ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್ ಮೈದಾನದಲ್ಲಿ ಮೊಟ್ಟ ಮೊದಲ ಟೆಸ್ಟ್ ಪಂದ್ಯ ಸೋತ ಟೀಂ ಇಂಡಿಯಾ ಭಾರೀ ಮುಖಭಂಗ ಎದುರಿಸಿತು.
ಟೀಂ ಇಂಡಿಯಾದ 240ರನ್‌ಗಳ ಗುರಿಯನ್ನ ಸುಲಭವಾಗಿ ಬೆನ್ನತ್ತಿದ ಆತಿಥೇಯರು ಇನ್ನೊಂದು ದಿನ ಬಾಕಿ ಇರುವಂತೆಯೇ ಗುರಿ ಮುಟ್ಟಿದರು.ನಾಲ್ಕನೇ ದಿನದಾಟಕ್ಕೆ ದಕ್ಷಿಣ ಆಫ್ರಿಕಾ ಗೆಲುವಿಗೆ 122 ರನ್‌ಗಳು ಬಾಕಿ ಉಳಿದಿತ್ತು.
ಮಳೆಯ ಕಾಟದಿಂದ ಎರಡು ಸೆಷನ್‌ಗಳು ಹಾಳಾದ್ರೂ, ದಕ್ಷಿಣ ಆಫ್ರಿಕಾ ನಾಯಕ ಡೀನ್ ಎಲ್ಗರ್ ಅಜೇಯ 96ರನ್ ಕಲೆಹಾಕಿ ತಂಡವನ್ನ ಗೆಲುವಿನ ದಡ ತಲುಪಿಸಿದ್ರು. ಪಂದ್ಯದಲ್ಲಿ ಮಹತ್ವದ ಪಾತ್ರ ವಹಿಸಿದ ನಾಯಕ ಎಲ್ಗರ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಭಾಜನರಾದ್ರು.
ಈ ಪಂದ್ಯದ ಗೆಲುವಿನ ಮೂಲಕ ದಕ್ಷಿಣ ಆಫ್ರಿಕಾ ಮೂರು ಪಂದ್ಯಗಳ ಸರಣಿಯನ್ನ 1-1ರಿಂದ ಸಮಬಲ ಸಾಧಿಸಿದೆ.
ಟೀಂ ಇಂಡಿಯಾ ಅನುಭವಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಟೀಂ ಇಂಡಿಯಾ ಸೋಲಿಗೆ ಪ್ರಮುಖ ಕಾರಣವನ್ನ ಗುರುತಿಸಿದ್ದು,
ಯುವ ವೇಗಿ ಮೊಹಮ್ಮದ್ ಸಿರಾಜ್ ಅನುಪಸ್ಥಿತಿ ಮತ್ತು ಬೌಲಿಂಗ್ ಮಾಡದೇ ಇರುವುದೇ ಭಾರತಕ್ಕೆ ಪ್ರಮುಖ ಹೊಡೆತ ನೀಡಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಮೊದಲ ದಿನದಾಟದ ಕೊನೆಯಲ್ಲೇ 27 ವರ್ಷದ ವೇಗಿ ಮೊಹಮ್ಮದ್ ಸಿರಾಜ್ ಹ್ಯಾಮ್‌ಸ್ಟ್ರಿಂಗ್‌ನಿಂದಾಗಿ ಮೈದಾನದಿಂದ ಹೊರನಡೆದರು.
ಮೊದಲ ಇನ್ನಿಂಗ್ಸ್‌ನಲ್ಲಿ 9.5 ಓವರ್ ಬೌಲಿಂಗ್ ಮಾಡಿ ಹೊರನಡೆದಿದ್ದ ಸಿರಾಜ್ ಎರಡನೇ ಇನ್ನಿಂಗ್ಸ್‌ನಲ್ಲಿ 6 ಓವರ್‌ಗೆ 37 ರನ್ ನೀಡುವ ಮೂಲಕ 6.16 ಎಕಾನಮಿಯಲ್ಲಿ ಬೌಲಿಂಗ್ ಮಾಡಿದರು.
