ಜಯಾ ಬಚ್ಚನ್ ಗೆ ಖಡಕ್‌ ತಿರುಗೇಟು ನೀಡಿದ ಸ್ಪೀಕರ್‌ ….!

ನವದೆಹಲಿ:

   ರಾಜ್ಯಸಭೆಯಲ್ಲಿ ಸಮಾಜವಾದಿ ಪಕ್ಷದ ಸದಸ್ಯೆ ಜಯಾ ಬಚ್ಚನ್ ಮತ್ತೆ ತಮ್ಮ ಹೆಸರಿನ ವಿಚಾರವಾಗಿ ತಗಾದೆ ತೆಗೆದಿದ್ದು, ಈ ವೇಳೆ ಸ್ಪೀಕರ್ ಜಗದೀಪ್ ದಂಖರ್ ಖಡಕ್ ತಿರುಗೇಟು ನೀಡಿದ್ದಾರೆ.

   ಮತ್ತೆ ರಾಜ್ಯಸಭಾಧ್ಯಕ್ಷ ಜಗದೀಪ್ ಧನಕರ್ ಅವರು, ಜಯ ಬಚ್ಚನ್ ಅವರನ್ನು ಜಯಾ ಅಮಿತಾಬ್ ಬಚ್ಚನ್ ಎಂದು ಉಲ್ಲೇಖಿಸಿದಾಗ ಮತ್ತೆ ಜಯಾ ಬಚ್ಚನ್ ಹಳೇ ಕ್ಯಾತೆ ಶುರು ಮಾಡಿದ್ದಾರೆ. ತನ್ನನ್ನು ಆ ಹೆಸರಿನಿಂದ ಕರೆಯದಂತೆ ಅಧ್ಯಕ್ಷರಿಗೆ ಹೇಳಿದ್ದಾರೆ.   ರಾಜ್ಯಸಭೆಯಲ್ಲಿ ಇಂದು ಸಭಾಧ್ಯಕ್ಷರಾದ ಜಗದೀಪ್ ದಂಕರ್ ಜಯಾರನ್ನು ಉಲ್ಲೇಖಿಸಿ ‘ಜಯಾ ಅಮಿತಾಬ್ ಬಚ್ಚನ್’ ಎಂದು ಕರೆದರು. ಈ ವೇಳೆ ಮತ್ತೆ ಆಕ್ರೋಶಗೊಂಡ ಜಯಾ ತನ್ನನ್ನು ಆ ಹೆಸರಿನಿಂದ ಕರೆಯದಂತೆ ಅಧ್ಯಕ್ಷರಿಗೆ ಹೇಳಿದರು.

   ಕಳೆದ ಬಾರಿ ಇದೇ ವಿಚಾರಕ್ಕೆ ಹಾಸ್ಯ ಚಟಾಕಿ ಹಾರಿಸಿದ್ದ ಸಭಾಧ್ಯಕ್ಷ ಜಗದೀಪ್ ಧಂಕರ್ ಈ ಬಾರಿ ಗಂಭೀರರಾದಂತೆ ಕಂಡರು. ಅಲ್ಲದೆ ಜಯಾ ಬಚ್ಚನೆಗೆ ಸಾಂವಿಧಾನಿಕ ಸಲಹೆ ಕೂಡ ನೀಡಿದ್ದಾರೆ. ಜಯಾರನ್ನು ಉಲ್ಲೇಖಿಸಿ ಮಾತನಾಡಿದ ಧಂಕರ್, ‘ನೀವು ಹೆಸರು ಬದಲಾಯಿಸಿ, ನಾನು ಆಗ ಬದಲಾದ ಹೆಸರಿನಂತೆ ಕರೆಯುವೆ ಎಂದು ಉತ್ತರಿಸಿದ್ದಾರೆ. ಈ ವೇಳೆ ನನಗೆ ಅಮಿತಾಬ್ ಹೆಸರಿನ ಬಗ್ಗೆ ಹೆಮ್ಮೆ ಇದೆ ಅದೇ ಹೆಸರಿನೊಂದಿಗೆ ನನ್ನ ಗುರುತಿದೆ ಎಂದು ಹೇಳುತ್ತಿದ್ದ ಜಯಾ ಬಚ್ಚನ್ ಅವರನ್ನು ತಡೆದ ಜಗದೀಪ್ ಧನ್ಕರ್, ಎಲ್ಲಾ ಸದಸ್ಯರ ಗಮನಕ್ಕೆ, ಈ ಹೆಸರು ಚುನಾವಣಾ ಪ್ರಮಾಣಪತ್ರದಲ್ಲಿರುವ ಹೆಸರೇ ಆಗಿದೆ. ಇದನ್ನು ಇಲ್ಲಿ ಸಲ್ಲಿಕೆ ಮಾಡಲಾಗಿದೆ.

