ಹೈಟೆನ್ಷನ್ ವಿದ್ಯುತ್ ಟವರ್ ಏರಿ, ತಾಯಿಯ ಎದುರೇ ಪ್ರಾಣ ಬಿಟ್ಟ ಮಗ!

ಕೊಳ್ಳೇಗಾಲ: 

   ಹೈ ಟೆನ್ಷನ್ ವಿದ್ಯುತ್ ಟವರ್ ಏರಿದ ಯುವಕನೊಬ್ಬ ತಾಯಿಯ ಎದುರೇ ಸಾವಿಗೆ ಶರಣಾಗಿರುವ ಘಟನೆ ಕೊಳ್ಳೇಗಾಲ ಪಟ್ಟಣದ ಲಿಂಗಾಣಪುರ ಹೊರ ವಲಯದಲ್ಲಿ ನಡೆದಿದೆ. ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಗ್ರಾಮದ ಚಿಕ್ಕದೇವಸ್ಥಾನ ಬೀದಿ ನಿವಾಸಿ ಮಸಣಶೆಟ್ಟಿ (28) ಮೃತ ಯುವಕ.

   ಕೊಳ್ಳೇಗಾಲ ಪಟ್ಟಣದ ಲಿಂಗಾಣಪುರ ಹೊರ ವಲಯದ ಜಮೀನಲ್ಲಿ ಹಾದು ಹೋಗಿರುವ 63 ಕೆವಿ ವಿದ್ಯುತ್ ಟವರ್ ಅನ್ನು ಯುವಕ ಏರಿದ್ದಾನೆ. ಇದನ್ನು ನೋಡಿದ ಸ್ಥಳೀಯರು ಹಾಗೂ ಅಕ್ಕಪಕ್ಕದ ಜಮೀನಿನ ರೈತರು ಕೆಳಗಿಳಿಯಲು ಹೇಳಿದ್ದಾರೆ. ಕೊಳ್ಳೇಗಾಲ ಪಟ್ಟಣ ಪೊಲೀಸರು ಹಾಗೂ ಗ್ರಾಮಾಂತರ ಠಾಣಾ ಪೊಲೀಸರು ಹಾಗೂ ಸೆಸ್ಕ್ ಅಧಿಕಾರಿಗಳು ಹಾಗೂ ಲೈನ್ ಮ್ಯಾನ್‌ಗಳು, ಅಗ್ನಿ ಶಾಮಕದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕೆಳಗೆ ಇಳಿಯುವಂತೆ ಕೇಳಿಕೊಂಡರು.

   ಆದರೆ, ಮಸಣಶೆಟ್ಟಿ ನನ್ನ ತಾಯಿಯನ್ನು ಕರೆಸಿ ನಾನು ಆಕೆಯೊಂದಿಗೆ ಮಾತನಾಡಬೇಕು ಎಂದ. ಸ್ಥಳಕ್ಕೆ ತಾಯಿ ಸಿದ್ದರಾಜಮ್ಮ ಧಾವಿಸಿದರು. ಈ ವೇಳೆ ಕೆಳಗೆ ಇಳಿಯುವಂತೆ ಪರಿ ಪರಿಯಾಗಿ ಕೇಳಿಕೊಂಡಿದ್ದಾರೆ. ಆದ್ದರಿಂದ ಕೆಳಗೆ ಇಳಿಯುವಾಗ ವಿದ್ಯುತ್ ತಂತಿ ತಗುಲಿ ಯುವಕ ಮೃತಪಟ್ಟಿದ್ದಾನೆ.

Recent Articles

spot_img

Related Stories

Share via
Copy link