ಹ್ಯಾಮ್‌ಸ್ಟ್ರಿಂಗ್ ನೋವಿನ ಜೊತೆಗೆ ಬೌಲಿಂಗ್ ಮಾಡಲು ಹೆಣಗಾಡಿದ ಸಿರಾಜ್ ಹೆಚ್ಚು ರನ್ ನೀಡಿ ದುಬಾರಿಯಾದ್ರು.
“ಭಾರತ, ವಿಶ್ವದ ನಂಬರ್ ಒನ್ ಟೆಸ್ಟ್ ಕ್ರಿಕೆಟ್ ರಾಷ್ಟ್ರವಾಗಿರುವುದರಿಂದ, ಅವರು ಸ್ವಲ್ಪ ನಿರಾಸೆಗೊಂಡಿದ್ದಾರೆ. ನನ್ನ ಪ್ರಕಾರ ಭಾರತ ತಮ್ಮ ಅತ್ಯುತ್ತಮ ಬೌಲಿಂಗ್ ಮಾಡಲಿಲ್ಲ.
ಈ ಟೆಸ್ಟ್ ಪಂದ್ಯದ ಮೂಲಕ ಭಾರತ ಸೋಲಿಗೆ ಮುಖ್ಯ ಕಾರಣವೆಂದರೆ ಸಿರಾಜ್ ಅನುಪಸ್ಥಿತಿ”.
“ಹ್ಯಾಮ್‌ಸ್ಟ್ರಿಂಗ್ ಅವರನ್ನು ಬ್ಯಾಕ್‌ಫೂಟ್‌ನಲ್ಲಿ ಇರಿಸಿದ್ದು ಮಾತ್ರವಲ್ಲದೆ ಇದು ಭಾರತದ ಬೌಲಿಂಗ್ ವಿಭಾಗಕ್ಕೆ ಹಿನ್ನಡೆಯಾಗಿತು.
ಏಕೆಂದರೆ ಅವರು ಚೆಂಡನ್ನು ಒಳಗೆ ಮತ್ತು ಹೊರಗೆ ಚೆನ್ನಾಗಿ ಸೀಮ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಆದ್ರೆ ಎರಡನೇ ಇನ್ನಿಂಗ್ಸ್‌ನಲ್ಲಿ ಅವರ ಬೌಲಿಂಗ್‌ನಲ್ಲಿ ದೊಡ್ಡ ವ್ಯತ್ಯಾಸವಾಗಿತ್ತು, “ಎಂದು ಕಾರ್ತಿಕ್ ಸ್ಪೋರ್ಟ್ಸ್ ಕ್ರೀಡಾದಲ್ಲಿ ಉಲ್ಲೇಖಿಸಿದ್ದಾರೆ.
ಇದರ ನಡುವೆ ಮೊದಲ ಇನ್ನಿಂಗ್ಸ್‌ನಲ್ಲಿ ಏಳು ವಿಕೆಟ್ ಎಗರಿಸಿದ ಶಾರ್ದೂಲ್ ಠಾಕೂರ್ ಬೌಲಿಂಗ್ ಕುರಿತು ದಿನೇಶ್ ಕಾರ್ತಿಕ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದಲ್ಲದೆ ಎರಡನೇ ಇನ್ನಿಂಗ್ಸ್‌ನಲ್ಲಿ ಉಪಯುಕ್ತ ಅರ್ಧಶತಕಗಳನ್ನು ಗಳಿಸಿದ್ದಕ್ಕಾಗಿ ಚೇತೇಶ್ವರ್ ಪೂಜಾರ ಮತ್ತು ಅಜಿಂಕ್ಯ ರಹಾನೆಯನ್ನು ಹೊಗಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
