ಹುಬ್ಬಳ್ಳಿ:
ರಾಜ್ಯದಲ್ಲಿ ಲವ್ ಜಿಹಾದ್ ಪ್ರಕರಣಗಳು ಹೆಚ್ಚುತ್ತಿದ್ದು, ಸರ್ಕಾರ ಎಸ್ಐಟಿ ತನಿಖೆ ನಡೆಸಬೇಕು ಎಂದು ಬಿಜೆಪಿ ಶನಿವಾರ ಆಗ್ರಹಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು, ಕರ್ನಾಟಕ ಕೇರಳದ ಹಾದಿಯಲ್ಲಿ ಸಾಗುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಹುಬ್ಬಳ್ಳಿಯಲ್ಲಿ ಅಪ್ರಾಪ್ತೆಯನ್ನು ಮುಸ್ಲಿಂ ಯುವಕ ಗರ್ಭಿಣಿಯನ್ನಾಗಿಸಿರುವ ಹೇಯ ಕೃತ್ಯ ವರದಿಯಾಗಿದೆ’. ‘ಕಾಂಗ್ರೆಸ್ ಸರ್ಕಾರ ಇದೆ ಎಂಬ ಧೈರ್ಯ, ಜಿಹಾದಿ ಮನಸ್ಥಿತಿಯ ಕ್ರಿಮಿನಲ್ ಗಳನ್ನು ಉತ್ತೇಜಿಸುತ್ತಿದೆ’ ಎಂಬ ಆತಂಕ ಶಾಂತಿಪ್ರಿಯ ಕರುನಾಡ ಜನತೆಯನ್ನು ಕಾಡುತ್ತಿದೆ.
ರಾಜ್ಯದಲ್ಲಿ ಹಿಂದೂ ಹೆಣ್ಣುಮಕ್ಕಳಿಗೆ ರಕ್ಷಣೆಯಿಲ್ಲದಂತಾಗಿದೆ. ಕಣ್ಣೆದುರೇ ಮೂಲಭೂತವಾದಿ ಪುಂಡರು ಅಟ್ಟಹಾಸ ಮೆರೆಯುತ್ತಲೇ ಇದ್ದರೂ ಓಲೈಕೆ ರಾಜಕಾರಣಕ್ಕೆ ಜೋತುಬಿದ್ದಿರುವ ಕಾಂಗ್ರೆಸ್ ಸರ್ಕಾರ ಉದ್ದೇಶ ಪೂರ್ವಕ ನಿಷ್ಕ್ರೀಯತೆ ತೋರುತ್ತಿದೆ, ರಾಕ್ಷಸೀ ಪ್ರವೃತ್ತಿ ಮೆರೆಯುತ್ತಿರುವವರ ವಿರುದ್ಧ ಮೆದು ಧೋರಣೆ ಅನುಸರಿಸುತ್ತಿದೆ. ಇದರಿಂದ ಹೆಣ್ಣು ಮಕ್ಕಳ ಮೇಲೆ ನಿರಂತರ ಕ್ರೌರ್ಯ ಸರಣೀ ರೂಪದಲ್ಲಿ ಎಗ್ಗಿಲ್ಲದೇ ಸಾಗಿದೆ. ಹೆಣ್ಣು ಹೆತ್ತವರ ಆಕ್ರಂದನ ಅರಣ್ಯರೋಧನವಾಗಿದೆ, ಧೃತರಾಷ್ಟ್ರ ನಡವಳಿಕೆಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಧರ್ಮಯುದ್ಧದಲ್ಲಿ(ಲೋಕಸಮರ) ಜನ ಪಾಠ ಕಲಿಸಬೇಕಿದೆ ಎಂದು ಹೇಳಿದ್ದಾರೆ.