತು. ಬೆಂಗಳೂರಿನಲ್ಲಿ ನಟಿ ಉಷಾ ಅವರನ್ನು ವಿನೋಬನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.ನಟಿಯನ್ನು ಮೆಗ್ಗಾನ್‌ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ನಂತರ ಪೊಲೀಸರು ನ್ಯಾಯಾಧೀಶರ ಮುಂದೆ ನಟಿಯನ್ನು ಹಾಜರುಪಡಿಸಿದರು.      ನಟಿ ಉಷಾ ವಿರುದ್ಧ ಶಿವಮೊಗ್ಗದ ಶರವಣನ್‌  ಎಂಬಾತ ವಂಚನೆ ದೂರು ನೀಡಿದ್ದರು. ತನ್ನಿಂದ ಹಣ ಪಡೆದು ಉಷಾ ಮರಳಿಸಿಲ್ಲ ಎಂದು ಆರೋಪಿಸಿ ಶರವಣನ್‌ ಶಿವಮೊಗ್ಗ ನ್ಯಾಯಾಲಯದಲ್ಲಿ ಖಾಸಗಿ ದೂರು  ದಾಖಲಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