ಮುಂಬೈ :
ಕಾರು ತಯಾರಕರು ಸದ್ಯ ಎಸ್‌ಯವಿಗಳಿಗೆ ನೀಡುವಷ್ಟೆ ಪ್ರಾಮುಖ್ಯತೆ ಎಂಪಿವಿಗಳಿಗೂ ನೀಡುತ್ತಿದ್ದು ಇದಕ್ಕೆ ಮುಖ್ಯ ಕಾರಣ ಭಾರತದ ಜನಸಂಖಯೆ ಹಾಗೂ ಕೌಟುಂಬಿಕ ಅವಶ್ಯಕತೆ ಮುಂಬರುವ ದಿನಗಳಲ್ಲಿ ಹಲವು ಎಂಪಿವಿಗಳು ಬಿಡುಗಡೆಗೆ ಸಜ್ಜಾಗುತ್ತಿವೆ. ಅದರಲ್ಲೂ ಮಾರುತಿಯಿಂದ ಭರ್ಜರಿ ಮೈಲೇಜ್ ನೀಡುವ ಮತ್ತೊಂದು ಎಂಪಿವಿ ಬಿಡುಗಡೆಯಾಗಲಿದೆ ಎಂದು ಕೆಲ ವರದಿಗಳು ಹೇಳಿವೆ.
ಪ್ರಸ್ತುತ ಮಾರುತಿ ಸುಜುಕಿ ಕಂಪನಿಯು ಭಾರತದ ಎಂಪಿವಿ ವಿಭಾಗದಲ್ಲಿ ತನ್ನ ಜನಪ್ರಿಯ ಎರ್ಟಿಗಾವನ್ನು ಮುನ್ನಡೆಸುತ್ತಿದೆ. ಇದರ ಬೆಲೆಯು ದೇಶಿಯ ಮಾರುಕಟ್ಟೆಯಲ್ಲಿ ರೂ.8.69 ಲಕ್ಷಗಳಿಂದ (ಎಕ್ಸ್ ಶೂರೂಂ) ಆರಂಭವಾಗಿ ಟಾಪ್ ಎಂಡ್ ವೇರಿಯೆಂಟ್ ಬೆಲೆಯು ರೂ.13.03 ಲಕ್ಷ (ಎಕ್ಸ್ ಶೋರೂಂ) ಗಳವೆರೆಗೆ ಇದೆ.
ಈಗ ಇದಕ್ಕಿಂತ ಕಡಿಮೆ ಬೆಲೆಗೆ ಹೊಸ ಕಾಂಪ್ಯಾಕ್ಟ್ ಎಂಪಿವಿಯನ್ನು ಪರಿಚಯಿಸಲು ಮಾರುತಿ ಸುಜುಕಿ ಸಜ್ಜಾಗುತ್ತಿದೆ. ಇದು ಬಿಡುಗಡೆಯಾದಲ್ಲಿ ಭಾರತದ ಅತ್ಯಂತ ಅಗ್ಗದ ಎಂಪಿವಿ ಎಂದು ಜನಪ್ರಿಯತೆ ಪಡೆಯಲಿದೆ. ಪ್ರಸ್ತುತ, ಈ ಕಾರಿಗೆ ‘ವೈಡಿಬಿ’ ಎಂಬ ಸಂಕೇತನಾಮವನ್ನು ನೀಡಲಾಗಿದೆ. ಬಿಡುಗಡೆ ಹತ್ತಿರವಾಗುತ್ತಿದ್ದಂತೆ ಹೆಸರನ್ನು ಬಹಿರಂಗಪಡಿಸಬಹುದು.
ಜಪಾನ್‌ನಲ್ಲಿ ಈಗಾಗಲೇ ಮಾರಾಟದಲ್ಲಿರುವ ಈ ಕಾರಿಗೆ ಸ್ಪೆಸಿಯಾ ಎಂದು ಕರೆಯಲಾಗುತ್ತದೆ. ಈ ಕಾರು ಭಾರತದಲ್ಲಿ ಬಿಡುಗಡೆಯಾದ್ರೆ ಜಪಾನ್ ಮಾದರಿಯಂತೆ ಎಲ್ಲಾ ಫೀಚರ್‌ಗಳನ್ನು ಒಳಗೊಂಡಿರಲಿದೆ ಎಂದು ಹೇಳುವುದು ಕಷ್ಟ. ಕಾರು ತಯಾರಕರು ಆಯಾ ದೇಶೀಯ ಮಾರುಕಟ್ಟೆಗಳಿಗೆ ಅನುಗುಣವಾಗಿ ಬೆಲೆಯನ್ನು ಆಧರಿಸಿ ಡಿಸೈನ್, ಫೀಚರ್‌ಗಳನ್ನು ನೀಡುತ್ತಾರೆ.
