ಸಿಸಿಟಿವಿ ಕಂಟ್ರೋಲ್‍ನಲ್ಲಿ ತುಮಕೂರು ನಗರ(ಭಾಗ-2) ..!

ತುಮಕೂರು:
ಆರ್‍ಎಲ್‍ವಿಡಿ ಕ್ಯಾಮೆರಾ : ರೆಡ್‍ಲೈಟ್ ವೈಲೇಷನ್ ಡಿಟೆಕ್ಟೆಡ್ ಕ್ಯಾಮೆರಾ
   ರೆಡ್ ಲೈಟ್ ವೈಲೇಷನ್ ಕ್ಯಾಮೆರಾಗಳು ರಸ್ತೆಯ ನಿಯಮಗಳನ್ನು ಉಲ್ಲಂಘಿಸುವ ವಾಹನಗಳನ್ನು ಪತ್ತೆ ಹಚ್ಚುತ್ತವೆ. ವಾಹನಗಳು ನಿಯಮ ಮೀರಿದರೆ ಸಿಗ್ನಲ್‍ಗಳಲ್ಲಿ ಅಳವಡಿಸಿರುವ ಸ್ಮಾರ್ಟ್ ತಂತ್ರಜ್ಞಾನದ ಕ್ಯಾಮೆರಾಗಳು ತಕ್ಷಣ ಮಾಹಿತಿ ರವಾನಿಸುತ್ತವೆ. ಅಲ್ಲದೆ ಈ ಕ್ಯಾಮೆರಾಗಳು ವಾಹನ ಸವಾರರ ಭಾವಚಿತ್ರವನ್ನು ಕ್ಲಿಕ್ಕಿಸಿ ಅದನ್ನು ಕಮ್ಯಾಂಡಿಂಗ್ ಕೇಂದ್ರಕ್ಕೆ ರವಾನಿಸುತ್ತವೆ. ಇದರಿಂದ ವೇಗ ನಿಯಂತ್ರಣ ಸೇರಿದಂತೆ ವಾಹನಗಳ ಓಡಾಟದ ಬಗ್ಗೆಯೂ ಗಮನ ಹರಿಸಬಹುದಾಗಿದೆ.
ಎಎನ್‍ಪಿಆರ್ ಕ್ಯಾಮರಾ: ಆಟೋಮೆಟಿಕ್ ನಂಬರ್ ಪ್ಲೇಟ್ ರೆಕಗ್ನೈಸ್ಡ್ ಕ್ಯಾಮೆರಾ
 
    ಬ್ಯಾಂಕ್‍ಗಳ ಹೊರ ಆವರಣ,  ಮಹಿಳೆಯರ ಪಿಜಿಗಳು, ಕಾಲೇಜು ಆವರಣದ ಚಲನವಲನದ  ಮೇಲೆ ಕ್ಯಾಮೆರಾಗಳು ಎಎನ್‍ಪಿಆರ್ ಕ್ಯಾಮೆರಾಗಳು ಕಣ್ಣಿಡಲಿವೆ. ನಗರ ವ್ಯಾಪ್ತಿಯ ಹಲವು ಜಂಕ್ಷನ್‍ಗಳಲ್ಲಿ  ಹೈರೆಸುಲ್ಯೂಷನ್  ಆಟೋಮ್ಯಾಟಿಕ್ ನಂಬರ್‍ಪ್ಲೇಟ್ ರೆಕÀಗ್ನೇಷನ್ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಅನುಮಾನಾಸ್ಪದ ವಾಹನ ಸಂಖ್ಯೆಯನ್ನು ಸರ್ವರ್‍ನಲ್ಲಿ ನಮೂದಿಸಿದರೆ, ತನ್ನ ಕ್ಯಾಮೆರಾಗಳಲ್ಲಿ ಈ ವಾಹನ ಓಡಾಡಿದ ಮಾರ್ಗವೆಲ್ಲ ಗೊತ್ತಾಗಲಿದೆ. ಮಹಿಳೆಯರ ಸುರಕ್ಷತೆ, ಸರಗಳ್ಳತನದಂತಹ ಕೃತ್ಯಗಳಿಗೆ ತಡೆ ಬೀಳಲಿದೆ.
