ICC WC 2023 : ತಿರುವನಂತಪುರಂಗೆ ಆಗಮಿಸಿದ ದಕ್ಷಿಣ ಆಫ್ರೀಕಾ….!

ನವದೆಹಲಿ :

       ಐಸಿಸಿ ಏಕದಿನ ವಿಶ್ವಕಪ್  ಅಭ್ಯಾಸ ಪಂದ್ಯಗಳಿಗೆ ಮುನ್ನ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡವು ಸೋಮವಾರ, ಸೆಪ್ಟೆಂಬರ್ 25ರಂದು ಭಾರತಕ್ಕೆ ಆಗಮಿಸಿತು. ಹೀಗಾಗಿ 2023ರ ವಿಶ್ವಕಪ್‌ಗಾಗಿ ಭಾರತಕ್ಕೆ ಬಂದ ಮೊದಲ ತಂಡವೆನಿಸಿತು.ದಕ್ಷಿಣ ಆಫ್ರಿಕಾ ತಂಡ ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದರು.

     ನಂತರ, ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ತಂಡದ ಆಗಮನದ ಬಗ್ಗೆ ಅಭಿಮಾನಿಗಳಿಗೆ ಒಂದು ನೋಟವನ್ನು ನೀಡಲು ದಕ್ಷಿಣ ಆಫ್ರಿಕಾ ತಂಡ ಒಂದು ಕಿರು ವಿಡಿಯೋವನ್ನು ಹಂಚಿಕೊಂಡಿದೆ.

    ಪೋಸ್ಟ್‌ಗೆ ಶೀರ್ಷಿಕೆ ನೀಡಿರುವ ಕ್ರಿಕೆಟ್ ಸೌತ್ ಆಫ್ರಿಕಾ (ಸಿಎಸ್‌ಎ), “ಟಚ್‌ಡೌನ್ ಇಂಡಿಯಾ, ಪ್ರೋಟೀಸ್‌ಗಳು ತಿರುವನಂತಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಬಂದಿಳಿದಿದ್ದಾರೆ,” ಎಂದು ಬರೆದುಕೊಂಡಿದೆ.

    ಶೋಪೀಸ್ ಈವೆಂಟ್‌ಗೆ ಮುನ್ನ ಅಭ್ಯಾಸ ಪಂದ್ಯಗಳಿಗಾಗಿ ತಿರುವನಂತಪುರಕ್ಕೆ ತಲುಪಿದ ಮೊದಲ ತಂಡ ದಕ್ಷಿಣ ಆಫ್ರಿಕಾ.

    ಮುಖ್ಯ ಪಂದ್ಯಾವಳಿಗೆ ಮುನ್ನ ಸೆಪ್ಟೆಂಬರ್ 29ರಂದು ತಿರುವನಂತಪುರಂನ ಗ್ರೀನ್‌ಫೀಲ್ಡ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ತೆಂಬಾ ಬವುಮಾ ನಾಯಕತ್ವದ ದಕ್ಷಿಣ ಆಫ್ರಿಕಾ ತಂಡವು ಅಫ್ಘಾನಿಸ್ತಾನ ತಂಡವನ್ನು ತಮ್ಮ ಮೊದಲ ಅಭ್ಯಾಸ ಪಂದ್ಯದಲ್ಲಿ ಎದುರಿಸಲಿದೆ.

    ಅಕ್ಟೋಬರ್ 2ರಂದು ಅದೇ ಸ್ಥಳದಲ್ಲಿ ದಕ್ಷಿಣ ಆಫ್ರಿಕಾ ತನ್ನ ಎರಡನೇ ಮತ್ತು ಅಂತಿಮ ಅಭ್ಯಾಸ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ವಿರುದ್ಧ ಸೆಣಸಲಿದೆ.2023ರ ಏಕದಿನ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವು ತಮ್ಮ ಸ್ಟಾರ್ ವೇಗಿ ಅನ್ರಿಚ್ ನಾರ್ಟ್ಜೆ ಇಲ್ಲದೆ ಕಣಕ್ಕಿಳಿಯಲಿದೆ. ಬೆನ್ನಿನ ನೋವಿನಿಂದಾಗಿ ಸ್ಟಾರ್ ವೇಗಿ ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ.

