ಎಂ.ಎನ್. ಕೋಟೆ :
ಗುಬ್ಬಿ ತಾಲ್ಲೂಕಿನ ಹಾಗಲವಾಡಿ ಹೋಬಳಿಯ ಮಂಚಲದೊರೆ ಗ್ರಾಮದ ನಿವಾಸಿ ರಾಮಚಂದ್ರಯ್ಯ ಎಂಬುವರ ಜಮೀನಿನಲ್ಲಿ 6 ಅಡಿ ಉದ್ದದ ಹೆಬ್ಬಾವು ಕಾಣಿಸಿಕೊಂಡಿತ್ತು. ಗ್ರಾಮದ ಮುರುಳಿ ಹೆಬ್ಬಾವನ್ನು ಹಿಡಿದು ಅರಣ್ಯಾಧಿಕಾರಿಗಳಿಗೆ ಒಪ್ಪಿಸಿದರು. ಸುಮಾರು ಒಂದು ಗಂಟೆ ಕಾರ್ಯಾಚರಣೆ ನಡೆಸಿ ಹೆಬ್ಬಾವು ಹಿಡಿದು ಮುರಳಿ ಸಾಹಸ ಮೆರೆದರು.
ಹೆಬ್ಬಾವನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಸೇರಿದ್ದರು. ಮಾಹಿತಿ ತಿಳಿದ ಅರಣ್ಯಧಿಕಾರಿಗಳಾದ ದರ್ಶನ್, ಗಂಗಾಧರಪ್ಪವರು ಸ್ಥಳಕ್ಕೆ ಆಗಮಿಸಿ ಹೆಬ್ಬಾವನ್ನು ರಕ್ಷಿಸಿದರು.
ಅರಣ್ಯಾಧಿಕಾರಿ ಗಂಗಾಧರಪ್ಪ ಮಾತನಾಡಿ, ಹಾವುಗಳು ಕಂಡರೆ ಅವುಗಳಿಗೆ ಯಾವುದೇ ತೊಂದರೆ ಕೊಡದೆ ನಮ್ಮ ಗಮನಕ್ಕೆ ತನ್ನಿ, ನಾವು ಸ್ಥಳಕ್ಕೆ ಬಂದು ಹಾವುಗಳನ್ನು ರಕ್ಷಿಸಿಸುತ್ತೇವೆ ಗ್ರಾಮಸ್ಥರು ಯಾವುದೇ ಪ್ರಾಣಿಗಳಿಗೂ ಕೊಡ ತೊಂದರೆ ಕೊಡಬೇಡಿ ಈ ಹೆಬ್ಬಾವನ್ನು ರಕ್ಷಿಸಿ ಕಾಡಿಗೆ ಬೀಡಲಾಗುತ್ತದೆ ಎಂದು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