   ಇಲ್ಲಿ ಹೆಸರು ಬದಲಾಯಿಸಬೇಕು ಎಂಬ ಮನಸ್ಸಿದ್ದರೆ ಹೆಸರು ಬದಲಾಯಿಸುವ ಅವಕಾಶವೂ ಇದೆ. ಸ್ವತಃ ನಾನು 1989ರಲ್ಲಿ ಈ ಅವಕಾಶವನ್ನು ಬಳಸಿಕೊಂಡಿದ್ದೇನೆ. ಪ್ರತಿಯೊಬ್ಬ ಸದಸ್ಯರಿಗೂ ಈ ಅವಕಾಶವಿದೆ ಎಂದು ಜಗದೀಪ್ ಧನ್ಕರ್ ಹೇಳಿದ್ದಾರೆ. ಈ ವೇಳೆ ಮಧ್ಯ ಮಾತನಾಡಿದ ಜಯಾ ಬಚ್ಚನ್, ಇಲ್ಲ ಸರ್‌ ನನಗೆ ಈ ಹೆಸರಿನ ಬಗ್ಗೆ ಬಹಳ ಹೆಮ್ಮೆ ಇದೆ, ನನಗೆ ನನ್ನ ಗಂಡ ಹಾಗೂ ಅವರ ಸಾಧನೆ ಬಗ್ಗೆ ಹೆಮ್ಮೆ ಇದೆ ಎಂದು ಹೇಳಿದ್ದಾರೆ. ಈ ವೇಳೆ ಧನಕರ್, ಸೀಟಿನಲ್ಲಿ ಕುಳಿತುಕೊಳ್ಳುವಂತೆ ಜಯಾ ಬಚ್ಚನ್‌ಗೆ ಹೇಳಿದ್ದಾರೆ. ಈ ವೇಳೆ ಜಯಾ ಮೊದಲು ಹೀಗೆ ಕರೆಯುತ್ತಿರಲಿಲ್ಲ. ನೀವು ಹೊಸದಾಗಿ ಈ ನಾಟಕ ಶುರು ಮಾಡಿದ್ದೀರಿ ಎಂದು ದೂರಿದ್ದಾರೆ.

   ಅದಕ್ಕೆ ಪ್ರತಿಕ್ರಿಯಿಸಿದ ಧನಕರ್ 2004ರಲ್ಲಿ ನಾನು ಫ್ರಾನ್ಸ್‌ಗೆ ಹೊರಟಿದ್ದ ವೇಳೆ ಹೊಟೇಲೊಂದಕ್ಕೆ ಹೋಗಿದ್ದೆ ಅಲ್ಲಿ ಜಾಗತಿಕ ಪ್ರಸಿದ್ಧ ನಾಯಕರ ಫೋಟೋಗಳಿದ್ದವು. ಅಲ್ಲಿ ಅಮಿತಾಬ್ ಬಚ್ಚನ್ ಅವರ ಫೋಟೋ ಕೂಡ ಇತ್ತು. ಇಡೀ ದೇಶ ಮಾತ್ರವಲ್ಲ ಪ್ರಪಂಚವೇ ಅವರನ್ನು ಹೆಮ್ಮೆಯಿಂದ ಗುರುತಿಸುತ್ತಿದೆ. ನಾನು ಕೂಡ ನನ್ನ ಪತ್ನಿ ಸುದೇಷ್ಣ ಅವರ ಹೆಸರಿನಲ್ಲಿ ಹಲವು ಬಾರಿ ಗುರುತಿಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ. 

  ಮೊನ್ನೆಯಷ್ಟೇ ಅವರು ಸದನದಲ್ಲಿ ತಮ್ಮನ್ನು ಜಯಾ ಅಮಿತಾಬ್ ಬಚ್ಚನ್ ಎಂದು ಕರೆದ ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ ನಾರಾಯಣ್‌ ಸಿಂಗ್ ಅವರ ಮೇಲೆ ಕೋಪಗೊಂಡು ತನ್ನನ್ನು ಆ ರೀತಿ ಕರೆಯದಂತೆ ಕೇಳಿದ್ದರು. ಇದಾದ ನಂತರ ಮಾರನೇ ದಿನ ಸದನದಲ್ಲಿ ಮಾತನಾಡುವ ವೇಳೆ ಅವರೇ ತನ್ನ ಹೆಸರು ಜಯಾ ಅಮಿತಾಭ್ ಬಚ್ಚನ್ ಎಂದು ಹೇಳಿಕೊಂಡಿದ್ದರು.

  ಹೀಗೆ ಕರೆಯಬೇಡಿ ಎಂದು ರಾಜ್ಯಸಭಾ ಅಧ್ಯಕ್ಷರಿಗೆ ಹೇಳಿದ ಅವರು ಮತ್ತೆ ಅದೇ ಹೆಸರಿನಲ್ಲಿ ತಮ್ಮನ್ನು ಗುರುತಿಸಿಕೊಂಡಾಗ ಇಡೀ ರಾಜ್ಯಸಭೆ ಕಲಾಪದಲ್ಲಿ ಉಪಸ್ಥಿತರಿದ್ದ ಅಧ್ಯಕ್ಷರು ಸೇರಿದಂತೆ ಎಲ್ಲಾ ಸದಸ್ಯರು ಪಕ್ಷ ಬೇಧ ಮರೆತು ನಗಾಡಿದ್ದರು. ಈ ಹೆಸರಿನ ಪ್ರಸಂಗ ಅಲ್ಲಿಗೆ ಮುಗಿದೇ ಹೋಯ್ತು ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಇಂದು ಮತ್ತೆ ರಾಜ್ಯಸಭಾಧ್ಯಕ್ಷ ಜಗದೀಪ್ ಧನಕರ್ ಅವರು, ಜಯ ಬಚ್ಚನ್ ಅವರನ್ನು ಜಯಾ ಅಮಿತಾಬ್ ಬಚ್ಚನ್ ಎಂದು ಉಲ್ಲೇಖಿಸಿದಾಗ ಮತ್ತೆ ಜಯಾ ಬಚ್ಚನ್ ಕ್ಯಾತೆ ತೆಗೆದಿದ್ದಾರೆ.

Recent Articles

spot_img

Related Stories

Share via
Copy link
Powered by Social Snap