ಸೋನಾಮಾರ್ಗ್‌ ಸುರಂಗ ಇಂದು ಉದ್ಘಾಟನೆ

ಜಮ್ಮು ಮತ್ತು ಕಾಶ್ಮೀರ

   ಸೋನಾಮಾರ್ಗ್‌ ಸುರಂಗ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟನೆ ಮಾಡಲಿದ್ದಾರೆ.ಈ ಸುರಂಗವು ಲೇಹ್ ಮಾರ್ಗದಲ್ಲಿ ಶ್ರೀನಗರ ಮತ್ತು ಸೋನಾಮಾರ್ಗ್ ನಡುವೆ ಸರ್ವ ಋತುವಿನಲ್ಲೂ ಸಂಪರ್ಕ ಒದಗಿಸಲಿದೆ. ಶ್ರೀನಗರ ಮತ್ತು ಲಡಾಖ್​ ಹೆದ್ದಾರಿಯಲ್ಲಿ ಪ್ರವಾಸಿಗರ ಪ್ರಮುಖ ಆಕರ್ಷಣೆಯ ತಾಣವಾಗಿರುವ ಸೋನ್​ ಮಾರ್ಗ್​​ ಅನ್ನು ಕೂಡ ಈ ಝಡ್​ ಮೋರ್ಹಾ ಟನಲ್​ ಸಂಪರ್ಕಿಸುತ್ತದೆ. ​ಚಳಿಗಾಲದಲ್ಲಿ ಭಾರಿ ಹಿಮಪಾತದಿಂದಾಗಿ ಸೋನ್​ಮಾರ್ಗ್​ ಜನರಿಗೆ ರಸ್ತೆ ಸಂಪರ್ಕ ಇಲ್ಲದಂತಾಹುತ್ತಿತ್ತು. ಚಳಿಗಾಲದಲ್ಲಿ ಸಂಪರ್ಕ ಕಡಿದುಕೊಳ್ಳುವ ಸೋನ್​ಮಾರ್ಗ ಜನರಿಗೆ ಕಣಿವೆಯ ಇತರ ಜನರೊಂದಿಗೆ ಸಂಪರ್ಕ ಸಾಧಿಸುವುದು ದುಸ್ತರವಾಗುತ್ತಿತ್ತು. ಈ ನಿಟ್ಟಿನಲ್ಲಿ ಈ ಸುರಂಗ ಮಾರ್ಗ ಪ್ರಮುಖವಾಗಿದೆ.