    300 ಮೀ.ವರೆಗೆ ಜೂಮ್ ಮಾಡಿ ನೋಡುವ ಈ ಕ್ಯಾಮೆರಾಗಳು ರಾತ್ರಿಯ ಮಬ್ಬುಗತ್ತಲಿನಲ್ಲೂ, ಎಲ್ಲವನ್ನೂ ಸ್ಪಷ್ಟವಾಗಿ ಚಿತ್ರೀಕರಿಸಲಿವೆ. ಈಗಾಗಲೇ ಅಳವಡಿಸಲಾಗಿರುವ ಕ್ಯಾಮೆರಾಗಳ ಮೂಲಕ ನಗರ ವ್ಯಾಪ್ತಿಯ ಸುಮಾರು 8 ಕಿ.ಮೀ.   ಸುತ್ತಳತೆಯಲ್ಲಿ ಯಾವ ರೀತಿಯ ಚಟುವಟಿಕೆ ನಡೆಯುತ್ತಿದೆ? ಈ ಪ್ರದೇಶಕ್ಕೆ ಯಾರು ಬಂದರು? ಯಾರು ಹೋದರು? ಯಾವ ವಾಹನಗಳ ಓಡಾಟ ನಡೆಯುತ್ತಿದೆ ಎಂಬಿತ್ಯಾದಿ ಸಂಗತಿಗಳನ್ನು ಕ್ಯಾಮೆರಾಗಳು ದಾಖಲು  ಮಾಡಿಕೊಳ್ಳಲಿವೆ. ಅದಕ್ಕಾಗಿಯೇ ಹೆಚ್ಚಿನ ಸಂಗ್ರಹ ಸಾಮಥ್ರ್ಯವುಳ್ಳ ಯಂತ್ರಗಳನ್ನು ಅಳವಡಿಸಲಾಗಿದೆ. 
ಹೊಸ ಸ್ಮಾರ್ಟ್ ಸಿಗ್ನಲ್‍ಗಳು
    ಮುಂದಿನ ದಿನಗಳಲ್ಲಿ ಸಿಗ್ನಲ್‍ನಲ್ಲಿ ಕಾಯುತ್ತಾ ಸಮಯ ವ್ಯರ್ಥ ಮಾಡುವುದು ನಿಲ್ಲಲಿದೆ. ಈಗಿನ ಸ್ಥಿತಿಯಲ್ಲಿ ನಗರಗಳಲ್ಲಿ ದಿನನಿತ್ಯದ ಪ್ರಯಾಣಕ್ಕೆ ಹೆಚ್ಚು ಸಮಯ ಬೇಕು. ಕಚೇರಿಗಳಿಗೆ ತೆರಳುವವರು ಅಥವಾ ಕಚೇರಿಗಳಿಂದ ಮನೆಗೆ ಹೋಗುವಾಗ ಹೆಚ್ಚು ಸಮಯ ಟ್ರಾಫಿಕ್‍ನಲ್ಲಿಯೆ ಕಳೆಯಬೇಕಾಗುತ್ತಿದೆ. ಈ ನಿಟ್ಟಿನಲ್ಲಿ ಟ್ರಾಫಿಕ್ ಸಿಗ್ನಲ್‍ಗಳಲ್ಲಿ ಕಾಯುವ ಸಮಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ನಗರ ಸಂಚಾರ ಪೋಲೀಸ್ ಇಲಾಖೆ ಹಾಗೂ ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ಹೊಸ ಅಡಾಪ್ಟಿವ್ ಸಿಗ್ನಲ್‍ಗಳನ್ನು ಸೆನ್ಸಾರ್‍ನೊಂದಿಗೆ ಸಜ್ಜುಗೊಳಿಸಿದ್ದು, ಈಗಾಗಲೇ ಚಾಲನೆಯಲ್ಲಿವೆ.
    ಇದರಿಂದ ಪ್ರಯಾಣಿಕರು ಟ್ರಾಫಿಕ್‍ನಲ್ಲಿ ಹೆಚ್ಚಿನ ಸಮಯ ಕಳೆಯಬೇಕಾಗಿಲ್ಲ. ಬದಲಿಗೆ ಸೆನ್ಸಾರ್ ಮೂಲಕ ಹೆಚ್ಚು ವಾಹನಗಳು ಇರುವ ಕಡೆ ಹೆಚ್ಚಿನ ಕಾಲ ಹಸಿರು ಸಿಗ್ನಲ್ ತೋರಿಸಿದರೆ, ಕಡಿಮೆ ಸಂಚಾರ ಇರುವ ಕಡೆಯಲ್ಲಿ ಕಡಿಮೆ ಸಮಯ ಮಾತ್ರ ಹಸಿರು ದೀಪ ಉರಿಯುತ್ತದೆ. ಹೀಗೆ ವಾಹನ ಸವಾರರಿಗೆ ಹೆಚ್ಚಿನ ಸಮಯ ನಿಲ್ಲಿಸುವುದನ್ನು ತಪ್ಪಿಸುವ ಪ್ರಯತ್ನ ಇದಾಗಿದೆ.