    ಹೆಬ್ಬೆರಳಿನ ಗಾಯದಿಂದಾಗಿ ಅನ್ರಿಚ್ ನಾರ್ಟ್ಜೆ 2019ರ ವಿಶ್ವಕಪ್‌ನಿಂದಲೂ ತಪ್ಪಿಸಿಕೊಂಡಿದ್ದರು ಎಂಬುದು ಗಮನಾರ್ಹ. ಮೊಣಕಾಲಿನ ಗಾಯದಿಂದಾಗಿ ಮತ್ತೊಬ್ಬ ವೇಗದ ಬೌಲರ್ ಸಿಸಂಡಾ ಮಗಲಾ ಕೂಡ ವಿಶ್ವಕಪ್ ಪಂದ್ಯಾವಳಿಯಿಂದ ಹೊರಗುಳಿಯಲಿದ್ದಾರೆ.

    ದಕ್ಷಿಣ ಆಫ್ರಿಕಾದ ವಿಶ್ವಕಪ್ ತಂಡದಲ್ಲಿ ಆಂಡಿಲ್ ಫೆಹ್ಲುಕ್ವಾಯೊ ಮತ್ತು ಲಿಜಾಡ್ ವಿಲಿಯಮ್ಸ್ ಅವರನ್ನು ನಾರ್ಟ್ಜೆ ಮತ್ತು ಮಗಾಲಾಗೆ ಬದಲಿಯಾಗಿ ಆಯ್ಕೆಯಾಗಿದ್ದಾರೆ.ತೆಂಬಾ ಬವುಮಾ ಪಡೆ ಅಕ್ಟೋಬರ್ 7ರಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಶ್ರೀಲಂಕಾ ವಿರುದ್ಧ ಪಂದ್ಯದೊಂದಿಗೆ ತನ್ನ ವಿಶ್ವಕಪ್ ಅಭಿಯಾನವನ್ನು ಆರಂಭಿಸಲಿದೆ.

    2019ರ ಏಕದಿನ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ಕಳಪೆ ಪ್ರದರ್ಶನ ನೀಡಿತ್ತು. ಒಂಬತ್ತು ಪಂದ್ಯಗಳಿಂದ ಕೇವಲ ಮೂರು ಗೆಲುವುಗಳೊಂದಿಗೆ, ಅವರು ಸೆಮಿಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲರಾಗಿದ್ದರು.

    ಆದರೆ, ಈ ಬಾರಿ ದಕ್ಷಿಣ ಆಫ್ರಿಕಾ ತಂಡವು ಕಳೆದ ಬಾರಿ ಪ್ರದರ್ಶನವನ್ನು ತಿದ್ದುಪಡಿ ಮಾಡುವ ಭರವಸೆ ಹೊಂದಿದೆ ಮತ್ತು ತಮ್ಮ ಚೊಚ್ಚಲ ವಿಶ್ವಕಪ್ ಟ್ರೋಫಿಯನ್ನು ಮುಡಿಗೇರಿಸಿಕೊಳ್ಳಲು ಎದುರು ನೋಡುತ್ತಿದೆ.

     ತೆಂಬಾ ಬವುಮಾ (ನಾಯಕ), ಜೆರಾಲ್ಡ್ ಕೋಟ್ಜಿ, ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರೀಜಾ ಹೆಂಡ್ರಿಕ್ಸ್, ಮಾರ್ಕೊ ಜಾನ್ಸೆನ್, ಹೆನ್ರಿಚ್ ಕ್ಲಾಸೆನ್, ಲಿಜಾಡ್ ವಿಲಿಯಮ್ಸ್, ಕೇಶವ್ ಮಹಾರಾಜ, ಡೇವಿಡ್ ಮಿಲ್ಲರ್, ಲುಂಗ್ ಎನ್‌ಗಿಡಿ, ಆಂಡಿಲೆ ಫೆಖುಲ್ವಾಯೊ, ಕಗಿಸೊ ರಬಾಡಾ, ತರ್ಬೈಜ್ ಶಮ್ಸಿ, ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap