ಬೆಂಗಳೂರು
ಕೆಲ ದಶಕಗಲ ನಂತರ ಡಬಲ್ ಡೆಕ್ಕರ್ ಬಸ್ಸುಗಳು ಬೆಂಗಳೂರಿನ ರಸ್ತೆಗಿಳಿಯಲಿವೆ ಇವು ಇತ್ತೀಚಿನ ಎಲ್ಲಾ ಸೌಕಭ್ಯಗಳನ್ನು ಹೊದಿವೆ ಎನ್ನಲಾಗಿದೆ . ಎಸಿ ಡಬಲ್ ಡೆಕ್ಕರ್ ಎಲೆಕ್ಟ್ರಿಕ್ ಬಸ್‌ಗಾಗಿ ಪ್ರಯಾಣಿಕರು ಕುತೂಹಲದಿಂದ ಕಾಯುತ್ತಿದ್ದಾರೆ. ಈ ಬಸ್ಸುಗಳು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಲಿವೆ. ಮುಂದಿನ ತಿಂಗಳು ಡಬಲ್ ಡೆಕ್ಕರ್ ಎಲೆಕ್ಟ್ರಿಕ್ ಬಸ್‌ಗಳು ಬೆಂಗಳೂರಿನ ರಸ್ತೆಗಳಿಗೆ ಇಳಿಯಲಿವೆ ಎಂದು ಬಿಎಂಟಿಸಿ ಮಾಹಿತಿ ನೀಡಿದೆ.
ಮುಂಬರುವ ತಿಂಗಳುಗಳಲ್ಲಿ ಬೆಂಗಳೂರಿನ ಎಲ್ಲಾ ಡೀಸೆಲ್ ಬಸ್‌ಗಳನ್ನು EV ಗಳೊಂದಿಗೆ ಬದಲಾಯಿಸುವ ಗುರಿಯನ್ನು BMTC ಹೊಂದಿದೆ. ಇದರ ಸಲುವಾಗಿ ಬೆಂಗಳೂರು ಮಹಾನಗರದಲ್ಲಿ ಎಲೆಕ್ಟ್ರಿಕ್ ಬಸ್‌ಗಳ ಸಂಖ್ಯೆಯನ್ನು ಹೆಚ್ಚಿಸಲಿದೆ. ಎಲೆಕ್ಟ್ರಿಕ್ ಬಸ್‌ಗಳ ಹಲವಾರು ಉತ್ಪಾದಕ ಕಂಪನಿಗಳಿಗೆ ಬಿಎಂಟಿಸಿ ಒಪ್ಪಂದ ಮಾಡಿಕೊಂಡಿದೆ. ಮಾರ್ಚ್‌ನಲ್ಲಿ ಬಸ್ ಸೇವೆಗಳು ಪ್ರಾರಂಭವಾಗುವ ನಿರೀಕ್ಷೆಯಿದೆ ಎಂದು ಬಿಎಂಟಿಸಿ ತಿಳಿಸಿದೆ.
ಅಶೋಕ್ ಲೇಲ್ಯಾಂಡ್ ಕಂಪನಿಯ ಇವಿ ಅಂಗಸಂಸ್ಥೆಯಾದ ‘ಸ್ವಿಚ್ ಮೊಬಿಲಿಟಿ’ ಐದು ಡಬಲ್ ಡೆಕ್ಕರ್ ಎಸಿ ಇ-ಬಸ್‌ಗಳ ಹರಾಜು ಪ್ರಕ್ರಿಯೆಯಲ್ಲಿ 10 ಕೋಟಿ ರೂ.ಗಳ ಬೆಲೆಯಲ್ಲಿ ಬಸ್‌ಗಳನ್ನು ಮಾಡಿ ಕೊಡುವುದಾಗಿ ತಿಳಿಸಿದೆ. ಈ ಕುರಿತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಮೂಲಗಳು ತಿಳಿಸಿವೆ. ಬಿಡ್‌ಗೆ ಅರ್ಜಿ ಸಲ್ಲಿಸಲು ಗುರುವಾರ ಕೊನೆಯ ದಿನಾಂಕವಾಗಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