ಶಕ್ತಿ ಕಾರ್ಡ್ ಪ್ರಕ್ರಿಯೆಯು ಶೀಘ್ರದಲ್ಲೇ ಪ್ರಾರಂಭ : ರಾಮಲಿಂಗಾ ರೆಡ್ಡಿ

ಬೆಂಗಳೂರು:

     ಗೃಹ ಜ್ಯೋತಿ ಮತ್ತು ಗೃಹ ಲಕ್ಷ್ಮಿ ಯೋಜನೆಗಳ ಪ್ರಾರಂಭದ ನಂತರ ಸೇವಾ ಸಿಂಧು ಪೋರ್ಟಲ್ ಮೇಲಿನ ಹೊರೆ ಸದ್ಯಕ್ಕೆ ಕಡಿಮೆಯಾಗಿರುವುದರಿಂದ, ‘ಶಕ್ತಿ ಕಾರ್ಡ್’ಗಳನ್ನು ನೀಡುವ ಪ್ರಕ್ರಿಯೆಯು ಶೀಘ್ರದಲ್ಲೇ ಪ್ರಾರಂಭವಾಗುತ್ತದೆ ಮತ್ತು ಈ ಕಾರ್ಡ್‌ಗಳು ಜೀವಿತಾವಧಿಗೆ ಮಾನ್ಯವಾಗಿರುತ್ತವೆ ಮತ್ತು ಯಾವುದೇ ನವೀಕರಣದ ಅಗತ್ಯವಿಲ್ಲ ಎನ್ನಲಾಗಿದೆ.

    ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ಜೊತೆಗೆ ಮಾತನಾಡಿ, ‘ಇಷ್ಟು ದಿನ, ಸೇವಾ ಸಿಂಧು ಪೋರ್ಟಲ್ ಅಧಿಕಾರಿಗಳು ಗೃಹ ಜ್ಯೋತಿ ಮತ್ತು ಗೃಹ ಲಕ್ಷ್ಮಿ ಯೋಜನೆಗಳಿಗೆ ಅರ್ಜಿಗಳನ್ನು ಸ್ವೀಕರಿಸುವಲ್ಲಿ ನಿರತರಾಗಿದ್ದರು. ಶಕ್ತಿ ಯೋಜನೆಯಡಿ ಸುಮಾರು ಮೂರು ಕೋಟಿ ಫಲಾನುಭವಿಗಳಿದ್ದು, ಅವರಿಗೆ ಶಕ್ತಿ ಕಾರ್ಡ್ ವಿತರಿಸುವುದು ಸುಲಭದ ಮಾತಲ್ಲ. ಪೋರ್ಟಲ್ ಈಗ ಹೊರೆಯಿಂದ ಕೊಂಚ ಮುಕ್ತವಾಗಿರುವುದರಿಂದ, ನಾವು ಶಕ್ತಿ ಕಾರ್ಡ್‌ಗಳನ್ನು ನೀಡುವ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತೇವೆ’ ಎಂದರು.

    ಬಸ್ ನಿಗಮಗಳು ನೀಡುವ ಬಸ್ ಪಾಸ್‌ಗಳಂತೆಯೇ ಶಕ್ತಿ ಸ್ಮಾರ್ಟ್ ಕಾರ್ಡ್‌ಗಳು ಕೇವಲ ಗುರುತಿನ ಚೀಟಿಯಾಗಲಿವೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಎಂಡಿ ಅನ್ಬು ಕುಮಾರ್ ಈ ಹಿಂದೆ ಟಿಎನ್‌ಐಇಗೆ ಖಚಿತಪಡಿಸಿದ್ದರು. ಆದರೆ, ಸಾಮಾನ್ಯ ಪಾಸ್‌ಗಳಂತೆ ಪ್ರತಿ ವರ್ಷ ಕಾರ್ಡ್‌ಗಳನ್ನು ನವೀಕರಿಸಬೇಕೆಂದು ಮಹಿಳೆಯರು ಆತಂಕಕ್ಕೊಳಗಾಗಿದ್ದರು. 

    ಬಸ್‌ಗಳನ್ನು ಪ್ರವೇಶಿಸುವಾಗ ಮತ್ತು ನಿರ್ಗಮಿಸುವಾಗ ಪ್ರಯಾಣಿಕರು ‘ಟ್ಯಾಪ್ ಮಾಡಿ ಪ್ರಯಾಣ’ ಮಾಡಬಹುದಾದ ‘ಸ್ಮಾರ್ಟ್ ಕಾರ್ಡ್’ಗಳನ್ನು ವಿತರಿಸುವ ತಂತ್ರಜ್ಞಾನವನ್ನು ಹೊಂದಿದ್ದರೂ ಕೂಡ ನಗದು ಕೊರತೆ ಎದುರಿಸುತ್ತಿರುವ ಬಸ್‌ಗೆ ಹೆಚ್ಚುವರಿ ಆರ್ಥಿಕ ಹೊರೆಯಾಗುವುದರಿಂದ ನಾವು ಇದನ್ನು ಮುಂದುವರಿಸುತ್ತಿಲ್ಲ. ನಿಗಮಗಳು ಭವಿಷ್ಯದಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬಹುದು ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಯೊಬ್ಬರು ಸಮರ್ಥಿಸಿಕೊಂಡರು. 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap