ಬಿಜೆಪಿಯಲ್ಲಿ ನನಗೆ ಟಿಕೆಟ್ ತಪ್ಪಲು ಕೆಲವರು ಕಾರಣರಾಗಿದ್ದಾರೆ : ಜಗದೀಶ್‌ ಶೆಟ್ಟರ್

ಹುಬ್ಬಳ್ಳಿ

       ನಾನು ಹಲವಾರು ದಿನಗಳಿಂದ ವೇದನೆ ಪಡುತ್ತಿದ್ದೇನೆ. ಹಲವು ನಾಯಕರ ಬಗ್ಗೆ ನಾನು ಮಾತನಾಡಬೇಕಿದೆ. ಬಿಜೆಪಿಯಲ್ಲಿ ಕಷ್ಟಪಟ್ಟು ಕೆಲಸ ಮಾಡಿದ್ದೇನೆ. ನಾನು ಮಾತನಾಡದೇ ಇದ್ದರೆ ಮುಂದೆ ಸಮಸ್ಯೆ ಎದುರಾಗಲಿದೆ ಎಂದರು.

     ‘ಅಲ್ಪ ಅವಧಿಯಲ್ಲಿ ಸಮಸ್ಯೆಗಳನ್ನು ನಿವಾರಣೆ ಮಾಡಿ ಪಕ್ಷಕ್ಕಾಗಿ ದುಡಿದಿದ್ದೇನೆ. ಹೀಗಾಗಿ ಉತ್ತರ ಕರ್ನಾಟಕದಲ್ಲಿ ಬಹಳ ದೊಡ್ಡ ಶಕ್ತಿ ಹೊಂದಿದ್ದೇನೆ. ನನಗೆ ಟಿಕೆಟ್ ತಪ್ಪಲು ಕೆಲವರು ಕಾರಣರಾಗಿದ್ದಾರೆ. ಯಾವುದೇ ಕಪ್ಪು ಚುಕ್ಕೆ ಆಪಾದನೆ ನನ್ನ ಮೇಲೆ ಇಲ್ಲ. ಬೊಮ್ಮಾಯಿ ಸರ್ಕಾರದಲ್ಲಿ ನಾನು ಮಂತ್ರಿಯಾಗಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

     ಬೆಳಗಾವಿಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಜಯ ಸಾಧನೆ ಮಾಡಲು ನಾನು ಶ್ರಮಿಸಿದ್ದೇನೆ. ನನಗೆ ಕಲ್ಯಾಣ ಕರ್ನಾಟಕ ಸೇರಿ ಹಲವಾರು ಜವಬ್ದಾರಿ ಕೊಟ್ಟಿದ್ದಾರೆ. ನಾನು ಅದನ್ನು ನಿಭಾಯಿಸಿದ್ದೇನೆ. ಪಕ್ಷದ ಸೇವೆಯನ್ನು ನಿಷ್ಠೆಯಿಂದ ಮಾಡಿದ್ದೇನೆ. ಉತ್ತರ ಕರ್ನಾಟಕದಲ್ಲಿ ಮೂನೇ ಸ್ಥಾನದಲ್ಲಿ ಬಿಜೆಪಿ ಇತ್ತು. ಎಲ್ಲಾ ಜವಬ್ದಾರಿಗಳನ್ನು ಅಚ್ಚುಕಟ್ಟಾಗಿ ಮಾಡಿದ್ದೇನೆ. ಆದರೂ ಪಕ್ಷ ನನ್ನನ್ನು ಕಡೆಗಣಿಸಿದ ರೀತಿ ನನಗೆ ಬೇಸರ ತಂದಿದೆ ಎಂದರು.

      ನನ್ನನ್ನು ಕರೆದು ಸೌಜನ್ಯದಿಂದ ಮಾತನಾಡಲಿಲ್ಲ. ಚಿಕ್ಕ ಹುಡುಗನಿಗೆ ಹೇಳಿದಂತೆ ಟಿಕೆಟ್ ಇಲ್ಲ ಎಂದು ನನಗೆ ಹೇಳಿದರು. ಶೆಟ್ಟರ್ ಲಿಂಗಾಯತ ಅಲ್ಲ ಅಂತ ಕೆಲವರು ಮಾತನಾಡುತ್ತಾರೆ. ಟಿಕೆಟ್ ತೆಗೆದುಕೊಳ್ಳುವುದು ಮುಖ್ಯ ಅಲ್ಲ. ನನ್ನನ್ನು ಕಡೆಗಣಿಸಿದ ರೀತಿ ನನಗೆ ಸರಿ ಎನಿಸಲಿಲ್ಲ. ನನಗೆ ಟಿಕೆಟ್ ತಪ್ಪಿಸಲು ಕೆಲ ನಾಯಕರಿಂದ ಷಡ್ಯಂತ್ರ ನಡೆದಿದೆ ಎಂದು ಕಿಡಿ ಕಾರಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap