ಗುಬ್ಬಿ:
ಒಂದು ಸಾವಿರ ರೂ ಹಣ ಕೇಳಿದ್ದಕ್ಕೆ ಕೊಡದ ತಂದೆಯನ್ನು ಮಗನೇ ಕೊಲೆ ಮಾಡಿರುವ ಧಾರುಣ ಘಟನೆ ತಾಲ್ಲೂಕಿನ ಕಡಬ ಗ್ರಾಮದಲ್ಲಿ ನಡೆದಿದೆ.
ಕೊಲೆಯಾದ ವ್ಯಕ್ತಿಯನ್ನು 65 ವರ್ಷದ ರೇಣುಕಯ್ಯ ಎಂದು ಗುರುತಿಸಲಾಗಿದ್ದು ಇವರು ಗುಬ್ಬಿ ತಾಲೂಕು ಕಡಬ ಗ್ರಾಮದ ವ್ಯಕ್ತಿಯಾಗಿದ್ದು ಆರೋಪಿ ರಮೇಶ್ ಎಂಬಾತನನ್ನು ಗುಬ್ಬಿ ಪೊಲೀಸರು ಬಂಧಿಸಿ ತೀವ್ರವಿಚಾರಣೆಗೆ ಒಳಪಡಿಸಿದ್ದಾರೆ.
ರೇಣುಕಯ್ಯ ಅವರನ್ನು ಮಗ ರಮೇಶ್ ಒಂದು ಸಾವಿರ ರೂಪಾಯಿ ಕೊಡುವಂತೆ ಕೇಳಿದ್ದಾನೆ. ಇದಕ್ಕೆ ರೇಣುಕಯ್ಯ ಕೊಡಲು ನಿರಾಕರಿಸಿದ್ದರಿಂದ ಪುತ್ರ ರಮೇಶ್ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದಿದ್ದಾನೆ.
ಮಚ್ಚಿನಿಂದ ಕೊಚ್ಚಿದ್ದರಿಂದ ರೇಣುಕಯ್ಯ ಅವರಿಗೆ ತೀವ್ರ ರಕ್ತಸ್ರಾವವಾಗಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಸಿಪಿಐ ಗೋಪಿನಾಥ್ ಭೇಟಿ ನೀಡಿದ್ದು ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.