ಹಾಗೆಂದು ಸಂಫೂರ್ಣವಾಗಿ ಭಿನ್ನತೆಯನ್ನು ಪ್ರದರ್ಶಿಸುವುದಿಲ್ಲ, ಎರಡೂ ಮಾದರಿಗಳು ಬಹುತೇಕ ಸಾಮ್ಯತೆಗಳನ್ನು ಹೊಂದಿರುತ್ತವೆ. ವರದಿಗಳ ಪ್ರಕಾರ, ಹೊಸ ಮಾರುತಿ ಸುಜುಕಿ ಎಂಪಿವಿ ಜಪಾನ್ ಮತ್ತು ಇತರ ದೇಶಗಳಲ್ಲಿ ಕಾಂಪ್ಯಾಕ್ಟ್ ಎಂಪಿವಿ ಆಗಿರುವುದರಿಂದ, ಇದು 4 ಮೀಟರ್ ಗಿಂತ ಕಡಿಮೆ ಉದ್ದವಿರುತ್ತದೆ. ಮೂರು ಸಾಲಿನ ಆಸನ ವ್ಯವಸ್ಥೆಯೊಂದಿಗೆ ನೀಡಲಾಗುವುದು. ಆದ್ದರಿಂದ ಬಹಳಷ್ಟು ಜನರು ಮುಕ್ತವಾಗಿ ಪ್ರಯಾಣಿಸಬಹುದು.
ಪರ್ಫಾಮೆನ್ಸ್ ಬಗ್ಗೆ ಹೇಳುವುದಾದರೆ, ಇದು ಸ್ಟ್ರಾಂಗ್ ಹೈಬ್ರಿಡ್ ತಂತ್ರಜ್ಞಾನದೊಂದಿಗೆ 1.2-ಲೀಟರ್ ಝಡ್ ಸಿರೀಸ್ ಪೆಟ್ರೋಲ್ ಎಂಜಿನ್ ಹೊಂದಿದೆ. ಹೈಬ್ರಿಡ್ ಆಗಿರುವ ಕಾರಣ ಮೈಲೇಜ್ ಕೂಡ ಹೆಚ್ಚರಿಲಿದೆ, ಒಂದು ಅಂದಾಜಿನ ಪ್ರಕಾರ ಪ್ರತಿ ಲೀಟರ್‌ಗೆ ಸುಮಾರು 35 ಕಿ.ಮೀ ನೀಡಬಹುದು. ಈ ಕಾರಿನ ಮತ್ತೊಂದು ಹೈಲೈಟ್ ಏನೆಂದರೆ ಕಡಿಮೆ ಬೆಲೆಗೆ ಬರಲಿದೆ.ಮಾರುತಿ ಸುಜುಕಿ ಕಂಪನಿಯು ಈಗಾಗಲೇ ಎಂಪಿವಿ ವಿಭಾಗದಲ್ಲಿ ಎರ್ಟಿಗಾವನ್ನು ಹೊಂದಿದೆ. ಇದಕ್ಕಿಂತ ಕಡಿಮೆ ಬೆಲೆಗೆ ಹೊಸ ಎಂಪವಿಯನ್ನು ಪರಿಚಯಿಸಿಲಿದೆ. ಜೊತೆಗೆ ಇದು ರೆನಾಲ್ಟ್ ಟ್ರೈಬರ್‌ಗೆ ನೇರ ಪ್ರತಿಸ್ಪರ್ಧಿಯಾಗಲಿದೆ. ಹಾಗಾಗಿ 6.5 ಲಕ್ಷದಿಂದ 7 ಲಕ್ಷದೊಳಗೆ (ಎಕ್ಸ್ ಶೋರೂಂ) ಇದರ ಬೆಲೆ ಇರಲಿದೆ. ಮೂಲಗಳ ಪ್ರಕಾರ ಈ ಕಾರು 2026 ರಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.