ಕಚೇರಿಯ ವ್ಯವಸ್ಥೆ
     ಟೌನ್‍ಹಾಲ್‍ನಲ್ಲಿರುವ ಕಟ್ಟಡದಲ್ಲಿ ಅಳವಡಿಸಲಾದ ಈ ಕೇಂದ್ರವು ತಾತ್ಕಾಲಿಕವಾಗಿದ್ದು, ಎಸ್ಪಿ ಕಚೇರಿಯ ಆವರಣದಲ್ಲಿ ಶಾಶ್ವತ ಕಟ್ಟಡ ನಿರ್ಮಾಣ ಮಾಡಲಾಗುವುದು. ಈಗಿನ ಕಟ್ಟಡದಲ್ಲಿ ಎಂಟು ಸಿಪಿಯು ಗಳನ್ನೊಳಗೊಂಡ 16 ಕಂಪ್ಯೂಟರ್‍ಗಳನ್ನು ಅಳವಡಿಸಲಾಗಿದೆ. ಇದರ ಜೊತೆಗೆ ಬೃಹತ್ತಾದ ವೀಡಿಯೋ ಎಲ್‍ಇಡಿ ವಾಲ್‍ಅನ್ನು ಅಳವಡಿಸಲಾಗಿದೆ. ಇದರಲ್ಲಿ ಸ್ಪಷ್ಟವಾಗಿ ವೀಕ್ಷಣೆ ಮಾಡಬಹುದಾಗಿದೆ. ಜೊತೆಗೆ ದೂರವಾಣಿ ಸೌಲಭ್ಯವನ್ನು ಇಡಲಾಗಿದ್ದು, ಇದಕ್ಕೆ ನೂತನವಾದ ಟೋಲ್ ಫ್ರೀ ಸಂಖ್ಯೆಯನ್ನು ಇಡಲಾಗುವುದು. ಈ ಸಂಖ್ಯೆಗೆ ಕರೆ ಮಾಡಿ ದೂರುಗಳನ್ನು ನೀಡಬಹುದು ಎಂಬುದಾಗಿ ಈ ಕಮ್ಯಾಂಡಿಂಗ್ ಕೇಂದ್ರವನ್ನು ನೋಡಿಕೊಳ್ಳುತ್ತಿರುವ ಎಂಜಿನಿಯರ್ ಅಶ್ವಿನ್ ತಿಳಿಸಿದ್ದಾರೆ.
ಪರಿಸರ ಮಾನಿಟರಿಂಗ್ ವ್ಯವಸ್ಥೆ
    ನಗರದ ಆರು ಕಡೆಗಳಲ್ಲಿ ಪರಿಸರ ಮಾನಿಟರಿಂಗ್ ವ್ಯವಸ್ಥೆಯನ್ನು ಅಳವಡಿಸಲಾಗುತ್ತಿದ್ದು, ಬಟವಾಡಿ, ಶಿವಕುಮಾರ ಸ್ವಾಮೀಜಿ ವೃತ್ತ, ಕುಣಿಗಲ್ ರಸ್ತೆ, ಶಿರಾಗೇಟ್, ಗುಬ್ಬಿ ಗೇಟ್, ಬಾಲಗಂಗಾಧರ ನಾಥ ಸ್ವಾಮೀಜಿ ವೃತ್ತದಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಲಾಗುತ್ತಿದ್ದು, ಇವುಗಳು ಪರಿಸರದಲ್ಲಿ ಬದಲಾವಣೆಗಳನ್ನು, ಹವಮಾನ ವೈಪರಿತ್ಯಗಳನ್ನು ಸೇರಿದಂತೆ ಕನಿಷ್ಟ ಗರಿಷ್ಟ ಮಟ್ಟದ ವಾತಾವರಣವನ್ನು ಎಲ್‍ಇಡಿಗಳ ಮೂಲಕ ಪ್ರದರ್ಶಿಸುತ್ತದೆ. 
5 ವರ್ಷಗಳವರೆಗೆ ಕಂಪನಿಯ ನಿರ್ವಹಣೆ
    ಈ ಕಮಾಂಡಿಗ್ ಕೇಂದ್ರದ ನಿರ್ವಹಣೆಯನ್ನು ಕಂಪನಿಯವರೇ ನೋಡಿಕೊಳ್ಳುತ್ತಿದ್ದು, ಇದು ಐದು ವರ್ಷಗಳ ಕಾಲ ಇವರದ್ದೇ ಜವಾಬ್ದಾರಿಯಾಗಿರುತ್ತದೆ. ಅದರ ನಂತರ ನಿರ್ವಹಣೆಯ ಜವಾಬ್ದಾರಿಯನ್ನು ಪಾಲಿಕೆಗೆ ವಹಿಸಲಾಗುತ್ತದೆ. ಈ ಐದು ವರ್ಷದೊಳಗೆ ಪೋಲೀಸ್ ಸಿಬ್ಬಂದಿಗೆ ಹಾಗೂ ಸಂಬಂಧಪಟ್ಟ ತಾಂತ್ರಿಕ ಕೆಲಸಗಾರರಿಗೆ ಈ ವ್ಯವಸ್ಥೆಯ ಬಗ್ಗೆ ತರಬೇತಿ ನೀಡಲಾಗುತ್ತದೆ. 
ದಿನದ 24 ಗಂಟೆಗಳ ಕಾಲ ಸೇವೆ
      ಕಮಾಂಡಿಂಗ್ ಕೇಂದ್ರದಲ್ಲಿ ದಿನದ 24 ಗಂಟೆಗಳ ಕಾಲ ಕೆಲಸ ನಿರ್ವಹಿಸಲಾಗುತ್ತದೆ. ಈ ಕೇಂದ್ರದಲ್ಲಿ ಪಾಳಿಯಂತೆ ಕೆಲಸ ಮಾಡುವ ಪೋಲೀಸ್ ಸಿಬ್ಬಂದಿ ಹಾಗೂ ತಾಂತ್ರಿಕ ವಿಭಾಗದವರು ಕೆಲಸ ನಿರ್ವಹಿಸುತ್ತಾರೆ. ಇದರಿಂದ ಪ್ರತಿಯೊಂದನ್ನು ಸೂಕ್ಷ್ಮವಾಗಿ ಗಮನ ಹರಿಸುವ ಮೂಲಕ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳುವ ಪ್ರಯತ್ನ ಇದಾಗಿದೆ.
24 ಗಂಟೆಗಳ ನೀರು ಸರಬರಾಜಿನ ಮೇಲೆ ನಿಗಾ
     ಕಮಾಂಡಿಂಗ್ ಕೇಂದ್ರವು ನೀರು ಸರಬರಾಜು ವ್ಯವಸ್ಥೆಯ ಮೇಲೂ ನಿಗಾ ಇರಿಸುತ್ತದೆ. ತುಂಬೆಯಿಂದ  ಎಷ್ಟು ನೀರು ಶುದ್ಧೀಕರಣ ಘಟಕಕ್ಕೆ ಬಂದಿದೆ. ಎಷ್ಟು ನೀರು ಟ್ಯಾಂಕ್‍ಗಳಿಗೆ ಸರಬರಾಜು ಆಗಿದೆ. ಸೋರಿಕೆ   ಅಥವಾ ಕಳವು ಆಗುತ್ತಿದೆಯೇ ಎಷ್ಟು ಪ್ರಮಾಣದಲ್ಲಿ ಇತ್ಯಾದಿ ಮಾಹಿತಿ ನಿಖರವಾಗಿ ತಿಳಿದು ಬರಲಿದೆ. ಇದರಲ್ಲಿ ಬಿಲ್ಲಿಂಗ್ ವ್ಯವಸ್ಥೆಯೂ ಸೇರಲಿದ್ದು, ಮೊದಲಿಗೆ ಕೆಲವು ವಾರ್ಡ್‍ಗಳಲ್ಲಿ ಪ್ರಾಯೋಗಿಕವಾಗಿ  ಜಾರಿಗೆ ತರಲಾಗುತ್ತದೆ. 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap